Monday, September 18, 2023

ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

 ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂಗಳೂರಿನಲ್ಲಿ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿಯವರೆಗೆ ಸಂಸ್ಥೆಯು ಬೆಂಗಳೂರಿನಲ್ಲಿ ಶ್ರೀನಗರ ಸಮೀಪದ ಅಪೆಕ್ಸ್‌ ಬ್ಯಾಂಕ್‌ ಸಮೀಪ ಕಾರ್ಯ ನಿರ್ವಹಿಸುತ್ತಿತ್ತು.

ಬೆಂಗಳೂರಿನ ಗಿರಿನಗರಕ್ಕೆ ಸಮೀಪದ ಮುನೇಶ್ವರ ಬ್ಲಾಕಿನ ಶನೈಶ್ಚರ ದೇವಸ್ಥಾನದ ಎದುರಿನಲ್ಲಿರುವ ಸ್ವಂತ ಕಟ್ಟಡಕ್ಕೆ ಉಕ್ಕಿನಡ್ಕಾಸ್‌ ಸ್ಥಳಾಂತರ ಸಮಾರಂಭ  2023 ಸೆಪ್ಟೆಂಬರ್‌ 17ರ ಭಾನುವಾರ ಸರಳವಾಗಿ ನಡೆಯಿತು. ಚಿತ್ರ ನಟಿ ಸೋನುಗೌಡ ಅವರು ಸಮಾರಂಭವನ್ನು ಉದ್ಘಾಟಿಸಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಶ್ರೀಧರ ಸಾಗರ್‌ ಜಿ,  ಮಂಗಳೂರಿನ ಖ್ಯಾತ ಜಾಹೀರಾತು ಸಂಸ್ಥೆ ʼಕಲ್ಕೂರ ಆರ್ಟ್ಸ್‌ʼ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿ ಶಾಂತರಾಜ್‌ ಐತಾಳ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ವಿಶೇಷ ಆಯುರ್ವೇದ ಉಪಚಾರ ನೀಡುವಂತಹ ʼಕಾಸ್ಮೆಟಿಕ್‌ ಚಿಕಿತ್ಸಾʼ ವಿಭಾಗವನ್ನೂ ಸೋನುಗೌಡ ಉದ್ಘಾಟಿಸಿದರು.  ಸಂಸ್ಥೆಯ ವೈದ್ಯೆ ಡಾ. ನ್ಯಾನ್ಸಿ ಆಯುರ್ವೇದ ಕಾಸ್ಮೆಟಿಕ್ಸ್‌ ಚಿಕಿತ್ಸಾ ಸೌಲಭ್ಯದ ಬಗ್ಗೆ ವಿವರಿಸಿದರು.


ಸಂಸ್ಥೆಯ ಮುಖ್ಯಸ್ಥ ಡಾ. ಜಯಗೋವಿಂದ ಅವರು ಸ್ವಾಗತ ಕೋರಿ, 1950ರಲ್ಲಿ ಸ್ಥಾಪನೆಯಾದ ಉಕ್ಕಿನಡ್ಕಾಸ್‌ ಸಂಸ್ಥೆ  ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.  ಸಂಸ್ಥೆಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಡಾ. ಸಪ್ನಾ ಜಯಗೋವಿಂದ ವಂದನಾರ್ಪಣೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಸ್ವಂತ ಕಟ್ಟಡಕ್ಕೆ ಕಾಲಿಡಲು ನೆರವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕಿರುಕಾಣಿಕೆ ನೀಡಿ ಸತ್ಕರಿಸಲಾಯಿತು. 
ಉಕ್ಕಿನಡ್ಕಾಸ್‌ ಆಯುರ್ವೇದ ಫಾರ್ಮೆಸಿ ವಿಭಾಗದ ಚಂದನ್‌ ಕಾರ್ಯಕ್ರಮ ನಿರ್ವಹಿಸಿದರು. 

ಇದನ್ನೂ ನೋಡಿ: 

ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್‌ ಆಯುರ್ವೇದ

No comments:

Advertisement