Saturday, April 25, 2020

ಉದ್ಯಮಿ ಆನಂದ ಮಹೀಂದ್ರಗೆ ‘ಇ’ ರಿಕ್ಷಾ ಖುಷಿ ಕೊಟ್ಟದ್ದು ಏಕೆ?

ಉದ್ಯಮಿ ಆನಂದ ಮಹೀಂದ್ರಗೆ  ‘ಇ’ ರಿಕ್ಷಾ ಖುಷಿ ಕೊಟ್ಟದ್ದು ಏಕೆ?
ನವದೆಹಲಿ: ಖ್ಯಾತ ವ್ಯವಹಾರೋದ್ಯಮಿ ಆನಂದ ಮಹೀಂದ್ರ ಅವರು ವಿಶ್ವಾದ್ಯಂತ ಜನರು ಹೇಗೆ ದೈನಂದಿನ ಕೆಲಸಗಳನ್ನು ಹಗುರಗೊಳಿಸುವಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುವ ಪೋಸ್ಟ್ಗಳನ್ನು ಹಂಚಿಕೊಳ್ಳುವುದಕ್ಕೆ ಹೆಸರುವಾಸಿಯಾದ ವ್ಯಕ್ತಿ.

ಅವರು ಇತ್ತೀಚೆಗೆ ಮಾಡಿರುವ ಒಂದು ಟ್ವೀಟ್ ಇಂತಹ ಹೊಸ ಕಲ್ಪನೆಯೊಂದರ ಸಾಧ್ಯತೆಯನ್ನು ತೆರೆದಿಟ್ಟಿದೆ. ಯಾರೋ ಒಬ್ಬ ವ್ಯಕ್ತಿ ತಮ್ಮ -ರಿಕ್ಷಾವನ್ನು ಈಗಿನ ದಿನದ ಅಗತ್ಯತೆಗಳಿಗೆ ಅನುಗುಣವಾಗಿ ಸಾಮಾಜಿಕ ಅಂತರ ಪಾಲನೆ ಮಾಡಲು ಯೋಗ್ಯವಾಗುವ ರೀತಿಯಲ್ಲಿ ಆಧುನೀಕರಿಸಿದ್ದನ್ನು ಟ್ವೀಟ್ ತೋರಿಸಿಕೊಟ್ಟಿತು.

ಮಹೀಂದ್ರ ಅವರು ಪುಟ್ಟ ವಿಡಿಯೋ ಒಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇದು ವಾಹನದ ವಿಶಿಷ್ಠತೆಯನ್ನು ತೋರಿಸಿಕೊಟ್ಟಿದೆ. ಅಷ್ಟೇ ಅಲ್ಲ ಮಹಿಂದ್ರ ಅವರು ಕಲ್ಪನೆಯನ್ನು ಹೊಗಳಿ, ಇಂತಹ ಹೊಸ ಹೊಸ ಸಂಶೋಧನಾ ಪ್ರವೃತ್ತಿ ಉಳ್ಳ ವ್ಯಕ್ತಿಗಳು ತಮ್ಮ ತಂಡಗಳಲ್ಲಿ ಇರುವುದು ಉತ್ತಮ ಎಂದು ಹೇಳಿದ್ದಾರೆ. ಇಂತಹವರಿಂದ ತಾವು ಕಲಿಯುವುದು ಬಹಳಷ್ಟಿದೆ ಎಂದೂ ಮಹೀಂದ್ರ ಹೇಳಿದರು.

