Saturday, May 16, 2020

ಉ.ಪ್ರ.ದಲ್ಲಿ ಟ್ರಕ್ಕುಗಳ ಡಿಕ್ಕಿ: ೨೪ ವಲಸೆ ಕಾರ್ಮಿಕರ ಸಾವು

ಉ.ಪ್ರ.ದಲ್ಲಿ ಟ್ರಕ್ಕುಗಳ ಡಿಕ್ಕಿ: ೨೪ ವಲಸೆ ಕಾರ್ಮಿಕರ ಸಾವು
ಲಕ್ನೋ: ಎರಡು ಟ್ರಕ್ಕುಗಲು ಡಿಕ್ಕಿ ಹೊಡೆದ ಪರಿಣಾಮವಾಗಿ ೨೪ ಮಂದಿ ವಲಸೆ ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡ ಘಟನೆ ಉತ್ತರ ಪ್ರದೇಶದಲ್ಲಿ  2020 ಮೇ 16ರ ಶನಿವಾರ ನಸುಕಿನಲ್ಲಿ ಘಟಿಸಿತು.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ೨೦೦ ಕಿ.ಮೀ ದೂರದಲ್ಲಿ, ನಸುಕಿನ ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. 

ವಲಸೆ ಕಾರ್ಮಿಕರು ರಾಜಸ್ಥಾನದಿಂದ ಟ್ರಕ್ಕಿನಲ್ಲಿ  ಬಿಹಾರ ಮತ್ತು ಜಾರ್ಖಂಡಿಗೆ ಹೊರಟಿದ್ದರು. ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ದೇಶದಾದ್ಯಂತ ದಿಗ್ಬಂಧನ (ಲಾಕ್ ಡೌನ್) ಜಾರಿಯಾದ ಬಳಿಕ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು. ಹಿನ್ನೆಲೆಯಲ್ಲಿ ಅವರು ತಮ್ಮ ಹುಟ್ಟೂರಿಗೆ ವಾಪಸ್ ಹೊರಟಿದ್ದರು.

ಅಪಘಾತದಲ್ಲಿ ೨೪ ಜನರು ಮೃತರಾಗಿದ್ದಾರೆ. ೨೨ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ೧೫ ಜನರನ್ನು ಉತ್ತರ ಪ್ರದೇಶದ ಗ್ರಾಮೀಣ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಒಯ್ಯಲಾಗಿದೆ. ವಲಸೆ ಕಾರ್ಮಿಕರು ರಾಜಸ್ಥಾನದಿಂದ ಬಿಹಾರ ಮತ್ತು ಜಾರ್ಖಂಡಿಗೆ ತೆರಳುತ್ತಿದ್ದರು ಎಂದು ಮುಖ್ಯ ವೈದ್ಯಾಧಿಕಾರಿ ಅರ್ಚನಾ ಶ್ರೀವಾಸ್ತವ ತಿಳಿಸಿದರು.

ಪ್ರಧಾನಿ ಮೋದಿ ಸಂತಾಪ
ಉತ್ತರಪ್ರದೇಶದ ರಾಜ್ಯದ ರಾಜಧಾನಿ ಲಕ್ನೋದಿಂದ ೨೦೦ ಕಿ.ಮೀ ದೂರದ ಔರೈಯ ಜಿಲ್ಲೆಯಲ್ಲಿ ೨೪ ಮಂದಿಯನ್ನು ಬಲಿ ತೆಗೆದುಕೊಂಡು ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಉತ್ತರ ಪ್ರದೇಶದ ಔರೈಯದಲ್ಲಿ ಸಂಭವಿಸಿದ ಅಪಘಾತ ಅತ್ಯಂತ ದುಃಖಕರ. ರಸ್ತೆ ಅಪಘಾತದ ಪರಿಹಾರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ಭಾಗಿಯಾಗಿದೆ. ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಹಾಗೆಯೇ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಔರೈಯ ಜಿಲ್ಲೆಯಲ್ಲಿ ಮುಂಜಾನೆ ಗಂಟೆ ಸುಮಾರಿಗೆ ಎರಡು ಟ್ರಕ್ಕುಗಳು ಪರಸ್ಪರ ಡಿಕ್ಕಿ ಹೊಡೆದು, ೨೪ ವಲಸೆ ಕಾರ್ಮಿಕರು ಮೃತರಾಗಿ ಕನಿಷ್ಠ ೩೮ ಮಂದಿ ಗಾಯಗೊಂಡಿದ್ದಾರೆ.
ಕೊರೊನಾವೈರಸ್ ದಿಗ್ಬಂಧನದಿಂದಾಗಿ ಸಿಕ್ಕಿಬಿದ್ದಿದ್ದ ವಲಸೆ ಕಾರ್ಮಿಕರ ಪ್ರತ್ಯೇಕ ತಂಡಗಳು ತಮ್ಮ ಮನೆಗಳಿಗೆ ತೆರಳಲು ರಾಜಸ್ಥಾನ ಮತ್ತು ದೆಹಲಿಯಿಂದ ಬರುವ ಟ್ರಕ್ಕುಗಳನ್ನು ಏರಿದ್ದರು. 

ಕಾರ್ಮಿಕರಲ್ಲಿ ಹಲವರು ಟ್ರಕ್ವೊಂದರಲ್ಲಿ ಸಾಗಿಸುತ್ತಿದ್ದ ಸರಕು ಚೀಲಗಳ ಮೇಲೆ ಕುಳಿತಿದ್ದರು. ಡಿಕ್ಕಿಯ ರಭಸಕ್ಕೆ ಅವರಲ್ಲಿ ಕೆಲವರು ವಾಹನದಿಂದ ಕೆಳಗೆ ಬಿದ್ದರೆ, ಮತ್ತೆ ಕೆಲವರು ಘರ್ಷಣೆಯಿಂದಾಗಿ ಚೀಲಗಳ ಕೆಳಗೆ ಸಿಲುಕಿಕೊಂಡಿದ್ದರು. ವಲಸಿಗರನ್ನು ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿರುವ ಅವರ ಮನೆಗಳಿಗೆ ಕರೆದೊಯ್ಯಲಾಗುತ್ತಿತ್ತು.

No comments:

Advertisement