Monday, November 9, 2020

ಬಿಹಾರ ಯಾರಿಗೆ ಜಯ: ಮಂಗಳವಾರ ಫಲಿತಾಂಶ

 ಬಿಹಾರ ಯಾರಿಗೆ ಜಯ: ಮಂಗಳವಾರ ಫಲಿತಾಂಶ

ಪಾಟ್ನಾ: ಬಿಹಾರ ವಿಧಾನಸಭೆಗಾಗಿ ನಡೆದ ಮೂರು ಹಂತಗಳ ಚುನಾವಣೆಯ ಮತಗಳ ಎಣಿಕೆ 2020 ನವೆಂಬರ್ 10ರ ಮಂಗಳವಾರ ಬೆಳಗ್ಗೆ ಆರಂಭವಾಗಲಿದೆ.

ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಕಾಂಗ್ರೆಸ್ ಮತ್ತು ರಾಜ್ಯದ ಎಡ ಪಕ್ಷಗಳನ್ನು ಒಳಗೊಂಡ ತೇಜಸ್ವೀ ಯಾದವ್ ನೇತೃತ್ವದ ಗ್ರ್ಯಾಂಡ್ ಅಲೈಯನ್ಸ್ ಅಥವಾ ಮಹಾಘಟ ಬಂಧನ್ ದೊಡ್ಡ ಗೆಲುವು ಸಾಧಿಸುವುದಾಗಿ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಮುನ್ಸೂಚನೆ ನೀಡಿದ್ದರೂ, ಹಾಲಿ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ರಾಜ್ಯದಲ್ಲಿ ಮತ್ತೊಂದು ಅವಧಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ಇದ್ದಾರೆ.

ಮತದಾನೋತ್ತರ ಸಮೀಕ್ಷಾ ಮುನ್ಸೂಚನೆಗಳು ನಿಜವಾದಲ್ಲಿ ತೇಜಸ್ವೀ ಯಾದವ್ ಅವರು ದೇಶದಲ್ಲೇ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ.

ಮಂಗಳವಾರದ ಮತಗಳ ಎಣಿಕೆಯು ನಂದ್ ಕಿಶೋರ ಯಾದವ್ (ಪಾಟ್ನಾ ಸಾಹಿಬ್), ಪ್ರಮೋದ ಕುಮಾರ್ (ಮೋತಿಹಾರಿ), ರಾಣಾ ರಣಧೀರ್ (ಮಧುಬನ್), ಸುರೇಶ ಶರ್ಮಾ (ಮುಜಾಫರಪುರ), ಶ್ರಣ ಕುಮಾರ್ (ನಳಂದ), ಜೈ ಕುಮಾರ್ ಸಿಂಗ್ (ದಿನಾರಾ) ಮತ್ತು ಕೃಷ್ಣಾನಂದನ ಪ್ರಸಾದ್ ವರ್ಮಾ (ಜೆಹಾನಾಬಾದ್) ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಂತ್ರಿಗಳ ರಾಜಕೀಯ ಭವಿಷ್ಯವನ್ನು ಸಹ ನಿರ್ಧರಿಸುತ್ತದೆ.

ಅಕ್ಟೋಬರ್ ೨೮, ನವೆಂಬರ್ ಮತ್ತು ನವೆಂಬರ್ ರಂದು ಬಿಹಾರದ ೨೪೩-ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಿತು.

ಬಿಹಾರ ಚುನಾವಣಾ ಫಲಿತಾಂಶದ ಪೂರ್ಣ ವೇಳಾಪಟ್ಟಿ ಇಲ್ಲಿದೆ

. ಬೆಳಿಗ್ಗೆ ಗಂಟೆಗೆ ಎಣಿಕೆ: ೫೫ ಮತಗಟ್ಟೆಗಳಲ್ಲಿ ಬೆಳಿಗ್ಗೆ ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ.

