ಮಹಾಕುಂಭ ಮುಗಿಯಿತು....
ಪೂರ್ತಿ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ ಅಥವಾ ಮೇಲಿನ ಪುಟಗಳಿಗೆ ಹೋಗಿ ʼಮಹಾಕುಂಭ ಮುಗಿಯಿತುʼ ಕ್ಲಿಕ್ ಮಾಡಿರಿ.ಗ್ರಾಹಕರ ಸುಖ-ದುಃಖ
My Blog List
Thursday, February 27, 2025
Wednesday, February 12, 2025
ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ
12) ಲಕ್ಷಾಂತರ ಭಕ್ತರು ʼಮಾಘ ಪೂರ್ಣಿಮೆ ಪವಿತ್ರ ಸ್ನಾನʼ ಆರಂಭಿಸುವುದರೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್ ನ ಗಂಗಾ, ಯುಮುನಾ,
ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 2025ರ ಮಹಾಕುಂಭವು ಉತ್ತುಂಗಕ್ಕೆ ಏರಿದೆ.
ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮಾ ಪವಿತ್ರ
ಸ್ನಾನ ಮಾಡುತ್ತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ʼಪುಷ್ಪ ವೃಷ್ಟಿʼ ಮಾಡಲಾಯಿತು.
ಪುಷ್ಪ ವೃಷ್ಟಿಯ ANI ವಿಡಿಯೋ ಇಲ್ಲಿದೆ.
ಕಲ್ಪವಾಸಿಗಳಿಗೆ ಮಾಘ
ಪೂರ್ಣಿಮವು ಮತ್ತೊಂದು ಪವಿತ್ರ ಸ್ನಾನದ ಸಂದರ್ಭವಾಗಿದ್ದು ಸ್ನಾನ, ದಾನ ಮತ್ತು ಪೂಜೆಯ ಧಾರ್ಮಿಕ ಮಹತ್ವದ
ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.
ಒಂದು ತಿಂಗಳ ಕಲ್ಪವಾಸದ ಅವಧಿಯು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.
ಜನವರಿ 13ರಿಂದ ಈವರೆಗೆ 45 ಕೋಟಿ ಭಕ್ತರು ಪವಿತ್ರ
ಸ್ನಾನ ಮಾಡಿದ್ದು, ಎರಡು ಪ್ರಮುಖ ಸ್ನಾನ ಹಬ್ಬಗಳು ಉಳಿದಿರುವುದರಿಂದ, ಪವಿತ್ರ ಸ್ನಾನ ಮಾಡುವ ಒಟ್ಟು ಭಕ್ತರ ಸಂಖ್ಯೆ 50 ಕೋಟಿ ಮೀರುವ ನಿರೀಕ್ಷೆಯಿದೆ.
ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ. ಫೆಬ್ರವರಿ 3ರಂದು ಬಸಂತ್
ಪಂಚಮಿ - ಮೂರನೇ ಶಾಹಿ ಸ್ನಾನ ನಡೆದಿದ್ದು, ಇಂದು-, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಶಾಹಿ ಸ್ನಾನ ನಡೆಯುತ್ತಿದೆ.
ಫೆಬ್ರವರಿ 26ರ ಮಹಾ
ಶಿವರಾತ್ರಿಯಂದು ಇನ್ನೊಂದು ಪವಿತ್ರ ಸ್ನಾನ ನೆರವೇರಲಿದೆ.
ಈ ಕೆಳಗಿನವುಗಳನ್ನೂ ಓದಿರಿ:
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
Monday, February 10, 2025
ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್
ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್
ಬೆಂಗಳೂರು: ಇದು ಬಹುಶಃ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂಬುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳು 300 ಕಿಲೋಮೀಟರ್‌ಗಳಷ್ಟು ದೂರದಿಂದಲೇ ವಾಹನಗಳ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ ಎಂದು ವರದಿಗಳು ಹೇಳುತ್ತಿವೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ಲಕ್ಷಾಂತರ
ಯಾತ್ರಿಕರು 2025 ಫೆಬ್ರುವರಿ 9ರ ಭಾನುವಾರ ಕುಂಭಮೇಳದಿಂದ ನೂರಾರು
ಕಿಲೋಮೀಟರ್ ದೂರದಲ್ಲೇ ತಮ್ಮ ಕಾರುಗಳಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ.
