Sunday, July 26, 2020

ಚೀನಾಕ್ಕೆ ತಿರುಗುಬಾಣ: ಭೂತಾನ್ ಜೊತೆಗಿನ ಹೊಸ ಜಗಳ

ಚೀನಾಕ್ಕೆ ತಿರುಗುಬಾಣ: ಭೂತಾನ್ ಜೊತೆಗಿನ  ಹೊಸ ಜಗಳ

ನವದೆಹಲಿ: ಭಾರತಕ್ಕೆ ಕಿರಿ ಕಿರಿ ಉಂಟು ಮಾಡುವ ಉದ್ದೇಶದಿಂದ ಭೂತಾನ್ ಜೊತೆಗೆ ಹೊಸ ತಗಾದೆ ಆರಂಭಿಸಿರುವ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರವಿಸ್ತರಣಾ ತಂತ್ರಗಾರಿಕೆ ಸ್ವತಃ ಚೀನಾಕ್ಕೆ ತಿರುಗುಬಾಣವಾಗಿದ್ದು, ಹಿಮಾಲಯದ ಪುಟ್ಟ ರಾಜ್ಯ ಭೂತಾನ್ ಭಾರತಕ್ಕೆ ಸಮೀಪವಾಗುವ ಲಕ್ಷಣಗಳು ಕಂಡು ಬಂದಿವೆ.

೨೦೧೭ರ ಡೊಕ್ಲಾಮ್ ಬಿಕ್ಕಟ್ಟಿನ ವೇಳೆಯಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಥಿಂಪು ಚೀನಾ ಅಥವಾ ಭಾರತದ ಜೊತೆಗಿನ ಸಾಮೀಪ್ಯದ ಬಗ್ಗೆ ಮರುಚಿಂತನೆ ನಡೆಸಿತ್ತು ಎಂದು ಸುದ್ದಿ ಮೂಲಗಳು  2020 ಜುಲೈ 26ರ ಭಾನುವಾರ ತಿಳಿಸಿವೆ.

ಬೌಗೋಳಿಕವಾಗಿ ಭಾರತ ಮತ್ತು ಚೀನಾದ ಮಧ್ಯೆ ಇರುವ ಭೂತಾನ್, ತನ್ನ ಗಡಿಯಾಚೆಗಿನ ಎರಡು ದೇಶಗಳ ಜೊತೆಗೆ ಸಮತೋಲನವನ್ನು ಕಾಪಾಡಿಕೊಂಡು ಬರಬೇಕು ಎಂಬುದಾಗಿ ಯೋಚಿಸಿತ್ತು. ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳದೇ ಇದ್ದರೂ ಕಳೆದ ಎರಡು ಮೂರು ವರ್ಷಗಳಿಂದ ಭೂತಾನ್ ಅರಸೊತ್ತಿಗೆ ಇಂತಹ ಯೋಚನೆಯತ್ತ ಹೆಚ್ಚು ವಾಲಿತ್ತು ಎಂದು ಮೂಲಗಳು ಹೇಳಿವೆ.

ಆದರೆ, ಕಳೆದ ಒಂದು ತಿಂಗಳಿನಿಂದ ಈಚೆಗೆ, ಥಿಂಪುವಿನ ಧೋರಣೆಯಲ್ಲಿ ಬದಲಾವಣೆ ಆಗಿದೆ. ಇದಕ್ಕೆ ಕಾರಣವಾದದ್ದು ಸಕ್ತೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಥಿಂಪು ಅಮೆರಿಕ ಮೂಲದ ಬಹುರಾಷ್ಟ್ರೀಯ ನಿಧಿಯಾಗಿರುವ ಜಾಗತಿಕ ಪರಿಸರ ಸವಲತ್ತು (ಗ್ಲೋಬಲ್ ಎನ್ವಿರಾನ್‌ಮೆಂಟ್ ಫೆಸಿಲಿಟಿ) ಜೊತೆಗಿನ ಸಭೆಯಲ್ಲಿ ಕೋರಿದಾಗ ಚೀನಾ ಪ್ರದರ್ಶಿಸಿದ ವರ್ತನೆ.

