Wednesday, August 3, 2022

ಇಂದಿನ ಇತಿಹಾಸ History Today ಆಗಸ್ಟ್‌ 03

 ಇಂದಿನ ಇತಿಹಾಸ History Today ಆಗಸ್ಟ್‌ 03

2022: ಮಥುರಾ, ಉತ್ತರ ಪ್ರದೇಶ:  ಮಥುರಾ ಕೃಷ್ಣ ಜನ್ಮಭೂಮಿಯಲ್ಲಿ ಇದೆ ಎಂದು ಆಪಾದಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ ಮಥುರಾ ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಟ್ಲೆಯ ವಿಚಾರಣಾ ಕಲಾಪಗಳಿಗೆ ಅಲಹಾಬಾದ್‌ ಹೈಕೋರ್ಟ್‌ 2022 ಆಗಸ್ಟ್‌ 03rರ ಬುಧವಾರ ತಡೆಯಾಜ್ಞೆ ನೀಡಿತು. ಮಥುರಾ ನ್ಯಾಯಾಲಯದಲ್ಲಿ ಬಾಕಿ ಇರುವ ಖಟ್ಲೆಯ ವಿಚಾರಣಾ ಕಲಾಪಗಳಿಗೆ ಅಲಹಾಬಾದ್‌ ಹೈಕೋರ್ಟಿನ ನ್ಯಾಯಮೂರ್ತಿ ಸಲೀಲ್‌ ಕುಮಾರ್‌ ರೈ ತಡೆಯಾಜ್ಞೆ ನೀಡಿದರು. ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಯು ಮಥುರಾ ಜಿಲ್ಲಾ ನ್ಯಾಯಾಲಯವು 2022 ಮೇ 19ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಈ ತೀರ್ಪಿನಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯವು 2020ರ ಸೆಪ್ಟೆಂಬರಿನಲ್ಲಿ ನೀಡಿದ್ದ ಸಿವಿಲ್‌ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿ ಪುನರ್‌ ಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿತ್ತು. ಇದಕ್ಕೂ ಮುನ್ನ ಇದೇ ದಿನ ಶಾಹಿ ಈದ್ಗಾ ಮಸೀದಿಯ ಆವರಣದಲ್ಲಿ ಶ್ರೀ ಕೃಷ್ಣ ದೇವರಿಗೆ ಜಲಾಭಿಷೇಕ ನಡೆಸಲು ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ಮಥುರಾ ಜಿಲ್ಲಾ ಕೋರ್ಟ್‌ ತಿರಸ್ಕರಿಸಿತು. ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಖಜಾಂಜಿ ದಿನೇಶ್‌ ಶರ್ಮಾ ಅವರು ಪುನರ್‌ಪರಿಶೀಲನಾ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಸೀದಿಯ ಒಳಗೆ ಶ್ರೀ ಕೃಷ್ಣನ ನಿಜವಾದ ಜನ್ಮಸ್ಥಳವಿದೆ. ಜಲಾಭಿಷೇಕ ನಡೆಸಲು ಅನುವು ಮಾಡಿಕೊಡಬೇಕು ಎಂದು ಶರ್ಮಾ ಅರ್ಜಿಯಲ್ಲಿ ಹಕ್ಕೊತ್ತಾಯ ಮಾಡಿದ್ದರು. ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಕಟ್ರಾ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಶಾಹಿ ಮಸೀದಿ ಈದ್ಗಾ ಸ್ಥಳಾಂತರಿಸಲು ಕೋರಿ ಹಲವಾರು ಅರ್ಜಿಗಳು ಮಥುರಾ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.

