Showing posts with label Hegade Nagar. Show all posts
Showing posts with label Hegade Nagar. Show all posts

Friday, August 21, 2026

ವರ ಮಹಾಲಕ್ಷ್ಮಿ ಪೂಜಾ

 ವರ ಮಹಾಲಕ್ಷ್ಮಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಆಗಸ್ಟ್‌ ೨೧ ಶುಕ್ರವಾರ ಶ್ರೀ ವರ ಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ವರಲಕ್ಷ್ಮಿ ವ್ರತದ ಮಹತ್ವವನ್ನು ಅರುಹುವ ಕಥಾ ಶ್ರವಣ, ವರ ಮಹಾಲಕ್ಷ್ಮಿಗೆ ಮಹಿಳೆಯರಿಂದ ಕುಂಕುಮಾರ್ಚನೆ, ಸಂಗೀತ ಸೇವೆ  ನಡೆಯಿತು. ಶ್ರೀ ಮುನಿರಾಜು, ಶ್ರೀ ಕೃಷ್ಣೋಜಿರಾವ್‌, ಶ್ರೀ ಕಾರಿಯಪ್ಪ ಕುಟುಂಬದವರು ಅಲಂಕಾರ, ತಾಂಬೂಲ, ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

Wednesday, July 29, 2026

ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ಸತ್ಯನಾರಾಯಣ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜುಲೈ ೨೯ರ ಬುಧವಾರ ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



Sunday, June 21, 2026

ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


Sunday, May 31, 2026

ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೩೦ರ ಶನಿವಾರ ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಭಕ್ತಿ ಭಾವದೊಂದಿಗೆ ನೆರವೇರಿಸಲಾಯಿತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ದೇವಸ್ಥಾನದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ - ಹೊಸ ತಂಡಕ್ಕೆ ಯಕ್ಷಗಾನ ತರಬೇತಿ 

Sunday, March 22, 2026

ಗೀತಾ ರಾಮಾಯಣ

 ಗೀತಾ ರಾಮಾಯಣ

ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಿನ ದೃಶ್ಯ. (ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ.)

ಅವರು ಅಭ್ಯಾಸ ಮಾಡುತ್ತಿದ್ದದು ಲವಕುಶ ಕಾಳಗದ ಒಂದು ದೃಶ್ಯ.

ಈ ಕಥೆ ಯಾವುದು, ಅದನ್ನು ಹೇಳುತ್ತಿರುವುದು ಏಕೆ? ಹೇಳುತ್ತಿರುವುದು ಯಾರು ಇವೆಲ್ಲ ಪ್ರಶ್ನೆಗಳಿಗೆ ಉತ್ತರ: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿಯ ನಿಕೂ ಹೋಮ್ಸ್‌ ನಲ್ಲಿ 2026 ಮಾರ್ಚ್‌ 27ರ ಸಂಜೆ 6.45 ಗಂಟೆಗೆ.

ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

Thursday, January 29, 2026

ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

 ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ೨೦೨೫ ಜನವರಿ ೨೫ರ ಭಾನುವಾರ ಹಿಂದೂ ಸಮಾಜೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದಿಂದ ʼಭಾರ್ಗವ ವಿಜಯʼ ಯಕ್ಷಗಾನ ಕಾರ್ಯಕ್ರಮ ನಡೆಯಿತು.






ಹಿಮ್ಮೇಳದಲ್ಲಿ ಭಾಗವತರು:ಉಮೇಶ ರಾಜ್ ಮಂದಾರ್ತಿ
ಮದ್ದಳೆ: ನರಸಿಂಹ ಆಚಾರ್ ಕೂರಾಡಿ 
ಚೆಂಡೆ:‌ ಸುಬ್ರಹ್ಮಣ್ಯ ಸಾಸ್ತಾನ
ವೇಷಭೂಷಣ: ಯಕ್ಷ ಕಲಾ ಕೌಸ್ತುಭ ಬೆಂಗಳೂರು
ಉದಯ ಮಂದಾರ್ತಿ,
ಗುರುರಾಜ್‌  ಬಿಲ್ಲಾಡಿ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ಪರಶುರಾಮ – ಶಿವಾಂಷ್
ಕಾರ್ತ್ಯವೀರ್ಯಾರ್ಜನ – ಆದ್ಯ ಕಶ್ಯಪ್
ಕಾಲಾಜ್ಞ – ಆದ್ಯ
ರೇಣುಕೆ -ಆದ್ಯ ಶ್ರೀವಲ್ಲಿ
ಜಮದಗ್ನಿ – ಉಮಾದೇವಿ
ಶತ್ರಜಿತು – ಪುಣ್ಯ

ರಂಗಸ್ಥಳಕ್ಕೆ ಕಳೆ ಕಟ್ಟಿದರು.

