ಕಲ್ಲಿದ್ದಲು, ಬಾಹ್ಯಾಕಾಶ, ರಕ್ಷಣೆ ಸೇರಿ ೮ ವಲಯಗಳತ್ತ ಗಮನ:
ಆರ್ಥಿಕ ಪ್ಯಾಕೇಜ್ ೪ ನೇ ಕಂತು
ನವದೆಹಲಿ: ಕೊರೋನಾವೈರಸ್ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ಸಂಕಟದಲ್ಲಿ ಸಿಲುಕಿದ ದೇಶದ ಆರ್ಥಿಕತೆಯನು ಸುಧಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಕೊಡುಗೆಯ ೪ನೇ ಕಂತಿನ ಉಪಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020
ಮೇ 16ರ ಶನಿವಾರ ಪ್ರಕಟಿಸಿದರು.
ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪನ್ನಗಳ ತಯಾರಿಕೆ, ವಿಮಾನ ನಿಲ್ದಾಣಗಳು ಮತ್ತು ವಾಯುವಲಯ ನಿರ್ವಹಣೆ, ವಾಣಿಜ್ಯ ವೈಮಾನಿಕ ಉದ್ಯಮದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್ ಒ), ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆ, ಬಾಹ್ಯಾಕಾಶ ವಲಯ ಹಾಗೂ ಪರಮಾಣು ಇಂಧನ ಸೇರಿಂತೆ ಎಂಟು ವಲಯಗಳಿಗೆ ನಾಲ್ಕನೇ ಹಂತದ ಕೊಡುಗೆಯಲ್ಲಿ ಉಪಶಮನ ಕ್ರಮಗಳನ್ನು ಪ್ರಕಟಿಸಲಾಯಿತು.
ವಿಶೇಷ ಆರ್ಥಿಕ ವಲಯ (ಎಸ್ಇಝಡ್),
ಕೈಗಾರಿಕಾ ಪಾರ್ಕ್ಗಳು
ಒಟ್ಟು ೫ ಲಕ್ಷ ಹೆಕ್ಟೇರುಗಳಲ್ಲಿ ವ್ಯಾಪಿಸಿದ್ದು, ಅವುಗಳನ್ನು ಗುರುತಿಸಲು ಸಾಧ್ಯವಾಗುವ ವ್ಯವಸ್ಥೆ ರೂಪಿಸುವ ಮೂಲಕ ಹೂಡಿಕೆದಾರರಿಗೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಲಾಗುವುದು ಎಂದು ಸಚಿವರು ನುಡಿದರು.
ನಾಲ್ಕನೇ ಹಂತರ ಸುಧಾರಣೆಗಳು ರಚನಾತ್ಮಕ ಸುಧಾರಣೆಗಳತ್ತ ಗಮನ ಹರಿಸಿದೆ ಎಂದು ನುಡಿದ ವಿತ್ತ ಸಚಿವೆ ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ನಾವು ಕಠಿಣ ಸ್ಪರ್ಧೆಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ ಮತ್ತು ಜಾಗತಿಕ ಮೌಲ್ಯ ಸರಪಣಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ನುಡಿದರು.
ತ್ವರಿತಗತಿಯ ಹೂಡಿಕೆಗಳನ್ನು ಕಳೆದ ಎರಡು ತಿಂಗಳುಗಳಲ್ಲಿ ಪ್ರಾರಂಭಿಸಲಾದ ನೀತಿ ಸುಧಾರಣೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ, ತ್ವರಿತ ಹೂಡಿಕೆಗೆ ನೀತಿ ಸುಧಾರಣೆಗಳು. ಸಶಕ್ತ ಗುಂಪು ಕಾರ್ಯದರ್ಶಿಗಳ ಮೂಲಕ ತ್ವರಿತ ಹೂಡಿಕೆಗಳಿಗೆ ಅನುವು ಮಾಡಿಕೊಡಲಾಗುತ್ತಿದೆ. ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ತಯಾರಿಸಲು, ಹೂಡಿಕೆದಾರರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯಗೊಳಿಸಲು ಪ್ರತಿ ಸಚಿವಾಲಯದಲ್ಲಿ ಯೋಜನಾ ಅಭಿವೃದ್ಧಿ ಕೋಶಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.
