ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!
ಪ್ರಧಾನಿ
ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025
ನವೆಂಬರ್ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.
ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ
ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.
ಈ ಕ್ಷಣವು ಕೋಟ್ಯಂತರ
ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.
ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗ, ಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.
ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆ, ಶ್ರೀ
ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು
ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.
ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು
ಗಣ್ಯರು ಸಾಕ್ಷಿಯಾದರು.
(ವೀಡಿಯೊ ಕೃಪೆ: Instagram ನಲ್ಲಿ MyGovindia)


No comments:
Post a Comment