Showing posts with label ಬಾಲಾಜಿ ಮಹಾಗಣಪತಿ ದೇವಸ್ಥಾನ. Show all posts
Showing posts with label ಬಾಲಾಜಿ ಮಹಾಗಣಪತಿ ದೇವಸ್ಥಾನ. Show all posts

Sunday, February 8, 2026

ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

 ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವವನ್ನು ೨೦೨೬ ಫೆಬ್ರುವರಿ ೦೮ರ ಮಾಘ ಬಹುಳ ಸಪ್ತಮಿಯಂದು ಶ್ರದ್ಧಾ ಭಕ್ತಿಯೊಂದಿಗೆ ಸಡಗರದಿಂದ ನೆರವೇರಿಸಲಾಯಿತು.

ದೇವರ ಬಲವರ್ಧನೆ ಹಾಗೂ ಭಕ್ತರ ಕ್ಷೇಮಾಭಿವೃದ್ಧಿಗಾಗಿ ಪಂಚ ಹೋಮಗಳನ್ನು ಋತ್ವಿಜ ಶ್ರೀ ಶ್ರೀಧರ್‌ ಭಟ್‌ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದಕ್ಕೂ ಮುನ್ನ ಬೆಳಗ್ಗೆ ಎಲ್ಲ ದೇವರಿಗೆ ಕ್ಷೀರಾಭಿಷೇಕವನ್ನು ಮಾಡಲಾಯಿತು.


ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ನವಗ್ರಹಗಳು ಮತ್ತು ನಾಗರಾಜರನ್ನು ಆವಾಹಿಸಿ ಅವರ ಪೂಜೆಯೊಂದಿಗೆ ಮಹಾಗಣಪತಿಗಾಗಿ ಅಥರ್ವಶೀರ್ಷ ಹೋಮ, ವೆಂಕಟೇಶ್ವರನಿಗಾಗಿ ಶ್ರೀ ವೆಂಕಟೇಶ್ವರ ಮೂಲ ಮಂತ್ರ ಹೋಮ, ಅಭಯ ಆಂಜನೇಯನಿಗಾಗಿ ಶ್ರೀ ಆಂಜನೇಯ ಮೂಲಮಂತ್ರ ಹೋಮ, ಆದಿತ್ಯಾದಿ ನವಗ್ರಹರಿಗಾಗಿ ನವಗ್ರಹ ಹೋಮ, ಸುಬ್ರಹ್ಮಣ್ಯ- ನಾಗರಾಜನಿಗೆ ಸರ್ಪ ಸೂಕ್ತ ಹೋಮ ಹಾಗೂ ದೇವರ ಬಲವೃದ್ಧಿಗಾಗಿ ಕಲಾ ಹೋಮವನ್ನು ನೆರವೇರಿಸಲಾಯಿತು.

ಹೋಮದ ಬಳಿಕ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಮುನಿರಾಜು ಅವರು ಅಲಂಕಾರ ಹಾಗೂ ರಾತ್ರಿಯ ಪ್ರಸಾದ ಸೇವೆ, ಶ್ರೀ ಎಚ್.ವಿ. ಉದಯಶಂಕರ, ನಾಗರಾಜ್‌ ಕೆ.ಎಂ., ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಭಕ್ತರು ಭಾರೀ ಸಂಖ್ಯೆಯಲ್ಲಿ ಹೋಮ ಕಲಾಪದಲ್ಲಿ ಪಾಲ್ಗೊಂಡರು.

ಯುವ ನಾಯಕ ಶ್ರೀ ಶಿವಕುಮಾರ್‌, ವೇಣುಗೋಪಾಲ್‌, ಯಕ್ಷ ಕಲಾ ಕೌಸ್ತುಭ ತಂಡದ ಕಲಾವಿದ ಮಕ್ಕಳು ಅವರ ಪಾಲಕರು ಸೇರಿದಂತೆ ಆಸುಪಾಸಿನ ಬಡಾವಣೆಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯಕ್ಷ ಕಲಾ ಕೌಸ್ತುಭ ತಂಡದ ಸದಸ್ಯರು ಶ್ರೀ ಉಮೇಶರಾಜ್‌ ಮಂದಾರ್ತಿ ಅವರ ನೇತೃತ್ವದಲ್ಲಿ ಗಣಪತಿ ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಕಳಗಟ್ಟಿಸಿದರು.

ವಾರ್ಷಿಕೋತ್ಸವ ಸಡಗರದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


Thursday, March 13, 2025

ಮಾಘ ಸತ್ಯನಾರಾಯಣ ಪೂಜೆ

 ಮಾಘ ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ
ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ,
ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ
ದೇವಸ್ಥಾನದಲ್ಲಿ
೨೦೨೫ ಮಾರ್ಚ್‌ ೧೩ರ ಗುರುವಾರ
 ಮಾಘ ಮಾಸದ ಸತ್ಯ ನಾರಾಯಣ ಪೂಜೆ
ನಡೆಯಿತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ
 ವಿಡಿಯೋಗಳು ಇಲ್ಲಿವೆ.




ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

Thursday, February 27, 2025

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

 ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಫೆಬ್ರುವರಿ ೨೬ರ ಬುಧವಾರ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.

ಬೆಳಗ್ಗೆ ಭಕ್ತರೊಬ್ಬರ ಮನೆಯ ಮಗುವಿಗೆ ನಾಮಕರಣ ಕಾರ್ಯಕ್ರಮವು ಶಿವರಾತ್ರಿ ಸಂಭ್ರಮಕ್ಕೆ ಹೊಸ ಕಳೆ ನೀಡಿತ್ತು.

ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮತ್ತು ನವಗ್ರಹಗಳಿಗೆ ಅಭಿಷೇಕ, ಅಲಂಕಾರ ಪೂಜೆಯೊಂದಿಗೆ ಮುಂಜಾನೆಯೇ ಸಡಗರ. ಇಡೀ ದಿನ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ವಿಶ್ವದ ಗಮನ ಸೆಳೆದಿರುವ ಕುಂಭಮೇಳ ಸ್ಥಳವಾದ ಪ್ರಯಾಗದ ತ್ರಿವೇಣಿ ಸಂಗಮದಿಂದ ತಂದ ಗಂಗಾಜಲದಲ್ಲಿ ಶಿವಲಿಂಗಕ್ಕೆ  ಅಭಿಷೇಕ ಮಾಡಿ ಭಕ್ತರು ಪುನೀತರಾದರು.


ಸಂಜೆ ಶಿವನಿಗೆ ರುದ್ರಾಭಿಷೇಕ ಮಹಾ ಪೂಜೆ ನೆರವೇರಿತು.   


ಮಹಾಶಿವರಾತ್ರಿ ಆಚರಣೆ ಸಂದರ್ಭದ ಕೆಲವು ಚಿತ್ರಗಳು ವಿಡಿಯೋಗಳು ಇಲ್ಲಿವೆ. ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.


ಇವುಗಳನ್ನೂ ಓದಿರಿ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

Friday, February 21, 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

 ದೇಗುಲ ವಾರ್ಷಿಕೋತ್ಸವ: ಪಂಚಹೋಮ


ಬೆಂ
ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ೨೦೨೫ ಫೆಬ್ರುವರಿ ೨೦ ಗುರುವಾರ ಸಂಪನ್ನಗೊಂಡಿತು.
ವಿಡಿಯೋ ನೋಡಲು ಎಡಬದಿಯ ಚಿತ್ರ ಕ್ಲಿಕ್‌ ಮಾಡಿರಿ.

ದೇವಾಲಯಕ್ಕೆ ಒಂದು ವರ್ಷ ತುಂಬಿದ ಸಲುವಾಗಿ ಈ ಸಂದರ್ಭದಲ್ಲಿ ಪಂಚಹೋಮಗಳ ಸಲುವಾಗಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ಶ್ರೀ ಸುಬ್ರಹ್ಮಣ್ಯ ಹಾಗೂ ನವಗ್ರಹ ದೇವತೆಗಳನ್ನು ಸ್ಥಾಪಿಸಿ ಅರ್ಚನೆ ನೆರವೇರಿಸಲಾಯಿತು.


ಆ ಬಳಿಕ ಶ್ರೀ ಗಣಪತಿ ಅಥರ್ವ ಶೀರ್ಷ ಹೋಮ, ಶ್ರೀ ಶ್ರೀ ವೆಂಕಟೇಶ್ವರ ಮೂಲಮಂತ್ರ ಹೋಮ,ಶ್ರೀ ಆಂಜನೇಯ ಮೂಲಮಂತ್ರ ಹೋಮ, ನವಗ್ರಹ ಹೋಮ, ಸರ್ಪ ಸೂಕ್ತ ಹೋಮಗಳನ್ನು ನಡೆಸಲಾಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.


ಪಂಚಹೋಮಗಳ ಬಳಿಕ ಮಹಾಮಂಗಳಾರತಿ ನಡೆಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

ಸಂಜೆ ಭಕ್ತರು ಭಜನೆ ಸೇವೆ ಸಲ್ಲಿಸಿದರು. ಆಸುಪಾಸಿನ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುನಿರಾಜು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇವುಗಳನ್ನೂ ಓದಿರಿ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Monday, January 13, 2025

10ನೇ ಸತ್ಯನಾರಾಯಣ ಪೂಜೆ

 10ನೇ  ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ
ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ
೨೦೨೫ ಜನವರಿ೧೩ರ ಸೋಮವಾರ ೧೦ನೇ
ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ
ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.






ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.

Wednesday, November 20, 2024

ಅಂಗಾರಕ ಸಂಕಷ್ಟಿ ಪೂಜಾ

ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೯ರ ಮಂಗಳವಾರ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ. 










ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

ಇದನ್ನೂ ಓದಿರಿ:

Advertisement