"ಕೈಗಾರಿಕಾ ಮೂಲಸೌಕರ್ಯಗಳ ಉನ್ನತೀಕರಣಕ್ಕಾಗಿ ಈಗಾಗಲೇ ಪ್ರಯತ್ನಗಳು ಪ್ರಾರಂಭವಾಗಿವೆ. ಈ ಬಗ್ಗೆ ಹೊಸದಾಗಿ ಮಾತನಾಡಬೇಕಾಗಿದೆ. ಕೈಗಾರಿಕಾ ಭೂ ಬ್ಯಾಂಕುಗಳು, ಕ್ಲಸ್ಟರ್ಗಳನ್ನು
ಬಹಳ ಹಿಂದೆಯೇ ಗುರುತಿಸಲಾಗಿದೆ. ಈಗ ತಂತ್ರಜ್ಞಾನವನ್ನು ಬಳಸುವುದರಿಂದ, ಈ ಕಂತಿನ ಮೂಲಕ ಈ ಕ್ಷೇತ್ರಗಳನ್ನು ಗುರುತಿಸಿದ್ದನ್ನು ಖಚಿತಪಡಿಸುತ್ತಿದ್ದೇವೆ" ಎಂದು
ನಿರ್ಮಲಾ ಸೀತಾರಾಮನ್ ನುಡಿದರು.
ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪನ್ನಗಳ ತಯಾರಿಕೆ, ವಿಮಾನ ನಿಲ್ದಾಣಗಳು ಮತ್ತು ವಾಯುವಲಯ ನಿರ್ವಹಣೆ, ವಾಣಿಜ್ಯ ವೈಮಾನಿಕ ಉದ್ಯಮದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್ ಒ), ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆ, ಬಾಹ್ಯಾಕಾಶ ವಲಯ ಹಾಗೂ ಪರಮಾಣು ಇಂಧನ ಸೇರಿಂತೆ ಎಂಟು ವಲಯಗಳು ರಚನಾತ್ಮಕ ಸುಧಾರಣೆಗಳನ್ನು ಸಾಧಿಸಲಿವೆ ಎಂದು ಸಚಿವರು ನುಡಿದರು.
ಕಲ್ಲಿದ್ದಲು ವಲಯ
ಸರ್ಕಾರದ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿರುವ ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಣ ಮಾಡಲಾಗುತ್ತದೆ. ವಾಣಿಜ್ಯೋದ್ದೇಶಿತ ಗಣಿಗಾರಿಕೆಗೆ ಆದಾಯ ಹಂಚಿಕೆ ಆಧಾರದ ಮೇಲೆ ಅವಕಾಶ ನೀಡಲಾಗುತ್ತದೆ. ನಿಗದಿತ ದಿನಕ್ಕಿಂತ ಮುಂಚಿತವಾಗಿಯೇ ಕಲ್ಲಿದ್ದಲು ಉತ್ಪಾದನೆಯಾದರೆ ಪ್ರೋತ್ಸಾಹ ನೀಡಲಾಗುತ್ತದೆ. ಭಾರತ ಜಗತ್ತಿನ ಮೂರನೇ ದೊಡ್ಡ ಪ್ರಮಾಣದ ಗಣಿಗಾರಿಕೆಯಾದ ಕಲ್ಲಿದ್ದಲು ಸಂಗ್ರಹ ಹೊಂದಿದೆ. ಹರಾಜು ಪ್ರಕ್ರಿಯೆಗಳ ಮೂಲಕ ಕೋಲ್ ಬೆಡ್ (ಕಲ್ಲಿದ್ದಲು ಸಂಗ್ರಹದ ಒಳಗಿನ ನೈಸರ್ಗಿ ಅನಿಲ) ಹೊರ ತೆರೆಯಲಾಗುತ್ತದೆ. ಹೊರ ತೆಗೆಯಲಾಗುವ ಕಲ್ಲಿದ್ದಲನ್ನು ಸ್ಥಳಾಂತರಿಸುವ ಮೂಲಸೌಕರ್ಯಕ್ಕಾಗಿ ೫೦,೦೦೦ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಖನಿಜ ವಲಯ
ಖನಿಜ ವಲಯದಲ್ಲಿ ಖಾಸಗಿ ಹೂಡಿಕೆಗಳನ್ನು ಹೆಚ್ಚಿಸಲಾಗುವುದು. "ಕ್ಷೇತ್ರಕ್ಕೆ
ಉತ್ತೇಜನ ನೀಡಲು ನಾವು ಇಲ್ಲಿಗೆ ತರಲು ಬಯಸುವ ವಲಯ ಸುಧಾರಣೆಯು ಈಗ ತಡೆರಹಿತ ಸಂಯೋಜಿತ ಪರಿಶೋಧನೆ-ಗಣಿಗಾರಿಕೆ- ಉತ್ಪಾದನೆ ಆಡಳಿತವನ್ನು ಹೊಂದಿದೆ. ಮುಕ್ತ ಮತ್ತು ಪಾರದರ್ಶಕ ಹರಾಜು ಪ್ರಕ್ರಿಯೆಯ ಮೂಲಕ ೫೦೦ ಗಣಿಗಾರಿಕೆ ಬ್ಲಾಕುಗಳನ್ನು ನೀಡಲಾಗುವುದು" ಎಂದು
ಸಚಿವರು ನುಡಿದರು.
ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಯಾರಿಗಾದರೂ ಬಾಕ್ಸೈಟ್ ಕಚ್ಚಾ ವಸ್ತುವಿನ ಅವಶ್ಯಕತೆ ಉಂಟಾದರೆ, ಅವರು ಪ್ರತ್ಯೇಕ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಾಗುತ್ತದೆ. ಇಂಥ ಹೊಂದಾಣಿಕೆಯಿರದ ನಿಯಮಗಳಿಂದಾಗಿ ಬಹಳಷ್ಟು ಜನರು ದೇಶದಿಂದ ಹೊರ ನಡೆದಿದ್ದಾರೆ. ಹೀಗಾಗಿ ಅಲ್ಯೂಮಿನಿಯಂ ಕೈಗಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಜೊತೆಯಾಗಿಯೇ ಒಂದೇ ಹರಾಜು ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಯುಮಿನಿಯಂ ಜೊತೆಯಲ್ಲಿಯೇ ಬಾಕ್ಸೈಟ್ ಅಥವಾ ಕಲ್ಲಿದ್ದಲನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಅಲ್ಯೂಮಿನಿಯಂ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನಾವು ಬಾಕ್ಸೈಟ್ ಮತ್ತು ಕಲ್ಲಿದ್ದಲು ಖನಿಜ ಬ್ಲಾಕುಗಳ ಜಂಟಿ ಹರಾಜನ್ನು ಪರಿಚಯಿಸುತ್ತೇವೆ. ಗಣಿಗಾರಿಕೆ ಗುತ್ತಿಗೆಗಳನ್ನು ವರ್ಗಾವಣೆ ಮಾಡಲು ಮತ್ತು ಹೆಚ್ಚುವರಿ ಬಳಕೆಯಾಗದ ಖನಿಜಗಳ ಮಾರಾಟಕ್ಕೆ ಅನುವು ಮಾಡಿಕೊಡಲು ಕ್ಯಾಪ್ಟಿವ್ ಮತ್ತು ಕ್ಯಾಪ್ಟಿವ್ ಅಲ್ಲದ ಗಣಿಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕುವ ಮೂಲಕ ಗಣಿಗಾರಿಕೆ ಮತ್ತು ಉತ್ಪಾದನೆಯಲ್ಲಿ ಉತ್ತಮ ದಕ್ಷತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಿರ್ಮಲಾ ನುಡಿದರು.