5 ಕಿಮೀ ಸಾಗಲು 5 ಗಂಟೆ ಹಿಡಿಯಿತು ಎಂದು ಭಾಸ್ಕರ
ಸರ್ಮಾ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದರೆ, ವಾಹನ ದಟ್ಟಣೆಯ ವಿಡಿಯೋ ಪೋಸ್ಟ್
ಮಾಡಿರುವ ನಿತುನ್ ಕುಮಾರ್ ಪ್ರಯಾಗರಾಜ್ ಗೆ ಬರುವ ಮುನ್ನ ಯೋಚಿಸಿ ಯೋಜನೆ ಮಾಡಿಕೊಂಡು ಬನ್ನಿ ಎಂದು
ಸಲಹೆ ಮಾಡಿದ್ದಾರೆ.
ಇಲ್ಲಿ ವಿಡಿಯೋ ನೋಡಿ:
ಈ ಅಭೂತಪೂರ್ವ ವಾಹನದಟ್ಟಣೆ ದಟ್ಟಣೆ, ಮಧ್ಯಪ್ರದೇಶದ ಮೂಲಕ ಮಹಾ ಕುಂಭಮೇಳಕ್ಕೆ ಹೋಗುವ ವಾಹನಗಳ ಯಾತ್ರಿಕರ ಅನುಭವಕ್ಕೆ ಬಂದಿದೆ. ಈ ವಾಹನ ದಟ್ಟಣೆ ಸುಮಾರು 200-300 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ ಎಂದು ವರದಿಗಳು ಹೇಳಿವೆ.
ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಂಚಾರವನ್ನು ಪೊಲೀಸರು ನಿಲ್ಲಿಸಿದರು. ಇದಕ್ಕೆ ಮಧ್ಯಪ್ರದೇಶದಿಂದ ಪ್ರಯಾಗರಾಜ್‌ಗೆ
ಹೋಗುವ ರಸ್ತೆಗಳಲ್ಲಿ ಉಂಟಾಗಿರುವ ಭಾರೀ ದಟ್ಟಣೆ ಕಾರಣ. ವಾಹನ ಹಾಗೂ ಜನದಟ್ಟಣೆ ನಿವಾರಿಸಲು ಈ ವಾಹನಗಳ
ಸಂಚಾರ ತಡೆಗಟ್ಟಬೇಕಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮಧ್ಯಪ್ರದೇಶದಲ್ಲೇ ಸುರಕ್ಷಿತರ ಆಶ್ರಯಗಳನ್ನು ಹುಡುಕಿಕೊಳ್ಳುವಂತೆ
ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ ಎಂದೂ ವರದಿ ಹೇಳಿದೆ.
ಕಟ್ನಿ ಜಿಲ್ಲೆಯಲ್ಲಿ ಸೋಮವಾರದವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು
ಪೊಲೀಸರು ತಿಳಿಸಿದ್ದಾರೆ. ಮೈಹಾರ್ ಪೊಲೀಸರು ವಾಹನಗಳು ಕಟ್ನಿ ಮತ್ತು ಜಬಲ್ಪುರದ
ಕಡೆಗೆ ಹಿಂತಿರುಗಿ ಅಲ್ಲಿಯೇ ಇರಬೇಕೆಂದು ಅವರು ಕೇಳಿಕೊಂಡಿದ್ದಾರೆ. "ಇಂದು ಪ್ರಯಾಗರಾಜ್ ಕಡೆಗೆ ಚಲಿಸುವುದು ಅಸಾಧ್ಯ ಏಕೆಂದರೆ 200-300 ಕಿಲೋಮೀಟರ್ ಟ್ರಾಫಿಕ್ ಜಾಮ್ ಇದೆ" ಎಂದು ಪೊಲೀಸರು
ಹೇಳಿರುವುದಾಗಿ ವರದಿ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿನ
ಹಲವಾರು ವೀಡಿಯೊಗಳು ಮಧ್ಯಪ್ರದೇಶದ ಕಟ್ನಿ, ಜಬಲ್ಪುರ, ಮೈಹಾರ್
ಮತ್ತು ರೇವಾ ಜಿಲ್ಲೆಗಳಾದ್ಯಂತ ರಸ್ತೆಗಳಲ್ಲಿ ಸಾವಿರಾರು ಕಾರುಗಳು ಮತ್ತು ಟ್ರಕ್‌ಗಳ ಬೃಹತ್
ಸರತಿ ಸಾಲುಗಳನ್ನು ತೋರಿಸಿವೆ.
