ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇಕಡಾ ೬೪ಕ್ಕೆ
ಒಟ್ಟು ಸೋಂಕಿತರು ೧೩.೮೫ ಲಕ್ಷ, ಚೇತರಿಕೆ ೮,೮೫,೫೨೬ ಲಕ್ಷ
ನವದೆಹಲಿ: ಹೊಸದಾಗಿ ೪೮,೦೦೦ ಪ್ರಕರಣಗಳೊಂದಿಗೆ ಭಾರತದ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಜುಲೈ 26ರ ಭಾನುವಾರ ೧೩.೮೫ ಲಕ್ಷಕ್ಕೆ ಏರಿದೆ. ಇದೇ ವೇಳೆಗೆ ಗುಣಮುಖರಾಗಿ ಚೇತರಿಸಿದವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೪ಕ್ಕೆ ಏರಿದೆ.
೬೮ ದಿನಗಳ ಕಠಿಣ ದಿಗ್ಬಂಧನದ (ಲಾಕ್ ಡೌನ್) ಬಳಿಕ ವಿಧಿಸಲಾಗಿರುವ ಅನ್ಲಾಕ್ ೨.೦ ಜುಲೈ ೩೧ರಂದು ಮುಕ್ತಾಯಗೊಳ್ಳಲಿದ್ದು, ಮುಂದಿನ ವಾರ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದೆ. ಆದರೆ ಮುಂದಿನ ಹಂತದಲ್ಲಿ ಶಾಲೆಗಳನ್ನು ಪುನಾರಂಭಿಸಲು ಕೇಂದ್ರವು ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಜಿಮ್‌ಗಳು, ಈಜುಕೊಳಗಳು, ಮೆಟ್ರೋ ರೈಲು ಸೇವೆಗಳು ಮತ್ತು ದೊಡ್ಡ ಸಭೆUಳ ಮೇಲಿನ ನಿಷೇಧ ಮುಂದುವರೆಯಬಹುದು ಎಂದು ಮೂಲಗಳು ಹೇಳಿವೆ.
ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆ ಪ್ರಕಾರ ದೇಶವು ಶನಿವಾರ ಮತ್ತು ಭಾನುವಾರದ ನಡುವೆ ೪೮,೬೬೧ ಹೊಸ ಪ್ರಕರಣಗಳು ಮತ್ತು ೭೦೫ ಸಾವುಗಳನ್ನು ದಾಖಲಿಸಿದೆ. ಇದರೊಂದಿಗೆ ಸೋಂಕಿನ ಸಂಖ್ಯೆ ೧೩,೮೫,೫೨೨ ಕ್ಕೆ ತಲುಪಿದೆ.
ಕಳೆದ ೨೪ ಗಂಟೆಗಳಲ್ಲಿ ೩೬,೧೪೫ ಜನರು ವೈರಲ್ ಕಾಯಿಲೆಯಿಂದ ಗುಣಮುಖರಾಗಿದ್ದರಿಂದ ಚೇತರಿಕೆಯ ಸಂಖ್ಯೆ ೮,೮೫,೫೭೬ ಕ್ಕೆ ಏರಿದೆ. ಇದರಿಂದಾಗಿ ಚೇತರಿಕೆಯ ಪ್ರಮಾಣ ಶೇಕಡಾ ೬೩.೯೧ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೪೬೭,೮೮೨ ಮತ್ತು ಚೇತರಿಸಿಕೊಂಡ ಜನರ ನಡುವಿನ ಅಂತರವು ಮತ್ತಷ್ಟು ೪,೧೭,೬೯೪ ಕ್ಕೆ ವಿಸ್ತರಿಸಿದೆ.
ಭಾರತದಲ್ಲಿ ಒಂದೇ ದಿನದಲ್ಲಿ ಸುಮಾರು ೪೨೦,೦೦೦ ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ, ಜುಲೈ ಆರಂಭದಲ್ಲಿ ೨೨೦,೦೦೦ gಷ್ಟಿದ್ದ ದೈನಂದಿನ ಪರೀಕ್ಷಾ ಸಾಮರ್ಥ್ಯ ಇದೀಗ ದುಪ್ಪಟ್ಟಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ ಈವರೆಗೆ ೧೬ ದಶಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ.
ಹೆಚ್ಚಿದ ಪರೀಕ್ಷೆಯು ದತ್ತಾಂಶದ ಪ್ರಕಾರ, ಪ್ರತಿ ಮಿಲಿಯನ್‌ಗೆ ಭಾರತದ ಪರೀಕ್ಷೆಗಳನ್ನು ೧೧,೪೮೫ ಕ್ಕೆ ಏರಿಸಿದೆ. ಅಮೆರಿಕದಲ್ಲಿ ಪ್ರತಿ ಮಿಲಿಯನ್‌ಗೆ ೧೫೮,೯೮೧ ಪರೀಕ್ಷೆಗಳು ಮತ್ತು ಬ್ರೆಜಿಲ್‌ನಲ್ಲಿ ಪ್ರತಿ ಮಿಲಿಯನ್‌ಗೆ ೨೩,೦೯೪ ಪರೀಕ್ಷೆ ನಡೆಯುತ್ತಿದೆ. ಸಾಂಕ್ರಾಮಿಕ ರೋಗದಿಂದ ಅತಿ ಬಾಧಿತವಾದ ಎರಡು ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಸೇರಿವೆ.
"ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ" ಕಾರ್ಯತಂತ್ರವನ್ನು ಮುಂದುವರೆಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಸಲಹೆ ನೀಡಿದೆ.
"ಆಕ್ರಮಣಕಾರಿ ಪರೀಕ್ಷೆಯು ಆರಂಭದಲ್ಲಿ ಹೆಚ್ಚಿನ ಸಂಖ್ಯೆಯ ದೈನಂದಿನ ಪಾಸಿಟಿವ್ ಪ್ರಕರಣಗಳಿಗೆ ಕಾರಣವಾಗಬಹುದು ಆದರೆ ದೆಹಲಿಯ ಎನ್‌ಸಿಟಿ [ರಾಷ್ಟ್ರೀಯ ರಾಜಧಾನಿ ಪ್ರದೇಶ] ದಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಪ್ರಯತ್ನಗಳ ನಂತರ ಪ್ರದರ್ಶಿಸಿದಂತೆ ಅಂತಿಮವಾಗಿ ಕುಸಿತವನ್ನು ಸಾಧಿಸಬಹುದು" ಎಂದು ಅದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವಾದ್ಯಂತ ಸೋಂಕುಗಳ ಸಂಖ್ಯೆ ೧೬ ಮಿಲಿಯನ್ (ದಶಲಕ್ಷ) ತಲುಪಿದ್ದು, ಸಾವಿನ ಸಂಖ್ಯೆ ೬,೪೩,೮೨೧ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನವೈರಸ್ ಅಂಕಿಸಂಖ್ಯೆಗಳು ತಿಳಿಸಿವೆ.
No comments:
Post a Comment