Wednesday, August 13, 2025

ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ

 ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಆಗಸ್ಟ್‌ ೧೨ ಮತ್ತು ೧೩ರಂದು ಭಾರೀ ವಿಶೇಷ.


ದೇವಸ್ಥಾನದಲ್ಲಿ ಒಂದೆಡೆಯಲ್ಲಿ ಅಂಗಾರಕ ಸಂಕಷ್ಟಿ ಪೂಜೆಯ ಸಂಭ್ರಮ ಒಂದಡೆಯಾದರೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮಕ್ಕಳ ʼದೇವಾಲಯ ದರ್ಶನʼ ಕಾರ್ಯಕ್ರಮ ಇನ್ನೊಂದೆಡೆ. ಎರಡೂ ದಿನವೂ ಸುಮಾರು ೧೦೦ರಿಂದ ೧೫೦ ಮಂದಿ ಮಕ್ಕಳು ದೇವಾಲಯಕ್ಕೆ ಬಂದು ಶ್ಲೋಕ, ಭಜನೆ ಹಾಡುಗಳನ್ನು ಹೇಳಿ ದೇವಾಲಯದಲ್ಲಿ ಸಂಚಲನ ಮೂಡಿಸಿದರು.


ಅಂಗಾರಕ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡರೆ ೨೧ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡ ಫಲ ಲಭಿಸುವುದೆಂಬ ಕಾರಣಕ್ಕಾಗಿ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು.

ಈ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.









ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

No comments:

Advertisement