. ಹೆಚ್ಚಿನ ಮತ ಎಣಿಕೆ ಕೇಂದ್ರಗಳು: ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ ಸಾಮಾಜಿಕ ಅಂತರ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಚುನಾವಣಾ ಆಯೋಗವು ಬಾರಿ ಮತ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲಾ ೩೮ ಜಿಲ್ಲೆಗಳ ೪೧೪ ವಸತಿ ಸಭಾಂಗಣಗಳಲ್ಲಿ ೫೫ ಎಣಿಕೆ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ.

. ಪ್ರತಿ ಜಿಲ್ಲೆಯಲ್ಲಿ ಮೂರು ಎಣಿಕೆ ಕೇಂದ್ರಗಳು: ಪೂರ್ವ ಚಂಪಾರನ್ (ಇದು ೧೨ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ), ಗಯಾ (೧೦ ಕ್ಷೇತ್ರಗಳು), ಸಿವಾನ್ (ಎಂಟು ಕ್ಷೇತ್ರಗಳು) ಮತ್ತು ಬೆಗುಸರಾಯ್ (ಏಳು) ನಾಲ್ಕು ಜಿಲ್ಲೆಗಳಲ್ಲಿ ತಲಾ ಮೂರು ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಳಿದ ಇತರ ಜಿಲ್ಲೆಗಳಲ್ಲಿ ತಲಾ ಒಂದು ಅಥವಾ ಎರಡು ಎಣಿಕೆ ಕೇಂದ್ರಗಳಿವೆ.

. ಬೆಳಿಗ್ಗೆ ೧೦ ಹೊತ್ತಿಗೆ ಆರಂಭಿಕ ಪ್ರವೃತ್ತಿಗಳು: ಹಿಂದೆ ಸಂಭವಿಸಿದಂತೆ, ಆರಂಭಿಕ ಪ್ರವೃತ್ತಿಗಳು, ಅಂದರೆ, ಒಂದು ನಿರ್ದಿಷ್ಟ ಅಸೆಂಬ್ಲಿ ಸ್ಥಾನದಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿ ಮುನ್ನಡೆಸುತ್ತಿದ್ದಾರೆ ಎಂಬ ಮಾಹಿತಿ ಬೆಳಿಗ್ಗೆ ೧೦ ಹೊತ್ತಿಗೆ ಲಭಿಸುವ ಸಾಧ್ಯತೆಯಿದೆ.

. ಪ್ರಮುಖ ಪಕ್ಷಗಳ ಸ್ಥಿತಿಗತಿಯ ಚಿತ್ರ: ಎಣಿಕೆ ಮುಂದುವರೆದಂತೆ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಗಳು ಮುನ್ನಡೆಯುತ್ತಿವೆ ಎಂಬುದಾಗಿ ಚುನಾವಣಾ ಆಯೋಗವು ಘೋಷಿಸುತ್ತಿದ್ದಂತೆಯೇ, ಬಿಹಾg ಭವಿಷ್ಯವು ಏನಾಗಲಿದೆ ಎಂಬುದರ ಕುರಿತು ಹೆಚ್ಚು ಖಚಿತವಾದ ಅವಲೋಕನವನ್ನು ಮಾಡಬಹುದು.

. ಸಂಜೆ ಅಥವಾ ಬುಧವಾರ ಫಲಿತಾಂಶ: ಮತಗಳ ಎಣಿಕೆ ಸಂಜೆಯ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ, ಆದಾಗ್ಯೂ, ಹಲವಾರು ಸಂದರ್ಭಗಳಲ್ಲಿ, ಕಸರತ್ತು ಸಮಯ ತೆಗೆದುಕೊಳ್ಳುವ ಕಾರಣ ಮರುದಿನದವರೆಗೆ ಎಣಿಕೆ ವಿಸ್ತರಣೆಗೆ ಅವಕಾಶ ನೀಡಲಾಗಿದೆ.

No comments:

Advertisement