ಅದಕ್ಕೂ ಮುನ್ನ ಜನವರಿ ೨೪ರ ಭಾನುವಾರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ತಂಡಕ್ಕಾಗಿ ತಂದ ಹೊಸ ಕಿರೀಟಗಳ ಪೂಜೆಯೂ ನಡೆಯಿತು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ಯಕ್ಷಗಾನ ಭಾರ್ಗವ ವಿಜಯದ ವಿಡಿಯೋಗಳು ಮೇಲಿವೆ. ಯಕ್ಷಗಾನ/ ತಾಳಮದ್ದಳೆಯ ಹೆಚ್ಚಿನ ಸುದ್ದಿಗಳಿಗಾಗಿ  ಮೇಲಿನ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ನೀಡಿ. 

Wednesday, November 5, 2025

ಕಾರ್ತೀಕ ಸತ್ಯನಾರಾಯಣ ಪೂಜಾ

 ಕಾರ್ತೀಕ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಸತ್ಯನಾರಾಯಣ ಪೂಜೆಯನ್ನು ೨೦೨೫ ನವೆಂಬರ್‌ ೫ರ ಬುಧವಾರ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರ, ವಿಡಿಯೋಗಳು ಇಲ್ಲಿವೆ.







Monday, October 20, 2025

ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

 ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ೨೦೨೫ ಅಕ್ಟೋಬರ್‌ ೨೦ರ ಸೋಮವಾರ ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.

ಕೇದಾರ ಗೌರೀ ವ್ರತ ಕಥಾಶ್ರವಣ ಸಹಿತವಾಗಿ ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಪೂಜೆಯನ್ನು ನೆರವೇರಿಸಲಾಯಿತು. ಭಕ್ತರು ಭಜನೆ ಹಾಡಿನೊಂದಿಗೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.


Friday, October 10, 2025

ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

 ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೧೦ರ ಶುಕ್ರವಾರ ಅಶ್ವಯುಜ ಮಾಸದ ಸಾಮೂಹಿಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಚಿತ್ರ, ವಿಡಿಯೋ (by Rashmi Rajesh Hegade) ಇಲ್ಲಿವೆ.






Monday, October 6, 2025

ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ

 ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೬ರ ಸೋಮವಾರ ಅಶ್ವಯುಜ ಮಾಸದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಚಿತ್ರ, ವಿಡಿಯೋಗಳು ಇಲ್ಲಿವೆ.



Thursday, October 2, 2025

ಮಹಾಗಣಪತಿಗೆ ಹಣ್ಣುಗಳ ಅಲಂಕಾರ

ಮಹಾಗಣಪತಿಗೆ ಹಣ್ಣುಗಳ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ಹನ್ನೊಂದನೇ ದಿನವಾದ ೨೦೨೫ರ ಅಕ್ಟೋಬರ್ ‌೦೨ರ ಗುರುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

ಶರನ್ನವರಾತ್ರಿ ಪೂಜಾ ಸಂದರ್ಭದಲ್ಲಿ ೧. ಸುಂದರ್‌ ರಾಜ್ + ಕುಟುಂಬದವರು ಗಣೇಶನಿಗೆ ಶ್ರೀಗಂಧ ಅಲಂಕಾರ, ೨. ರಶ್ಮಿ ರಾಜೇಶ  ಹೆಗಡೆ + ಕುಟುಂಬದವರು ಗಣೇಶನಿಗೆ ಅರಶಿನ ಅಲಂಕಾರ, ೩) ನೆತ್ರಕೆರೆ ಉದಯಶಂಕರ ನಾರಾಯಣ ಭಟ್+‌ ಕುಟುಂಬದವರು ಗಣೇಶನಿಗೆ ವಿಭೂತಿ ಅಲಂಕಾರ, ೪) ಶಕುಂತಲಾ ನಾಗರಾಜ್‌ + ಕುಟುಂಬದವರು- ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ, ೫) ರಾಘವೇಂದ್ರ ಕಾಮತ್‌ + ಕುಟುಂಬದವರು –ಗಣೇಶನಿಗೆ ಅರಶಿನ – ಕುಂಕುಮ ಅಲಂಕಾರ, ೬) ಶ್ರೀ ಮುನಿರಾಜು – ಮಮತಾ + ಕುಟುಂಬದವರು ಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯರಿಗೆ ಡ್ರೈ ಫ್ರುಟ್ಸ್‌ ಅಲಂಕಾರ+ದೇವಸ್ಥಾನಕ್ಕೆ ಹೂವಿನ ಅಲಂಕಾರ, ಪ್ರಸಾದ, ೭) ಎಚ್‌ ಆರ್.‌ ಸೇತೂರಾಂ-ಶಾಂತಾ _- ಕುಟುಂಬದವರು- ಗಣೇಶನಿಗೆ ನವಧಾನ್ಯ ಅಲಂಕಾರ, ೮) ಅಲೋಕ್‌ ದಾಸ್ + ಕುಟುಂಬದವರು- ಗಣೇಶನಿಗೆ ತರಕಾರಿ ಅಲಂಕಾರ,
೯. ಗೌರವ್‌ ಮತ್ತು ಕುಟುಂಬ, ಗೀತಾ ಎಚ್.ವಿ. ಉದಯಶಂಕರ್‌ + ಕುಟುಂಬದವರು ಆಂಜನೇಯನಿಗೆ ನಾಣ್ಯ ಅಲಂಕಾರ, ಪ್ರಸಾದ, ೧೦.ತೇಜಸ್‌ ರೆಡ್ಡಿ + ಕುಟುಂಬದವರು ಗಣೇಶನಿಗೆ ಖರ್ಜೂರ ಅಲಂಕಾರ, ೧೧. ಸತ್ಯನಾರಾಯಣ + ಕುಟುಂಬದವರು ಗಣೇಶನಿಗೆ ಹಣ್ಣುಗಳ ಅಲಂಕಾರ ಸೇವೆ ಒದಗಿಸಿದ್ದರು.