ಸಭೆಯಲ್ಲಿ ಚೀನಾದ ಪ್ರತಿನಿಧಿ ೬೫೦ ಚದರ ಕಿಮೀ ವಿಸ್ತಾರದ ವನ್ಯಜೀವಿ ಅಭಯಾರಣ್ಯದ ಭಾಗವೊಂದಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭೂತಾನ್ ಮಧ್ಯೆ ವಿವಾದವಿದೆ ಎಂಬುದಾಗಿ ಪ್ರತಿಪಾದಿಸಿದ್ದು ಭೂತಾನ್ನು ದಿಗ್ಭ್ರಮೆಗೊಳಿಸಿತ್ತು.

ಭೂತಾನಿನಲ್ಲಿ ನೂತನ ಪ್ರಾದೇಶಿಕ ಹಕ್ಕು ಪ್ರತಿಪಾದನೆ ಮಾಡಲು ಚೀನಾ ಇಟ್ಟಿರುವ ಹೆಜ್ಜೆಯು, ತನಗಿಂತ ೨೫೦ ಪಟ್ಟು ದೊಡ್ಡದಾಗಿರುವ ಉತ್ತರದ ನೆರೆ ರಾಷ್ಟ್ರದ ಮೇಲೆ ತಾನು ಯಾವುದೇ ಭರವಸೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಭೂತಾನಿಗೆ ಖಚಿತ ಪಡಿಸಿತು. ಚೀನಾದ ಪ್ರತಿಪಾದನೆಯನ್ನು ಒಪ್ಪಿದ್ದೇ ಆದರೆ, ಅದರಿಂದ ಚೀನಾದ ಪ್ರಾದೇಶಿಕ ಮಹತ್ವಾಕಾಂಕ್ಷೆಯ ಕಿಚ್ಚಿಗೆ ತುಪ್ಪ ಎರೆದಂತಾದೀತು ಎಂಬುದು ಭೂತಾನ್‌ಗೆ ಅರ್ಥವಾಯಿತು ಎಂದು ಮೂಲಗಳು ಹೇಳಿವೆ.

ಚೀನೀ ಪ್ರತಿಪಾದನೆ ವಿರುದ್ಧ ಥಿಂಪು ದೆಹಲಿಯಲ್ಲಿ ಚೀನೀ ರಾಜತಾಂತ್ರಿಕ ಕಚೇರಿಗೆ ತನ್ನ ಔಪಚರಿಕ ಪ್ರತಿಭಟನೆಯನ್ನು ಸಲ್ಲಿಸಿತು. ಭೂತಾನ್ ಮತ್ತು ಬೀಜಿಂಗ್ ತಮ್ಮ ಸಂಪರ್ಕಕ್ಕಾಗಿ ಸಾಮಾನ್ಯವಾಗಿ ಬಳಸುವುದು ದೆಹಲಿಯಲ್ಲಿನ ತಮ್ಮ ರಾಜತಾಂತ್ರಿಕ ಕಚೇರಿಗಳನ್ನೇ. ಇದಲ್ಲದೆ, ತಿಂಗಳ ಆದಿಯಲ್ಲಿ ಭೂತಾನ್ ಅತ್ಯಪರೂಪದ ಹೇಳಿಕೆಯೊಂದನ್ನು ಕೂಡಾ ಬಿಡುಗಡೆ ಮಾಡಿ ಗುರುತು ಮಾಡದ ಗಡಿಯ ಜಗಳದ ಬಗ್ಗೆ ಮುಂದಿನ ಸುತ್ತಿನ ಗಡಿ ಮಾತುಕತೆಗಳಲ್ಲಿ ಚರ್ಚಿಸಲಾಗುವುದು ಎಂದೂ ತಿಳಿಸಿತು.