ಗಣಿಗಾರಿಕೆ ಸ್ಥಳದಿಂದ ಹೊರತೆಗೆಯಲಾದ ವಸ್ತುಗಳನ್ನು ಸಾಗಿಸಲು ಅನುಕೂಲ ಮಾಡಲು ಮೂಲಸೌಕರ್ಯ ವ್ಯವಸ್ಥೆ ಹಾಗೂ ಪರಿಸರ ಕಾಳಜಿ ತೋರಿದವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೧೮,೦೦೦ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತದೆ. ೫೦೦ ಗಣಿಗಾರಿಕೆ ಘಟಕಗಳಲ್ಲಿ ಪಾರದರ್ಶಕ ವ್ಯವಸ್ಥೆ ಕಲ್ಪಿಸುವುದು. ಗಣಿಗಾರಿಕೆ ಗುತ್ತಿಗೆಯನ್ನು ವರ್ಗಾಯಿಸಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ರಕ್ಷಣಾ ಉತ್ಪನ್ನಗಳ ತಯಾರಿಕೆ
ಮೇಕ್ ಇನ್ ಇಂಡಿಯಾ ಮತ್ತು ಸ್ವಾವಲಂಬನೆಯನ್ನು ಒಂದಕ್ಕೊಂದು ಜೊತೆಗೂಡಿಸಲಾಗಿದೆ. ರಕ್ಷಣಾ ಪಡೆಗಳಿಗೆ ಅತ್ಯುತ್ತಮ ಸಾಧನಗಳು ಅಗತ್ಯವಾಗುತ್ತವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಉಪಕರಣಗಳು, ಹೈಟೆಕ್ ಸಾಧನಗಳು ಅವಶ್ಯಕವಾದರೆ ಆಮದು ಮಾಡಿಕೊಳ್ಳಬಹುದಾಗಿರುತ್ತದೆ. ಶಸ್ತ್ರಾಸ್ತ್ರ ಹಾಗೂ ತಯಾರಿಕಾ ವ್ಯವಸ್ಥೆಗಳನ್ನು ಪಟ್ಟಿ ಮಾಡಲಾಗುತ್ತದೆ. ಆ ಪಟ್ಟಿಯಲ್ಲಿರುವುದನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಪಟ್ಟಿಯನ್ನು ವಿಸ್ತರಿಸಿ ಆಮದು ನಿಷೇಧಿಸಲಾಗುತ್ತದೆ.
ಆಮದು ಮಾಡಿಕೊಳ್ಳಲಾಗಿರುವ ವ್ಯವಸ್ಥೆಗಳಿಗೆ ಅಗತ್ಯ ಬಿಡಿ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಸ್ಥಳೀಯ ತಯಾರಿಕೆಗೆ ಸಂಬಂಧಿಸಿದಂತೆ ಮಿಲಿಟರಿ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚಿಸಿ ಪ್ರತ್ಯೇಕ ಬಜೆಟ್ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಪ್ರತ್ಯೇಕ ವಾಣಿಜ್ಯ ಉದ್ದೇಶಿತ ಸಂಸ್ಥೆಯಾಗಿ ಶಸ್ತ್ರಾಸ್ತ್ರ ತಯಾರಿಕೆ ಸಂಸ್ಥೆಗಳಿಗೆ ಒತ್ತು ನೀಡಲಾಗುತ್ತದೆ. ಕಾರ್ಪೊರೇಟೈಸೇಷನ್ ಎಂಬುದು ಖಾಸಗೀಕರಣಗೊಳಿಸುವುದು ಅಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿz ಸಚಿವೆ ರಕ್ಷಣಾ ವಲಯದಲ್ಲಿ ತಯಾರಿಕೆಗೆ ವಿದೇಶಿ ನೇರ ಬಂಡವಾಳವನ್ನು ಶೇ ೪೯ರಿಂದ ಶೇ ೭೪ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದರು.
ವಾಯುವಲಯ ನಿರ್ವಹಣೆ
ಈವರೆಗೂ ನಾವು ಬಳಸಿಕೊಂಡಿರುವ ವಾಯು ಮಾರ್ಗ ಹೆಚ್ಚು ದೂರದ್ದಾಗಿದ್ದು, ದೂರದ ಮಾರ್ಗಗಳ ಬಳಕೆಯಿಂದ ಸುತ್ತಾಡುವ ದೂರ ಹೆಚ್ಚುತ್ತದೆ, ಪ್ರಯಾಣಿಕರು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಪೈಲಟ್ ಹೆಚ್ಚುವರಿ ಹಾರಾಟ ನಡೆಸಬೇಕಾಗುತ್ತದೆ. ಸಮೀಪದ ಮಾರ್ಗ ಬಳಸಿದರೆ, ಈ ಎಲ್ಲದಕ್ಕಿಂತಲೂ ಮುಖ್ಯವಾಗಿ ಸಮಯದ ಉಳಿತಾಯವಾಗುತ್ತದೆ. ಅತಿ ಕಡಿಮೆ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ಮುಟ್ಟುತ್ತೇವೆ. ಈ ಹಿನ್ನೆಲೆಯಲ್ಲಿ ವಾಯಪ್ರದೇಶದ ಸಮರ್ಥ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ನುಡಿದರು.
