ಟಿಸಿಎಸ್ ಕೆಲಸ
ಕೊರೋನಾ ಬಳಿಕವೂ ಮನೆಯಿಂದಲೇ..!
ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವಾ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ೩.೫ ಲಕ್ಷ ನೌಕರರ ಪೈಕಿ ಬಹುತೇಕ ಮಂದಿಗೆ ಅಂದರೆ ಶೇಕಡಾ ೭೫ರಷ್ಟು ಮಂದಿಗೆ ೨೦೨೫ರ ವೇಳೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಿದೆ. ಪ್ರಸ್ತುತ ಕಂಪೆನಿಯಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಶೇಕಡಾ ೨೦ರಷ್ಟು ಮಾತ್ರ ಇದ್ದು ಇದೀಗ ಕೊರೋನಾವೈರಸ್ ತಂದಿರುವ ’ದೂರದಿಂದ ಕೆಲಸ’ದ ಕ್ರಾಂತಿಯನ್ನು ಕಾಯಂ ಆಗಿ ಅನುಸರಿಸಲು ಕಂಪೆನಿ ಯೋಚಿಸುತ್ತಿದೆ.
‘ಶೇಕಡಾ ೧೦೦ರಷ್ಟು ಉತ್ಪಾದನೆಗೆ ನಮ್ಮ ಶೇಕಡಾ ೨೫ಕ್ಕಿಂತ ಹೆಚ್ಚಿನ ನೌಕರರು ನಮ್ಮ ಕೇಂದ್ರಗಳಲ್ಲೇ ಕೆಲಸ ಮಾಡಬೇಕು ಎಂಬುದನ್ನು ನಾವು ನಂಬುವುದಿಲ್ಲ’
ಎಂದು ಟಿಸಿಎಸ್ ನ ಮುಖ್ಯ ಕಾರ್ಯಾಚರಣಾ
ಅಧಿಕಾರಿ ಎನ್ ಜಿ ಸುಬ್ರಮಣಿಯನ್ ಅವರು 2020 ಏಪ್ರಿಲ್
25ರ ಶನಿವಾರ ಇಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುತ್ತಾ ಹೇಳಿದರು.
ಹೊಸ ಮಾದರಿಯ ಪ್ರಕಾರ ಪ್ರತಿಯೊಬ್ಬ ನೌಕರನೂ ತಮ್ಮ ಕೆಲಸದ ವೇಳೆಯ ಶೇಕಡಾ ೨೫ರಷ್ಟನ್ನು ಮಾತ್ರ ಕಚೇರಿಯಲ್ಲಿ ಕಳೆಯಬೇಕು. ಇದು ತಂಡದ ಎಲ್ಲ ಸದಸ್ಯರಲ್ಲಿ, ಯೋಜನಾ ತಂಡದ ಶೇಕಡಾ ೭೫ ರಷ್ಟು ಮಾತ್ರ ಒಂದೇ ಸ್ಥಳದಲ್ಲಿರಬೇಕು ಎಂದು ಇದು ಸೂಚಿಸುತ್ತದೆ ಎಂದು ಅವರು ನುಡಿದರು.
ಲಾಕ್ಡೌನ್
ಘೋಷಿಸಿದ ನಂತರ ಸುರಕ್ಷಿತ ಬಾರ್ಡರ್ಲೆಸ್
ವರ್ಕ್ ಸ್ಪೇಸಸ್ (ಎಸ್ಬಿಡಬ್ಲ್ಯುಎಸ್)
ಎಂಬ ಆಂತರಿಕ ವೇದಿಕೆಯನ್ನು ಬಳಸಿಕೊಂಡು ಟಿಸಿಎಸ್ ತನ್ನ ೩.೫೫ ಲಕ್ಷ ಉದ್ಯೋಗಿಗಳಲ್ಲಿ ಶೇಕಡಾ ೯೦gಷ್ಟು ಮಂದಿಯನ್ನು ದೂರದ ಕೆಲಸಕ್ಕೆ (ರಿಮೋಟ್ ವರ್ಕಿಂಗ್) ಸ್ಥಳಾಂತರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವೇದಿಕೆಯನ್ನು ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗುತ್ತಿತ್ತು.
