Saturday, August 30, 2025

ದಾರೂಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ?

 ದಾರೂಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ?

ಪ್ರಧಾನಿ ಮೋದಿಗೆ ಇದನ್ನು ಕೊಟ್ಟದ್ದೇಕೆ?

ದಾರೂಮಾ ಬೊಂಬೆಯು ಜಪಾನಿನ ಸಾಂಸ್ಕೃತಿಕ ಪ್ರತೀಕ ಹಾಗೂ ಜನಪ್ರಿಯ ಸ್ಮರಣಿಕೆಯಾಗಿದೆ. ಇದು ಝೆನ್ ಬೌದ್ಧಧರ್ಮದ ಸ್ಥಾಪಕರಾದ ಬೋಧಿಧರ್ಮನ ಪ್ರತಿರೂಪವಾಗಿದ್ದು, ಪರಿಶ್ರಮ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ.
ಸಾಂಪ್ರದಾಯಿಕವಾಗಿ
, ಗುರಿಗಳನ್ನು ನಿಗದಿಪಡಿಸಲು ಮತ್ತು ಸಾಧಿಸಲು ಈ ಬೊಂಬೆಯನ್ನು ಬಳಸಲಾಗುತ್ತದೆ: ಒಂದು ಗುರಿಯನ್ನು ನಿಗದಿಪಡಿಸಿದಾಗ ಒಂದು ಕಣ್ಣಿಗೆ ಬಣ್ಣ ಹಚ್ಚಲಾಗುತ್ತದೆ ಮತ್ತು ಅದನ್ನು ಸಾಧಿಸಿದಾಗ ಇನ್ನೊಂದು ಕಣ್ಣಿಗೆ ಬಣ್ಣ ತುಂಬಲಾಗುತ್ತದೆ. ಇದರ ದುಂಡಾದ ತಳವು ಅದನ್ನು ಬದಿಗೆ ವಾಲಿಸಿದಾಗಲೂ ನೇರವಾಗಿ ನಿಲ್ಲಲು ಸಹಾಯ ಮಾಡುತ್ತದೆ, ಇದು ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಮತ್ತು "ಏಳು ಬಾರಿ ಬಿದ್ದರೂ ಎಂಟು ಬಾರಿ ನಿಲ್ಲು" ಎಂಬ ಗಾದೆಯನ್ನು ಸಂಕೇತಿಸುತ್ತದೆ.

ಭಾರತದ ಜೊತೆ ದಾರೂಮಾ ನಂಟು

ದಾರೂಮಾ ಬೊಂಬೆ, ಬೋಧಿಧರ್ಮನಿಂದ ಪ್ರೇರಿತವಾಗಿದೆ. ಬೋಧಿಧರ್ಮನು ಕಾಂಚೀಪುರಂನ ಭಾರತೀಯ ಸನ್ಯಾಸಿ. ಜಪಾನಿನಲ್ಲಿ ದಾರೂಮಾ ದೈಶಿ ಎಂದು ಪೂಜಿಸಲ್ಪಡುತ್ತಾನೆ. ಪ್ರತೀತಿಯ ಪ್ರಕಾರ, ಬೋಧಿಧರ್ಮನು ತನ್ನ ಕಾಲುಗಳನ್ನು ಮಡಚಿ ಒಂಬತ್ತು ವರ್ಷಗಳ ಕಾಲ ನಿರಂತರವಾಗಿ ಗೋಡೆಯತ್ತ ಮುಖ ಮಾಡಿ ಧ್ಯಾನ ಮಾಡಿದ್ದನು. ಈ ಕಾರಣಕ್ಕಾಗಿಯೇ ದಾರೂಮಾ ಬೊಂಬೆಯನ್ನು ಅಂಗಗಳು ಅಥವಾ ಕಣ್ಣುಗಳಿಲ್ಲದೆ ದುಂಡಾದ ಆಕಾರದಲ್ಲಿ ತಯಾರಿಸಲಾಗುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶೋರಿನ್ಜಾನ್ ದಾರೂಮಾ-ಜಿ ದೇವಾಲಯದ ಅರ್ಚಕರು ದಾರೂಮಾ ಬೊಂಬೆಯನ್ನು ೨೦೨೫ ಆಗಸ್ಟ್‌ ೮ರ ಶುಕ್ರವಾರ ಉಡುಗೊರೆಯಾಗಿ ನೀಡಿದರು. ಪ್ರಧಾನಿಯವರು ತಮ್ಮ ಎರಡು ದಿನಗಳ ಭೇಟಿಗಾಗಿ ಟೋಕಿಯೊಗೆ ಆಗಮಿಸಿದ್ದರು.

ಪ್ರಧಾನಿ ಮೋದಿ ಅವರು ದಾರೂಮಾ ಬೊಂಬೆಯನ್ನು ಉಡುಗೊರೆಯಾಗಿ ನೀಡಿದಕ್ಕಾಗಿ ಸೀಶಿ ಹಿರೋಸೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.

"ಟಕಾಸಾಕಿ-ಗುನ್ಮಾದ ಶೋರಿನ್ಜಾನ್ ದಾರೂಮಾ-ಜಿ ದೇವಾಲಯದ ಮುಖ್ಯ ಅರ್ಚಕ ರೆವ್ ಸೀಶಿ ಹಿರೋಸೆ ಅವರನ್ನು ಭೇಟಿ ಮಾಡಿದ್ದು ಗೌರವದ ವಿಷಯ. ಅವರು ದಾರೂಮಾ ಬೊಂಬೆಯನ್ನು ನನಗೆ ಉಡುಗೊರೆಯಾಗಿ ನೀಡಿದ್ದಕ್ಕೆ ಅವರಿಗೆ ನನ್ನ ಕೃತಜ್ಞತೆಗಳು. ದಾರೂಮಾ ಜಪಾನಿನಲ್ಲಿ ಒಂದು ಪ್ರಮುಖ ಸಾಂಸ್ಕೃತಿಕ ಪ್ರತೀಕವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಭಾರತದೊಂದಿಗೆ ಸಂಬಂಧ ಹೊಂದಿದೆ. ಇದು ಪ್ರಸಿದ್ಧ ಸನ್ಯಾಸಿ ಬೋಧಿಧರ್ಮನಿಂದ ಪ್ರಭಾವಿತವಾಗಿದೆ" ಎಂದು ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.


No comments:

Advertisement