ಆರು ವಿಮಾನ ನಿಲ್ದಾಣಗಳು ಹರಾಜಿಗಿವೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಏರ್ ಇಂಡಿಯಾ ಮುಂದುವರೆಯಲಿದೆ. ಖಾಸಗಿ ಸಂಸ್ಥೆಗಳಿಂದ ೧೨ ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ಹೂಡಿಕೆ ಅವಶ್ಯಕತೆ ಇದೆ. ವಿಮಾನ ನಿಲ್ದಾಣಗಳು ಇನ್ನಷ್ಟು ಉತ್ತಮಗೊಳ್ಳಲಿವೆ. ಇದರಿಂದ ೧೦೦೦ ಕೋಟಿ ರೂಪಾಯಿ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.
ಎಎಐ ಆರು ವಿಮಾನ ನಿಲ್ದಾಣಗಳ ಪೈಕಿ ಮೂರು ವಿಮಾನ ನಿಲ್ದಾಣಗಳನ್ನು ಪಿಪಿಪಿ ಆಧಾರದಲ್ಲಿ ಚಾಲನೆ ಮತ್ತು ನಿರ್ವಹಣೆಗಾಗಿ ನೀಡಿದೆ. ಎರಡನೇ ಸುತ್ತಿನ ತತ್ ಕ್ಷಣದ ಹರಾಜಿಗಾಗಿ ಇನ್ನೂ ೬ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ವಿಮಾನಗಳ ನಿರ್ವಹಣೆ, ರಿಪೇರಿ ಹಾಗೂ ಯಂತ್ರಗಳ ಪರೀಕ್ಷೆ, ಬದಲಾವಣೆ:
ವಿಮಾನಗಳ ನಿರ್ವಹಣೆ, ರಿಪೇರಿ ಹಾಗೂ ಯಂತ್ರಗಳ ಪರೀಕ್ಷೆ, ಬದಲಾವಣೆಗಳಿಗಾಗಿ (ಎಂಆರ್ಒ)
ಅವುಗಳನ್ನು ವಿದೇಶಗಳಿಗೆ ಒಯ್ಯಲಾಗುತ್ತಿದೆ. ದೇಶೀಯವಾಗಿ ಈ ಕಾರ್ಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಭಾರತಕ್ಕೆ ಸಾಮರ್ಥ್ಯ ಹಾಗೂ ಮಾನವ ಸಂಪನ್ಮೂಲದ ಬಲವಿದೆ. ನಾಗರಿಕ ವಿಮಾನಗಳ ಜೊತೆಗೆ ರಕ್ಷಣಾ ಪಡೆಗಳ ವಿಮಾನಗಳಿಗೂ ಇದರಿಂದ ಅನುಕೂಲವಾಗಲಿದೆ. ಎಲ್ಲ ವಿಮಾನಗಳ ನಿರ್ವಹಣಾ ವೆಚ್ಚವು ಇದರಿಂದ ಕಡಿಮೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.
ವಿದ್ಯುತ್ ವಿತರಣಾ ಕಂಪನಿಗಳು:
ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ವಿತರಣೆ ವಲಯ ಖಾಸಗೀಕರಣಗೊಳ್ಳಲಿದೆ. ಸಾಮರ್ಥ್ಯ ಹೆಚ್ಚಳ ಹಾಗೂ ಆ ಮೂಲಕ ಸೇವೆಯ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವರು ನುಡಿದರು.
ಗ್ರಾಹಕರ ಹಕ್ಕುಗಳು, ಕೈಗಾರಿಕೆಗಳ ಉತ್ತೇಜನ ಮತ್ತು ಕ್ಷೇತ್ರದ ಸುಸ್ಥಿರತೆಯು ಹೊಸ ಸುಂಕ ನೀತಿಯ ಪ್ರಮುಖ ಅಂಶಗಳಾಗಿವೆ" ಎಂದು
ಸಚಿವರು ಹೇಳಿದರು.