ಟಿಸಿಎಸ್ ನೇತೃತ್ವ ವಹಿಸಿರುವುದರಿಂದ ಇತರ ಭಾರತೀಯ ಐಟಿ ಕಂಪೆನಿಗಳು ಲಾಕ್ಡೌನ್ನಿಂದ ಕಲಿತ ಪಾಠಗಳನ್ನು ವ್ಯಾಪಾರ ಅಭ್ಯಾಸಗಲ್ಲಿ ಹೆಚ್ಚು ವೇಗವಾಗಿ ಮತ್ತು ವ್ಯಾಪಕವಾಗಿ ಬಳಕೆಗೆ ತರದೆ ಬೇರೆ ದಾರಿಯಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ನಂತರದ ಜಗತ್ತಿನಲ್ಲಿ ಪ್ರತಿ ಐದನೇ ಸಿಬ್ಬಂದಿ ಮನೆಯಿಂದ ಕೆಲಸ ಮಾಡಲು ಹೋಗಲಿದ್ದಾರೆ ಎಂದು ಸಿಎಫ್ಒಗಳು
ನಂಬಿದ್ದಾರೆ ಎಂದು ಕಳೆದ ತಿಂಗಳಲ್ಲಿ ನಡೆಸಿದ ಹಲವಾರು ಸಮೀಕ್ಷೆಗಳು ಸೂಚಿಸಿವೆ.
ಮನೆಯಿಂದ ಕೆಲಸ ಮಾಡಲು ಹೆಚ್ಚಿನ ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದರಿಂದ ವೆಚ್ಚವನ್ನು ಉಳಿಸಲು ಟಿಸಿಎಸ್ಗೆ
ಅನುಕೂಲವಾಗುತ್ತದೆ.
ಇದರಿಂದ ಈಗ ಹೊಂದಿರುವುದಕ್ಕಿಂತ ಕಡಿಮೆ ಕಚೇರಿ ಸ್ಥಳಾವಕಾಶ ಸಾಕಾಗುತ್ತದೆ.
"ನಾವು ಪ್ರಬಲವಾಗಿ ಹೊರಹೊಮ್ಮಿದ್ದೇವೆ ಮತ್ತು ನಮ್ಮ ಮಾದರಿ ಉತ್ತಮ ಎಂಬುದು ಹಿಂದೆಂದಿಗಿಂತಲೂ ಹೆಚ್ಚು ಸಾಬೀತಾಗಿದೆ" ಎಂದು
ಟಿಸಿಎಸ್ ಸಿಇಒ ಮತ್ತು ಆಡಳಿತ ನಿರ್ದೇಶಕ ರಾಜೇಶ್ ಗೋಪಿನಾಥನ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಕಚೇರಿಯಲ್ಲಿ ಶೇಕಡಾ ೨೫ ರಷ್ಟು ಉದ್ಯೋಗಿಗಳು ಕಡಿಮೆಯಾದರೆ ಕಚೇರಿ ಸ್ಥಳಾವಕಾಶದ ಅಗತ್ಯ ಶೇಕಡಾ ೧೫ ರಷ್ಟು ಕಡಿಮೆಯಾಗಬಹುದು. ಸಾಮಾನ್ಯ ಪ್ರದೇಶಗಳು ಅಥವಾ ಸೌಲಭ್ಯಗಳ ವಿಷಯದಲ್ಲಿ ಹೆಚ್ಚು ಕಡಿಮೆಯಾಗಲು ಸಾಧ್ಯವಾಗುವುದಿಲ್ಲ ಎಂದು ಅನರಾಕ್ ಕನ್ಸಲ್ಟಿಂಗ್ನ ಹಿರಿಯ ನಿರ್ದೇಶಕ ಅಶುತೋಷ್ ಲಿಮಯೆ ಹೇಳಿದರು.
No comments:
Post a Comment