ಮಹೀಂದ್ರ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಇರುವುದು ಸಾಮಾನ್ಯ -ರಿಕ್ಷಾವೇ. ಆದರೆ, ಇದನ್ನು ನಾಲ್ವರು ಪ್ರತ್ಯೇಕ ಕಂಪಾರ್ಟ್ಮೆಂಟುಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಪರಿಷ್ಕರಿಸಲಾಗಿದೆ. ಪರಿಷ್ಕರಣೆಯಿಂದಾಗಿ ನಾಲ್ವರು ವ್ಯಕ್ತಿಗಳು ಏಕಕಾಲಕ್ಕೆ ಒಂದೇ ವಾಹನದಲ್ಲಿ ಪರಸ್ಪರ ಸಂಪರ್ಕವೇ ಇಲ್ಲದಂತೆ ಸಂಚರಿಸಬಹುದು. ಕೊರೋನಾವೈರಸ್ಸಿನಿಂದಾಗಿ ಉದ್ಭವಿಸಿದ ಈಗಿನ ಸಾಮಾಜಿಕ ಅಂತರ ಪಾಲನೆಯ ಸನ್ನಿವೇಶದಲ್ಲಿ ಪರಿಷ್ಕೃತ ರಿಕ್ಷಾದ ಕಲ್ಪನೆ ಅಪ್ಯಾಯಮಾನ ಎನಿಸುತ್ತದೆ.

ಹೊಸ ಸಂದರ್ಭಕ್ಕೆ ಅನುಗುಣವಾಗಿ ಕ್ಷಿಪ್ರವಾಗಿ ಹೊಸದನ್ನು ಸಂಶೋಧಿಸಿ ಅದನ್ನು ಅಳವಡಿಸಿಕೊಳ್ಳುವ ನಮ್ಮ ಜನರ ಸಾಮರ್ಥ್ಯ ನನ್ನನ್ನು ವಿಸ್ಮಯಗೊಳಿಸುತ್ತದೆ ಎಂದೂ ಮಹೀಂದ್ರ ಟ್ವೀಟಿನಲ್ಲಿ ಬರೆದಿದ್ದಾರೆ.

ಮಹಿಂದ್ರ ಅಂಡ್ ಮಹಿಂದ್ರ ಲಿಮಿಟೆಡ್ ಆಟೋ ಮತ್ತು ಫಾರ್ಮ್ ಸೆಕ್ಟರ್ಗಳ ಕಾರ್ ನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರನ್ನೂ ಟ್ವೀಟಿಗೆ ಟ್ಯಾಗ್ ಮಾಡಿರುವ ಆನಂದ ಮಹೀಂದ್ರ ವ್ಯಕ್ತಿಯನ್ನು ನಮ್ಮ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಅಭಿವೃದ್ಧಿ ತಂಡಗಳಿಗೆ ಸಲಹೆಗಾರನಾಗಿ ಪಡೆಯುವ ಅಗತ್ಯವಿದೆ! ಎಂದೂ ಬರೆದರು.

ಶುಕ್ರವಾರ ಟ್ವೀಟ್ ಪ್ರಕಟವಾದ ಬಳಿಕ ಈವರೆಗೆ ವಿಡಿಯೋಕ್ಕೆ ೩೨,೦೦೦ ಲೈಕ್ಗಳು ಬಂದರೆ, ಟ್ವೀಟ್ ,೮೦೦ಕ್ಕೂ ಹೆಚ್ಚು ಬಾರಿ ರಿ ಟ್ವೀಟ್ ಆಗಿದ್ದು, ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಲವರು ಕಲ್ಪನೆಯನ್ನು ಶ್ಲಾಘಿಸಿದ್ದಾರೆ.

ಇದು ಕ್ವಾರಂಟೈನ್ ಟುಕ್-ಟುಕ್! ಬ್ರಿಲಿಯಂಟ್! ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಗತ್ಯವು ಸಂಶೋಧನೆಯ ತಾಯಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾಮಾಜಿಕ ಪ್ರತ್ಯೇಕತಾ ಸಾರಿಗೆ ವ್ಯವಸ್ಥೆ (ಸೋಷಿಯಲ್ ಐಸೋಲೇಷನ್ ಟ್ರಾನ್ಸಪೋರ್ಟೇಷನ್ ಸಿಸ್ಟಮ್) ಎಂದು ಮೂರನೇ ವ್ಯಕ್ತಿ ಬರೆದಿದ್ದಾರೆ.

ಇ-ರಿಕ್ಷಾ ನೋಡಲು ಈ ಕೆಳಗೆ  ಕ್ಲಿಕ್  ಮಾಡಿರಿ


No comments:

Advertisement