Sunday, August 10, 2025

ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

 ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ಬೆಂಗಳೂರು: ದೇಶದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ೨೦೨೫ ಆಗಸ್ಟ್‌ ೧೦ರ ಭಾನುವಾರ ಪಾತ್ರವಾಯಿತು. ಬೆಂಗಳೂರಿನ ರಾಗಿಗುಡ್ಡದಲ್ಲಿ ʼನಮ್ಮ ಮೆಟ್ರೋʼ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವುದರೊಂದಿಗೆ ಈ ಹೆಗ್ಗಳಿಕೆ ಬೆಂಗಳೂರಿನ ಮುಡಿಗೇರಿತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲೇ ಪಯಣಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ಇತರ ಗಣ್ಯರೂ ಪ್ರಧಾನಿಯರೊಂದಿಗೆ ಇದ್ದರು.

೧೯.೧೫ ಕಿಮೀ ಉದ್ದದ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ ೭೬.೯೫ ಕಿಮೀಯಿಂದ ೯೬.೧೦ ಕಿಮೀಗೆ ವಿಸ್ತರಣೆಗೊಂಡಿತು. ಈ ಮಾರ್ಗದಲ್ಲಿ ೧೬ ನಿಲ್ದಾಣಗಳಿದ್ದು  ಮೂರು ರೈಲುಗಳು ನಿತ್ಯ ಸಂಚರಿಸಲಿವೆ.

ಇದಕ್ಕೂ ಮುನ್ನ ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ-ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಇಲ್ಲಿದೆ ಭಾರತದ ಮೆಟ್ರೋ ಕಥೆ

ಇಲ್ಲಿದೆ ಭಾರತದ ಮೆಟ್ರೋ ಕಥೆಯ ವಿಡಿಯೋ. ಇದನ್ನು ಈದಿನ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏನು ಹೇಳಿದರು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

No comments:

Advertisement