ಈ ಅವಧಿಯಲ್ಲಿ ಈ ಎಲ್ಲ ಸೇವಾಕರ್ತರ ಅಲಂಕಾರ+ ಪ್ರಸಾದ ಸೇವೆಯ ಜೊತೆಗೆ ವಿಸ್ಮಯ್‌ ಮತ್ತು ಕುಟುಂಬ, ಉಮಾ ಜಯಶಂಕರ್‌ ಮತ್ತು ಕುಟುಂಬ, ಕೃಷ್ಣೋಜಿ ರಾವ್‌ ಮತ್ತು ಕುಟುಂಬ, ದಾಮೋದರ್‌ ಮತ್ತು ಕುಟುಂಬ, ರವಿಚಂದ್ರನ್‌ ಮತ್ತು ಕುಟುಂಬ, ಮನೋಹರ್‌ ಮತ್ತು ಕುಟುಂಬ, ರಮೇಶ ಜಿ ಮತ್ತು ಕುಟುಂಬ,  ಶ್ರೀನಿವಾಸ ಶಾಸ್ತ್ರಿ ಮತ್ತು ಕುಟುಂಬ, ಮೂಲ್ಯ ಮತ್ತು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದ್ದರು.

Wednesday, October 1, 2025

ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ

 ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ಹತ್ತನೇ ದಿನವಾದ ೨೦೨೫ರ ಅಕ್ಟೋಬರ್ ‌೦೧ರ ಬುಧವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಖರ್ಜೂರ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

Tuesday, September 30, 2025

ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

 ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಒಂಭತ್ತನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೩೦ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ನಾಣ್ಯಗಳ ಅಲಂಕಾರ.

ಮಹಿಳೆಯರಿಂದ ಭಜನಾ ಸೇವೆ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


Monday, September 29, 2025

ಗಣಪನಿಗೆ ತರಕಾರಿ ಅಲಂಕಾರ

 ಗಣಪನಿಗೆ ತರಕಾರಿ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಎಂಟನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೯ರ ಸೋಮವಾರ ಶ್ರೀ ಬಾಲಾಜಿ ಮಹಾಗಣಪತಿಗೆ ತರಕಾರಿ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.



ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

Sunday, September 28, 2025

ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

 ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಏಳನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೮ರ ಭಾನುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ನವಧಾನ್ಯ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕೈಂಕರ್ಯ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.



Saturday, September 27, 2025

ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

 ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಆರನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೭ರ ಶನಿವಾರ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಸ್ವಾಮಿಗೆ ಒಣ್ಣ ಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು. 




Friday, September 26, 2025

ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

 ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಐದನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೬ರ ಶುಕ್ರವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ.


ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.




ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

Thursday, September 25, 2025

ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ

 ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ನಾಲ್ಕನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೫ರ ಗುರುವಾರ ಶ್ರೀ ವೆಂಕಟೇಶ್ವರನಿಗೆ ಕುಂಕುಮ (ಸಿಂಧೂರ) ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.





Wednesday, September 24, 2025

ಮಹಾಗಣಪತಿಗೆ ವಿಭೂತಿ ಅಲಂಕಾರ

 ಮಹಾಗಣಪತಿಗೆ ವಿಭೂತಿ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಮೂರನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೪ರ ಬುಧವಾರ ಶ್ರೀ ಬಾಲಾಜಿ ಮಹಾಗಣಪತಿಗೆ ವಿಭೂತಿ ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.





Tuesday, September 23, 2025

ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ

 ಅಭಯ ಆಂಜನೇಯನಿಗೆ ಶ್ರೀ ಗಂಧದ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಎರಡನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೩ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಶ್ರೀಗಂಧದ ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


Advertisement