ಭಾರತೀಯ ಚಿತ್ರರಂಗದ ದಂತಕತೆ ಬಿ. ಸರೋಜಾದೇವಿ ಇನ್ನಿಲ್ಲ
ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ
ಅಪಾರಕೊಡುಗೆ ನೀಡಿದ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳಾ ಸೂಪರ್‌ಸ್ಟಾರ್
ಆಗಿ ಹೊರಹೊಮ್ಮಿದ ಮೊದಲ ನಟಿಯರಲ್ಲಿ ಒಬ್ಬರಾದ ಭಾರತೀಯ ಚಿತ್ರರಂಗದ ದಂತಕತೆ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ವಯೋಸಹಜ ಅನಾರೋಗ್ಯದಿಂದ 2025 ರ ಜುಲೈ
14ರ ಸೋಮವಾರ ನಿಧನರಾದರು.
ಸರೋಜಾ ದೇವಿ ಅವರ ಕುರಿತ ಒಂದಷ್ಟು
ಪ್ರಮುಖ ಮಾಹಿತಿ ಇಲ್ಲಿದೆ.
ಜನನ
ಮತ್ತು ಆರಂಭಿಕ ಜೀವನ:
- ಬಿ. ಸರೋಜಾ ದೇವಿ ಅವರು 1938ರ ಜನವರಿ 7ರಂದು ಬೆಂಗಳೂರಿನಲ್ಲಿ
ವೊಕ್ಕಲಿಗ ಕುಟುಂಬದಲ್ಲಿ ಜನಿಸಿದರು.
- ಅವರ ತಂದೆ ಭೈರಪ್ಪ ಪೊಲೀಸ್
ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು.
- ಬಾಲ್ಯದಿಂದಲೇ ಅವರಿಗೆ ಲಲಿತಕಲೆಗಳ
ಬಗ್ಗೆ ಆಸಕ್ತಿ ಇತ್ತು.
ಚಿತ್ರರಂಗ
ಪ್ರವೇಶ ಮತ್ತು ವೃತ್ತಿಜೀವನ:
- 17ನೇ ವಯಸ್ಸಿನಲ್ಲಿ, 1955ರಲ್ಲಿ ಬಿ. ಸರೋಜಾ ದೇವಿ ಅವರು ಹೊನ್ನಪ್ಪ ಭಾಗವತರ್ ಅವರ "ಮಹಾಕವಿ
ಕಾಳಿದಾಸ" ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ
ಮಾಡಿದರು. ಇದು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.
- ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ
ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ
ನಟಿಸಿದ್ದಾರೆ.
- ಅವರನ್ನು ಕನ್ನಡದಲ್ಲಿ "ಅಭಿನಯ
ಸರಸ್ವತಿ" ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ)
ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
- 1955 ರಿಂದ 1984ರವರೆಗೆ
ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದು ಅವರ ವಿಶೇಷ
ದಾಖಲೆಗಳಲ್ಲಿ ಒಂದಾಗಿದೆ.
- ಅವರು ಡಾ. ರಾಜ್‌ಕುಮಾರ್, ಎಂ.ಜಿ.ಆರ್, ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್, ದಿಲೀಪ್ ಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಅವರಂತಹ ಹಲವು ದಿಗ್ಗಜ
ನಟರೊಂದಿಗೆ ಕೆಲಸ ಮಾಡಿದ್ದಾರೆ.
ಪ್ರಮುಖ
ಚಲನಚಿತ್ರಗಳು (ಕನ್ನಡದಲ್ಲಿ):
- ಮಹಾಕವಿ ಕಾಳಿದಾಸ (ಚೊಚ್ಚಲ ಚಿತ್ರ)
- ಬಬ್ರುವಾಹನ
- ಭಾಗ್ಯವಂತರು
- ಅಣ್ಣತಂಗಿ
- ಕಿತ್ತೂರು ಚೆನ್ನಮ್ಮ
- ಕೋಕಿಲವಾಣಿ
- ಶ್ರೀರಾಮಪೂಜಾ
- ರತ್ನಗಿರಿ ರಹಸ್ಯ
- ಸ್ಕೂಲ್ ಮಾಸ್ಟರ್
- ಭೂಕೈಲಾಸ
- ಜಗಜ್ಯೋತಿ ಬಸವೇಶ್ವರ
- ದೇವಸುಂದರಿ
ಪ್ರಶಸ್ತಿಗಳು
ಮತ್ತು ಗೌರವಗಳು:
- 1969 ರಲ್ಲಿ ಪದ್ಮಶ್ರೀ ಪ್ರಶಸ್ತಿ.
- 1992 ರಲ್ಲಿ ಪದ್ಮಭೂಷಣ ಪ್ರಶಸ್ತಿ.
- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ
ಡಾಕ್ಟರೇಟ್.
- ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿ.
- 1989ರಲ್ಲಿ ಕರ್ನಾಟಕ ಸರ್ಕಾರದಿಂದ
ರಾಜ್ಯೋತ್ಸವ ಪ್ರಶಸ್ತಿ.
- 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜ್‌ಕುಮಾರ್
ರಾಷ್ಟ್ರೀಯ ಪ್ರಶಸ್ತಿ.
- 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್
ರಾಷ್ಟ್ರೀಯ ಪ್ರಶಸ್ತಿ.
2010ರಲ್ಲಿ
ಭಾರತೀಯ ವಿದ್ಯಾ ಭವನವು 'ಪದ್ಮಭೂಷಣ ಬಿ.
ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ'ಯನ್ನು ಸ್ಥಾಪಿಸಿತು. 1992 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಬಿ. ಸರೋಜಾದೇವಿ ಅವರ
ಹೆಸರಿನಲ್ಲಿ ಅವರ ಗೌರವಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯು ಪ್ರತಿ ವರ್ಷ ಪ್ರದರ್ಶನ ಕಲೆಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ, ಗೌರವಿಸುತ್ತದೆ. 2010 ರಲ್ಲಿ ಈ ಪ್ರಶಸ್ತಿಯನ್ನು ಮೊದಲು ನೀಡಲಾಯಿತು. ಕೆ. ಜೆ. ಯೇಸುದಾಸ್,
ವೈಜಯಂತಿಮಾಲಾ, ಅಂಜಲಿ ದೇವಿ, ಅಂಬರೀಶ್, ಮತ್ತು
ಜಯಂತಿ ಈ ಪ್ರಶಸ್ತಿಯನ್ನು ಪಡೆದವರಲ್ಲಿ ಕೆಲವರು.
ವೈಯಕ್ತಿಕ
ಜೀವನ:
- 1967ರ ಮಾರ್ಚ್ 1 ರಂದು
ಎಂಜಿನಿಯರ್ ಶ್ರೀ ಹರ್ಷ ಅವರನ್ನು ವಿವಾಹವಾದರು.
ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು
ಅಗಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಿ. ಸರೋಜಾ ದೇವಿ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದ್ದಾರೆ.

No comments:
Post a Comment