ಇಸ್ರೇಲ್ ವೈಮಾನಿಕ ದಾಳಿಗೆ ಹೌತಿ ಪ್ರಧಾನ ಮಂತ್ರಿ ಬಲಿ
ನವದೆಹಲಿ: ಯೆಮೆನ್‌ನ
ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದಲ್ಲಿ ೨೦೨೫ ಆಗಸ್ಟ್ ೩೦ರ ಶನಿವಾರ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ಲಿಯ ಸರ್ಕಾರದ ಪ್ರಧಾನ ಮಂತ್ರಿ
ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ತಿಳಿಸಿದ್ದಾರೆ.
ಗುರುವಾರ ಸನಾದಲ್ಲಿ
ನಡೆದ ಇಸ್ರೇಲಿ ದಾಳಿಯಲ್ಲಿ ಪ್ರಧಾನಿ ಅಹ್ಮದ್ ಅಲ್-ರಹಾವಿ ಮತ್ತು ಅವರೊಂದಿಗೆ
ಹಲವಾರು ಮಂತ್ರಿಗಳು ಸಾವನ್ನಪ್ಪಿದ್ದಾರೆ ಎಂದು ಬಂಡುಕೋರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದಾಳಿಯ ಬಗ್ಗೆ
ಇಸ್ರೇಲ್ ಸೇನೆಯು "ಯೆಮೆನ್‌ನ ಸನಾ ಪ್ರದೇಶದಲ್ಲಿನ ಹೌತಿ
ಭಯೋತ್ಪಾದಕ ಆಡಳಿತದ ಸೇನಾ ಗುರಿಯ ಮೇಲೆ ನಿಖರವಾಗಿ ದಾಳಿ
ನಡೆಸಿದೆ" ಎಂದು ಹೇಳಿದೆ.
ಎಎಫ್‌ಪಿ ಪ್ರಕಾರ, "ನಾವು ನಮ್ಮ ಹೋರಾಟಗಾರ ಅಹ್ಮದ್ ಘಾಲೆಬ್ ನಾಸರ್ ಅಲ್-ರಹಾವಿ ಮತ್ತು ಅವರ ಹಲವಾರು
ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ ಎಂದು ಘೋಷಿಸುತ್ತೇವೆ. ಅವರು ಇಸ್ರೇಲ್‌ನ ಕುಟಿಲ ಮತ್ತು
ಕ್ರಿಮಿನಲ್ ಶತ್ರುಗಳಿಂದ ಗುರಿಯಾಗಿಸಲ್ಪಟ್ಟಿದ್ದಾರೆ" ಎಂದು ಹೌತಿಗಳ ಹೇಳಿಕೆ ತಿಳಿಸಿದೆ.
"ಪ್ರಧಾನಿಯವರ ಇತರ
ಸಂಪುಟ ಸಹೋದ್ಯೋಗಿಗಳು ಕೂಡ ಗಾಯಗೊಂಡಿದ್ದು, ಗುರುವಾರ
ಮಧ್ಯಾಹ್ನದಿಂದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ಅಲ್-ರಹಾವಿ ಅವರು
ಆಗಸ್ಟ್ 2024ರಿಂದ
ಹೌತಿ ನೇತೃತ್ವದ ಸರ್ಕಾರದ
ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರದ ನಿಯಮಿತ ಕಾರ್ಯಾಗಾರದ ವೇಳೆ ಅವರ ಮತ್ತು ಇತರ
ಮಂತ್ರಿಗಳ ಮೇಲೆ ದಾಳಿ ಮಾಡಲಾಗಿದೆ. ಇಸ್ರೇಲ್ ಗಾಜಾ ಯುದ್ಧದ
ನಂತರ ಮಾಡಿದ ದಾಳಿಗಳಲ್ಲಿ ಸತ್ತ ಉನ್ನತ ಮಟ್ಟದ ಅಧಿಕಾರಿ ಇವರೇ ಆಗಿದ್ದಾರೆ.
ಇಸ್ರೇಲ್ ಸೇನೆಯು ಗುರುವಾರ ಹೌತಿಗಳ ನಿಯಂತ್ರಣದಲ್ಲಿರುವ ಸನಾ ರಾಜಧಾನಿಯ ಮೇಲೆ ದಾಳಿ ನಡೆಸಿದೆ. ಇರಾನ್ ಬೆಂಬಲಿತ ಹೌತಿಗಳು 22 ತಿಂಗಳುಗಳಿಂದ ಇಸ್ರೇಲ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸುತ್ತಿದ್ದಾರೆ ಮತ್ತು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಹೌತಿಗಳ ಮೇಲೆ ದಾಳಿ ನಡೆಸುತ್ತಿದೆ. ಗಾಜಾ ಯುದ್ಧದ ನಡುವೆ ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲವಾಗಿ ತಾವು ದಾಳಿ ನಡೆಸುತ್ತಿರುವುದಾಗಿ ಹೌತಿಗಳು ಹೇಳಿದ್ದಾರೆ.

No comments:
Post a Comment