2020: ಇಸ್ಲಾಮಾಬಾದ್: ಪಾಕಿಸ್ತಾನದ ಮುಂಚೂಣಿಯ ಸುದ್ದಿವಾಹಿನಿಯಾದ ’ಡಾನ್ ಟಿವಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದ ಘಟನೆ  2020 ಆಗಸ್ಟ್  02ರ ಭಾನುವಾರ ಘಟಿಸಿದೆಭಾರತದ ವಿರುದ್ಧ ಸದಾ ಕಾಲ ಕತ್ತಿ ಮಸೆಯು ಪಾಕಿಸ್ತಾನದ  ಪ್ರಮುಖ ಟಿವಿವಾಹಿನಿಯಲ್ಲಿ  ತ್ರಿವರ್ಣ ಧ್ವಜ ಹಾರಾಡುವುದರ ಜೊತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ವಾಕ್ಯ ಕೂಡಾ ಕಂಡು ಬಂದದ್ದು ಎಲ್ಲರ ಹುಬ್ಬೇರಿಸಿತುಆದರೆಇದು ತಾಂತ್ರಿಕ ತಪ್ಪಿನಿಂದ ಆಗಿರುವುದಲ್ಲಭಾರತೀಯ ಹ್ಯಾಕರುಗಳು ಪ್ರದರ್ಶಿಸಿದ ಕೈಚಳಕ ಎಂಬುದು ಬೆಳಕಿಗೆ ಬಂದಿದೆಭಾನುವಾರ ಮಧ್ಯಾಹ್ನ .೩೦ಕ್ಕೆ ಡಾನ್ ಸುದ್ದಿ ವಾಹಿನಿಯಲ್ಲಿ ಜಾಹೀರಾತು ಪ್ರಸಾರವಾಗುತ್ತಿದ್ದ ಸಂzರ್ಭದಲ್ಲಿ ಹಾರಾಡುವ ಭಾರತದ  ಧ್ವಜದೊಂದಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ಸಂದೇಶ ಕಂಡುಬಂದಿತುಸುಮಾರು ೪೫ ಸೆಕೆಂಡ್ ಕಾಲ ಡಾನ್ ಟಿವಿ ಪರದೆಯಲ್ಲಿ ಭಾರತದ ಧ್ವಜ ರಾರಾಜಿಸಿದ್ದುಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತುಘಟನೆಯ ಬಳಿಕ ಹೇಳಿಕೆ ’ಹ್ಯಾಕರುಗಳಿಂದ ಟಿವಿ ವಾಹಿನಿ ಹ್ಯಾಕ್ ಆಗಿದೆ’ ಎಂದು ಡಾನ್ ತನ್ನ ವೆಬ್ ಸೈಟಿನಲ್ಲಿ ಹೇಳಿಕೆ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿಬೇಹುಗಾರಿಕೆ ಆರೋ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ವಕೀಲರನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ಎಂದು 2020 ಆಗಸ್ಟ್ 03ರ ಸೋಮವಾರ ಆಜ್ಞಾಪಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು 2020 ಸೆಪ್ಟೆಂಬರ್ 3 ಕ್ಕೆ ಮುಂದೂಡಿತುವಕೀಲರು ಪಾಕಿಸ್ತಾನ ಪ್ರಜೆಯಾಗಿರಬೇಕು ಎಂದು ಷರತ್ತು ವಿಧಿಸಿದ ನ್ಯಾಯಾಲಯಪ್ರಕರಣದಲ್ಲಿ ಜಾಧವ್ ಪರ ಕಾನೂನು ಪ್ರತಿನಿಧಿಯನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿತುಪಾಕಿಸ್ತಾನದಲ್ಲಿ ವಕಾಲತ್ತು ನಡೆಸಲು ಅರ್ಹರಾಗಿರುವ ವಕೀಲರನ್ನು ತೊಡಗಿಸಿಕೊಳ್ಳಲು ಭಾರತ ಸರ್ಕಾರವನ್ನು ಮತ್ತೊಮ್ಮೆ ಸಂಪರ್ಕಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ ಎಂದು ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಮಾಧ್ಯಮಗಳಿಗೆ ತಿಳಿಸಿದರುಪಾಕಿಸ್ತಾನಿ ಕಾನೂನು ತಂಡಕ್ಕೆ ಸಹಾಯ ಮಾಡಲು ಭಾರತೀಯ ವಕೀಲರಿಗೆ ಇಲ್ಲಿಯವರೆಗೆ ಯಾವುದೇ ಅವಕಾಶ ನೀಡಲಾಗಿಲ್ಲ ಎಂದುಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ದಿಗ್ಬಂಧನವನ್ನು (ಲಾಕ್‌ಡೌನ್ತೆರವುಗೊಳಿಸುವ (ಅನ್ಲಾಕ್ಮಾಡುವ ಮೂರನೇ ಹಂತದ ಅಡಿಯಲ್ಲಿ ಆಗಸ್ಟ್  ರಿಂದ ಜಿಮ್ನಾಷಿಯಂಗಳು ಮತ್ತು ಯೋಗ ಸಂಸ್ಥೆಗಳಿಗೆ ತೆರೆಯಲು ಕೇಂದ್ರ  ಸರ್ಕಾರ ಅನುಮತಿ ನೀಡಿದೆಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) 2020 ಆಗಸ್ಟ್ 03ರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರಕೋವಿಡ್ -೧೯ ಕಂಟೈನ್ ಮೆಂಟ್ (ಧಾರಕ ವಲಯಪ್ರದೇಶಗಳಲ್ಲಿನ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗುವುದಿಲ್ಲ೬೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರುಸಹ-ಅಸ್ವಸ್ಥತೆ ಹೊಂದಿರುವ ಜನರುಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳಗಳಲ್ಲಿ ಇರುವ ಜಿಮ್ನಾಷಿಯಂ ಅಥವಾ ಯೋಗ ಸಂಸ್ಥೆಗಳನ್ನು ಬಳಸದಂತೆ ನಿರ್ದೇಶನ ನೀಡಲಾಗಿದೆಯೋಗ ಕ್ರಿಯೆಗಳನ್ನು ತೆರೆದ ಸ್ಥಳಗಳಲ್ಲಿ ನಡೆಸಬೇಕುಫಿಟ್‌ನೆಸ್ ಕೇಂದ್ರಕ್ಕೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಜನಸಂದಣಿಯನ್ನು ತಪ್ಪಿಸಲು ಬಳಕೆದಾರರಿಗೆ ತಂಡಗಳಲ್ಲಿ ಪ್ರವೇಶ ನೀಡಬೇಕು ಮತ್ತು ಅವರಿಗೆ ಸಮಯಗಳನ್ನು ನಿಗದಿ ಪಡಿಸಬೇಕುಪ್ರತಿ ಎರಡು ತಂಡಗಳ ನಡುವೆ ೧೫-೩೦ ನಿಮಿಷಗಳ ಅಂತರವನ್ನು ಹೊಂದಿರಬೇಕು ಅವಧಿಯಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಣೆ ಪ್ರಕ್ರಿಯೆ ನಡೆಸಬೇಕು ಎಂದು ಮಾರ್ಗಸೂಚಿಸಿ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2020 ಆಗಸ್ಟ್ 05 ರಂದು ನಡೆಯಲಿರುವ ಭವ್ಯ ರಾಮಮಂದಿರದ ಭೂಮಿ ಪೂಜಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ  ಮಂದಿ ಮಾತ್ರ ವೇದಿಕೆಯಲ್ಲಿ ಇರುತ್ತಾರೆಸಮಾರಂಭಕ್ಕೆ ಎರಡು ದಿನ ಮುಂಚಿತವಾಗಿ ಬಿಡುಗಡೆಯಾಗಿರುವ ಅತಿಥಿ ಪಟ್ಟಿ ಮತ್ತು ಕೇಸರಿ ಬಣ್ಣದ  ಆಮಂತ್ರಣ ಪತ್ರದಲ್ಲಿ  ವಿವರ ನಮೂದಾಗಿದೆಆಮಂತ್ರಣ ಪತ್ರದಲ್ಲಿ ಪ್ರಧಾನಿ ಮೋದಿ ಮತ್ತು ಇತರ ಮೂವರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದ್ದುಕೋವಿಡ್ -೧೯ರ ಹಿನ್ನೆಲೆಯಲ್ಲಿ ಸಂಖ್ಯೆ ಮಿತಿಗೊಳಿಸಿದ್ದನ್ನು ಇದು ಸೂಚಿಸಿದೆಪ್ರಧಾನಿ ಮೋದಿರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್ಮುಖ್ಯಸ್ಥ ಮೋಹನ ಭಾಗವತ್ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಂತ ನೃತ್ಯ ಗೋಪಾಲದಾಸ್  ಐದು ಮಂದಿ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆಆಮಂತ್ರಣ ಪತ್ರವು ’ರಾಮ ಲಲ್ಲಾ’ ಅಥವಾ ’ಬಾಲ ರಾಮ ವಿಗ್ರಹದ ಚಿತ್ರವನ್ನು ಹೊಂದಿದೆಪ್ರತಿ ಆಮಂತ್ರಣ ಪತ್ರವೂ sದ್ರತಾ ಕೋಡ್‌ನ್ನು ಹೊಂದಿದ್ದುಅದು ಒಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತದೆಅತಿಥಿ ಸ್ಥಳದಿಂದ ನಿರ್ಗಮಿಸಿದರೆ ಅವರನ್ನು ಮತ್ತೆ ಒಳಗೆ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ರಾಮ ಮಂದಿರ ಟ್ರಸ್ಟಿನ  ಚಂಪತ್ ರೈ ಹೇಳಿದರುರಾಷ್ಟ್ರವು ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಹೋರಾಟದ ನಡೆಸುತ್ತಿರುವಾಗಲೇ ಆಯೋಜಿಸಲಾಗಿರುವ  ’ಭೂಮಿ ಪೂಜೆ’ ಸಮಾರಂಭದಲ್ಲಿ ಪಾಲ್ಗೊಳ್ಳಲು ಒಟ್ಟು ೧೭೫ ಜನರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರವು ಕಬ್ಬಿಣ ಉಕ್ಕು ರಹಿತವಾದ ಸಂಪೂರ್ಣ ಶಿಲಾ ದೇವಾಲಯವಾಗಲಿದ್ದುಮಂದಿರದ ಭೂಮಿಪೂಜೆಗೆ ಬಂದಿರುವ ಉಡುಗೊರೆಗಳಲ್ಲಿ ವಾರಾಣಸಿಯಿಂದ ಬಂದಿರುವ ಬೆಳ್ಳಿಯ ಅಶ್ವತ್ಥವೀಳ್ಯದ ಎಲೆಗಳು ಸೇರಿವೆ.ಬೆಳ್ಳಿಯಿಂದ ಮಾಡಿದ ಐದು ಅಶ್ವತ್ಥ / ವೀಳ್ಯದ ಎಲೆಗಳನ್ನು ವಾರಾಣಸಿಯಿಂದ ಚೌರಾಸಿಯಾ ಸಮುದಾಯದ ಸದಸ್ಯರು ಅಯೋಧ್ಯೆಗೆ ಕಳುಹಿಸಿದ್ದಾರೆಅಶ್ವತ್ಥ / ವೀಳ್ಯದ ಎಲೆಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಧರ್ಮದಲ್ಲಿ ಅನೇಕ ಪೂಜೆಗಳಲ್ಲಿ ಬಳಸಲಾಗುತ್ತದೆಅಯೋಧ್ಯೆಗೆ ಹೊರಟ ವೇದಜ್ಯೋತಿಷ್ಯಪಾಣಿನಿ ಮತ್ತು ಸಂಸ್ಕೃತ ವ್ಯಾಕರಣದ ವಿದ್ವಾಂಸರ ಸಂಘಟನೆಯಾದ ವಿದ್ವತ್ ಪರಿಷತ್ ಸದಸ್ಯರಿಗೆ  ಬೆಳ್ಳಿ ಎಲೆಗಳಲ್ಲಿ ಕಾಶಿ ಚೌರಾಸಿಯಾ ಸಮುದಾಯದ ಅಧ್ಯಕ್ಷ ನಾಗೇಶ್ವರ ಚೌರಾಸಿಯಾ ನೀಡಿದರುಜ್ಯೋತಿಷ್ಯ ಮತ್ತು ವ್ಯಾಕರಣದ  ಮೂವರು ವಿದ್ವಾಂಸರು ರಾಮಮಂದಿರದ ಅಡಿಪಾಯ ಹಾಕುವ ‘ಭೂಮಿ ಪೂಜೆ’ ಸಮಾರಂಭದ ಆಚರಣೆಗಳನ್ನು ನೋಡಿಕೊಳ್ಳಲಿದ್ದಾರೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Advertisement