ರೇವಾ ಜಿಲ್ಲೆಯ ಚಕ್ಘಾಟ್‌ನಲ್ಲಿ
ಕಟ್ನಿಯಿಂದ ಮಧ್ಯಪ್ರದೇಶ-ಉತ್ತರ ಪ್ರದೇಶದ ಗಡಿಗಳವರೆಗಿನ 250 ಕಿಮೀ ವ್ಯಾಪ್ತಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು
ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಜನವರಿ 13 ರಂದು ಆರಂಭವಾಗಿ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳವು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮಸ್ಥಳವಾದ ಪ್ರಯಾಗರಾಜ್ ನಲ್ಲಿ ʼಪವಿತ್ರ ಸ್ನಾನʼಕ್ಕಾಗಿ ದೇಶಾದ್ಯಂತ ಮತ್ತು ವಿದೇಶಗಳಿಂದ 40 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಇದು 144 ವರ್ಷಗಳ ಬಳಿಕ ಬಂದಿರುವುದು ವಿಶೇಷವಾಗಿದ್ದು, ಇನ್ನೊಮ್ಮೆ ಬರಲು 144 ವರ್ಷ ಕಾಯಬೇಕಾಗಿರುವುದರಿಂದ ಜನದಟ್ಟಣೆ ಹೆಚ್ಚಿದೆ.
ಇದನ್ನೂ ಓದಿ:
ಇನ್ನೂ ಓದಿಲ್ಲವೇ?
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)
Tuesday, January 14, 2025
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಇದು ಸುವರ್ಣ ನೋಟ!
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್
ಮಹಾ ಕುಂಭಮೇಳದ ಭಕ್ತರಿಂದ ಮೈ ನಡುಗುವ ಚಳಿಯಲ್ಲೂ ಗಿಜಿಗಿಡುತ್ತಿದೆ. ಯಾವ ಚಳಿಯನ್ನೂ ಲೆಕ್ಕಿಸದೆ
ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.
ಈ ಭವ್ಯ ಮೇಳದ ಸಂಭ್ರಮದ ಚಿತ್ರಗಳು, ವಿಡಿಯೋಗಳು ಯೂ ಟ್ಯೂಬ್, ಪತ್ರಿಕೆ, ಟಿವಿ ಚಾನೆಲ್ ಗಳಲ್ಲಿ ರಾರಾಜಿಸುತ್ತಿವೆ ಮೇಳದ ಭವ್ಯತೆಯ ಕ್ಷಣಗಳ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಹಿಂದಿನ ಟ್ವಿಟ್ಟರ್) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಳಿಯಲ್ಲಿ ಗಢಗಢ ನಡುಗುವ ಈ ಹೊತ್ತಿನಲ್ಲಿ ʼಹೊಳೆ – ನದಿʼಗಳಲ್ಲಿ ಮುಳುಗೇಳುವ ಭಕ್ತರ ಸಂಭ್ರಮದ ಹೊತ್ತಿನಲ್ಲಿ, ʼನಾಗರ ಹೊಳೆʼ ಹೇಗಿರುತ್ತದೋ ಏನೋ ಎಂದು ನೋಡುವ ಇಚ್ಛೆಯಾಯಿತು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ.
ಯೋಚನೆ ಬಂದ ಬಳಿಕ ಸುಮ್ಮನೇ ಕೂರುವ ಜಾಯಮಾನ ಅವರದಲ್ಲ. ಹೆಗಲಿಗೆ ಕ್ಯಾಮರಾ ಏರಿಸಿ ಹೊರಟೇ ಬಿಟ್ಟರು ಸುವರ್ಣ ʼನಾಗರಹೊಳೆʼಗೆ. ನಾಗರ ಹೊಳೆಯ ಈ ಪಯಣ ʼಮಂಜು ಮುಸುಕಿದ ಹಾದಿʼಯಾಗಿತ್ತು.
ʼನಾಗರ ಹೊಳೆʼಯಲ್ಲಿ ಚಳಿಗಾಲದ ಸಂಭ್ರಮ ಹೇಗಿತ್ತು ಎಂಬುದು ಸುವರ್ಣ ಅವರ ಕ್ಯಾಮರಾದಲ್ಲಿ ಸೆರೆಯಾಯಿತು. ಅದನ್ನು ನೋಡುವ ಅವಕಾಶ ಇಲ್ಲಿದೆ. ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ.
-ನೆತ್ರಕೆರೆ ಉದಯಶಂಕರ
ಕೆಳಗಿನವುಗಳನ್ನೂ ಓದಿರಿ:
ಪಕ್ಷಿ ಕಂಡರೆ ಸಾಕು… ʼಶೂಟ್ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)