ಸಾಮಾಜಿಕ ಮೂಲಸೌಕರ್ಯ ಯೋಜನೆಗಳಿಗಾಗಿ ೮,೧೦೦ ಕೋಟಿ ರೂಪಾಯಿ
ಸಾಮಾಜಿಕ ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ೮,೧೦೦ ಕೋಟಿ ರೂ.Uಳಿಗೆ ಪರಿಷ್ಕರಿಸಲಾಗಿದೆ. ಸರ್ಕಾರವು ಕೇಂದ್ರ ಮತ್ತು ರಾಜ್ಯಗಳ ವಿಜಿಎಫ್ನಂತೆ
ಒಟ್ಟು ಯೋಜನಾ ವೆಚ್ಚದ ಶೇಕಡಾ ೩೦ ರಷ್ಟು ಕಾರ್ಯಸಾಧ್ಯತೆಯ ಅಂತರ ನಿಧಿಯ ಪ್ರಮಾಣವನ್ನು ಹೆಚ್ಚಿಸುತ್ತದೆ" ಎಂದು
ವಿತ್ತ ಸಚಿವರು ನುಡಿದರು.
ಬಾಹ್ಯಾಕಾಶ ವಲಯ
ಖಾಸಗಿ ವಲಯದಲ್ಲಿಯೂ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವು ಕಾರ್ಯಗಳು ನಡೆಯುತ್ತಿವೆ. ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಆದರೆ, ಅವರು ಇಸ್ರೊ ವ್ಯವಸ್ಥೆಯನ್ನು ಪರೀಕ್ಷಿಸುವ ಉದ್ದೇಶಗಳಿಗೂ ಬಳಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ನಿಯಮ ಹಾಗೂ ನಿಬಂಧನೆಗಳನ್ನು ಖಾಸಗಿಯವರಿಗಾಗಿ ರೂಪಿಸಲಾಗುತ್ತದೆ. ಅವರನ್ನು ನಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಗ್ರಹಗಳ ಸಂಶೋಧನೆ, ಬಾಹ್ಯಾಕಾಶ ಯಾನ ಇತ್ಯಾದಿ ಭವಿಷ್ಯದ ಯೋಜನೆUಳನ್ನು ಖಾಸಗಿ ವಲಯಕ್ಕೆ ತೆರೆಯಲಾಗುವುದು, ಟೆಕ್ ಉದ್ಯಮಿಗಳಿಗೆ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಒದಗಿಸಲು ಲಿಬರಲ್ ಜಿಯೋ-ಸ್ಪೇಸಿಯಲ್ ಡೇಟಾ ನೀತಿ ರೂಪಿಸಲಾಗುವುದು, ಖಾಸಗಿ ವಲಯಗಳು ತಮ್ಮ ಸಾಮರ್ಥ್ಯವನ್ನು ಸುಧಾರಿಸಲು ಇಸ್ರೋ ಸೌಲಭ್ಯಗಳು ಮತ್ತು ಇತರ ಸಂಬಂಧಿತ ಸ್ವತ್ತುಗಳನ್ನು ಬಳಸಲು ಅನುಮತಿ ನೀಡಲಾಗುವುದು ಮತ್ತು ಖಾಸಗಿಯವರಿಗೆ ಅನುಕೂಲಕರವಾದ ನೀತಿ ಮತ್ತು ನಿಯಂತ್ರಕ ವಾತಾವರಣವನ್ನು ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪರಮಾಣು ಇಂಧನ ಸಂಬಂಧಿತ ಸುಧಾರಣೆ
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸಂಶೋಧನಾ ರಿಯಾಕ್ಟರ್ ಸ್ಥಾಪನೆ. ಮೆಡಿಕಲ್ ಐಸೊಟೋಪ್ಗಳಿಗಾಗಿ
ಮಾತ್ರ ಬಳಕೆ. ಕ್ಯಾನ್ಸರ್ ಚಿಕಿತ್ಸೆಗಾಗಿಯೂ ಇದರಿಂದ ಉಪಯೋಗವಾಗಲಿದೆ. ಆಹಾರ ಸಂಸ್ಕರಣೆಗಾಗಿ ರೇಡಿಯೇಷನ್ ತಂತ್ರಜ್ಞಾನ ಬಳಕೆ. ಇದರಿಂದ ಕೃಷಿ ವಲಯಕ್ಕೆ ಸಹಕಾರಿಯಾಗಲಿದೆ ಎಂದು ನಿರ್ಮಲಾ ನುಡಿದರು.
No comments:
Post a Comment