ಭೂತಾನ್ ಚೀನಾದ ಜೊತೆಗೆ ೧೯೮೪ರಿಂದೀಚೆಗೆ ಗಡಿ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ೨೪ ಸುತ್ತಿನ ಮಾತುಕತೆ ನಡೆಸಿದೆ. ಕಟ್ಟ ಕಡೆಯ ಮಾತುಕತೆ ೨೦೧೬ರಲ್ಲಿ ನಡೆದಿತು. ಸುಮಾರು ೨೦ ವರ್ಷಗಳ ಅವಧಿಗಾಗಿ ಪ್ಯಾಕೇಜ್ ವ್ಯವಹಾರವನ್ನು ಅಂಗೀಕರಿಸುವಂತೆ ಚೀನಾವು ಭೂತಾನ್ ಮೇಲೆ ಒತ್ತಡ ಹಾಕುತ್ತಿದೆ. ಭೂತಾನ್ ಇದನ್ನು ಒಪ್ಪಿದರೆ ಭೂತಾನಿನ ಶ್ಚಿಮ ವಲಯದ ೨೬೯ ಕಿಮೀ ಗಡಿಯಲ್ಲಿನ ಡೊಕ್ಲಾಮ್, ಸಿಂಚುಲುಂಗ್, ಡ್ರಮನ ಮತ್ತು ಶಾಖಾತೋ ಪ್ರದೇಶಗಳನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಳ್ಳುವುದು. ಇದಕ್ಕೆ ಬದಲಾಗಿ ಚೀನಾವು ಉತ್ತರದಲ್ಲಿನ ಭೂತಾನಿನ ಪಸಂಲುಂಗ್ ಮತ್ತ ಜಕರ್ ಲುಂಗ್ ಕಣಿವೆಗಳ ಮೇಲಿನ ತನ್ನ ಹಕ್ಕನ್ನು ಬಿಟ್ಟು ಕೊಡುವುದು.

ಪೂರ್ವ ಭೂತಾನಿನ ಟ್ರಾಶಿಗಾಂಗ್ ಜಿಲ್ಲೆಯ ೬೫೦ ಕಿಮೀ ಉದ್ದದ ನೈಸರ್ಗಿಕ ವನ್ಯಜೀವಿ ಅಭಯಾರಣ್ಯದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಯು ಉಭಯ ದೇಶಗಳ ನಡುವಣ ಹಾಲಿ ವಿವಾದಿತ ವ್ಯಾಪ್ತಿಯ ಪ್ರದೇಶದ ದುಪ್ಪಟ್ಟು ಆಗುತ್ತದೆ.

ಭೂತಾನ್ ಇನ್ನೂ ವನ್ಯಜೀವಿ ಅಭಯಾರಣ್ಯದ ಮೂಲಕವಾಗಿ ರಸ್ತೆ ನಿರ್ಮಿಸುವ ಭಾರತದ ಪ್ರಸ್ತಾಪದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ರಸ್ತೆ ನಿರ್ಮಾಣದಿಂದ ಗುವಾಹತಿ ಮತ್ತು ಅರುಣಾಚಲ ಪ್ರದೇಶ ತವಾಂಗ್ ನಡುವಣ ದೂರ ೪೫೦ ಕಿಮೀಗಳಷ್ಟು ಅಂದರೆ ಬಹುತೇಕ ಮೂರನೇ ಒಂದರಷ್ಟು ಇಳಿಯುವ ನಿರೀಕ್ಷೆಯಿದೆ.

ಗಡಿಯಲ್ಲಿ ಮೂಲಸವಲತ್ತು ವೃದ್ಧಿಗೆ ತೀವ್ರ ಗಮನ ಹರಿಸಿರುವ ಭಾರತವು ಥಿಂಪು ಜೊತೆಗೆ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

No comments:

Advertisement