Friday, September 26, 2025

ಭಿಕ್ಷೆ ಬೇಡುವಿರೇಕೆ ಇರುವ ʼಮಾರ್ಗʼವ ಬಿಟ್ಟು...?

 ಭಿಕ್ಷೆ ಬೇಡುವಿರೇಕೆ ಇರುವ ʼಮಾರ್ಗʼಬಿಟ್ಟು...?

ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಮಾರ್ಗಗಳನ್ನು ಬಿಟ್ಟು ವಿಪ್ರೋ ಸಂಸ್ಥೆಯ ಅಜೀಮ್‌ ಪ್ರೇಮ್‌ ಜಿ ಬಳಿ ಭಿಕ್ಷೆ ಬೇಡುವಿರೇಕೆ ಎಂದು ಬೆಳ್ಳಂದೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (RWA) ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸಂಘವು ಹೊರ ವರ್ತುಲ ರಸ್ತೆಯ (Outer Ring Road) ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಂದೇಶದಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ.

 ಸರ್ಜಾಪುರ ರಸ್ತೆಯನ್ನು ಹೊರ ವರ್ತುಲ ರಸ್ತೆಗೆ ಸಂಪರ್ಕಿಸುವ ರಸ್ತೆ ವಿನ್ಯಾಸವನ್ನು ವಿಸ್ತರಿಸುವುದು ಅತ್ಯಂತ ಅವಶ್ಯಕ ಎಂದು ಸಂಘವು ಸಂದೇಶದಲ್ಲಿ ಒತ್ತಿ ಹೇಳಿದೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿರುವ 'ಸೇವ್ ಬೆಳ್ಳಂದೂರು', ವಿಪ್ರೋ ಕ್ಯಾಂಪಸ್ ಬಳಿ ಸುಮಾರು 1 ಕಿ.ಮೀ.ಗಿಂತಲೂ ಕಡಿಮೆ ಉದ್ದದ ಎರಡು 'ಸಮಗ್ರ ಅಭಿವೃದ್ಧಿ ಯೋಜನಾ ರಸ್ತೆಗಳು' (Comprehensive Development Plan roads) ಇವೆ. ಈ ರಸ್ತೆಗಳನ್ನು ಬಳಸಿದರೆ, ಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ 7,500 PCU ವಾಹನಗಳ ಪೈಕಿ, ಸುಮಾರು 38% ರಷ್ಟು ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.

ಈ ರಸ್ತೆಗಳ ಸುಧಾರಿತ ಸಂಪರ್ಕದಿಂದ ಸಹಸ್ರಾರು ಮಂದಿ ಶಾಲಾ ಮಕ್ಕಳು ಮತ್ತು ವೃತ್ತಿ ನಿರತರಿಗೆ ಅನುಕೂಲವಾಗಲಿದೆ ಎಂದು ಸೇವ್‌ ಬೆಳ್ಳಂದೂರು ಹೇಳಿದೆ.

ಈಜಿಪುರ ರ‍್ಯಾಂಪ್ ಇಬ್ಲೂರು ಜಂಕ್ಷನ್‌ನೊಳಗೆ ಕೇವಲ 1 ಕಿ.ಮೀ. ದೂರದಲ್ಲಿದೆ, ಇದು ಸರ್ಜಾಪುರ ರಸ್ತೆಯ ನಿವಾಸಿಗಳಿಗೆ ದಟ್ಟಣೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅನೇಕ ಪ್ರಯಾಣಿಕರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಾರೆ, ದೈನಂದಿನ ಪ್ರಯಾಣದ ಸಮಯದಲ್ಲಿ ತಮ್ಮ ಕಾರುಗಳಲ್ಲಿಯೇ ಬಂಧಿಗಳಾಗುತ್ತಾರೆ ಎಂದು ಸಂದೇಶ ಹೇಳಿದೆ.

No comments:

Advertisement