Sunday, November 9, 2025

ಈ ಹಾಡು ವಿವಾದ ಆಗಬೇಕೇ?

 ಈ ಹಾಡು ವಿವಾದ ಆಗಬೇಕೇ?

ಬೆಂಗಳೂರು- ಎರ್ನಾಕುಳಂ ನಡುವೆ ಸಂಚರಿಸುವ ನೂತನ ವಂದೇ ಭಾರತ್‌ ರೈಲು ಸೇರಿದಂತೆ ನಾಲ್ಕು ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ 2025 ನವೆಂಬರ್‌ 08ರ ಶನಿವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಈ ರೈಲುಗಳ ಪೈಕಿ ಬೆಂಗಳೂರು – ಎರ್ನಾಕುಳಂ ನಡುವಣ ವಂದೇ ಭಾರತ್‌ ರೈಲುಗಾಡಿಗೆ ಕೇರಳ ಚೆಂಡೆಯ ಸಂಭ್ರಮದೊಂದಿಗೆ ಚಾಲನೆ ಲಭಿಸಿತು. ಈ ಸಂದರ್ಭದಲ್ಲಿ ಕೇರಳದ ಸರಸ್ವತಿ ವಿದ್ಯಾಲಯದ ಮಕ್ಕಳು ತಮ್ಮ ಶಾಲಾ ಗೀತೆಯನ್ನು ರೈಲಿನಲ್ಲಿ ಹಾಡಿದರು.

ಈ ಹಾಡಿನ ವಿಡಿಯೋ ಇದೀಗ ವೈರಲ್‌ ಆಗಿದ್ದು ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಮೂಲವಾಗಿದೆ. ಇದು ಆರೆಸ್ಸೆಸ್‌ ಹಾಡು. ಇದನ್ನು ರೈಲಿನಲ್ಲಿ ಮಕ್ಕಳಿಂದ ಹಾಡಿಸಿದ್ದು ಅಪಾಯಕಾರಿ ಪ್ರವೃತ್ತಿ ಎಂಬಿತ್ಯಾದಿಯಾಗಿ ಕೇರಳದ ಮುಖ್ಯಮಂತ್ರಿ ಮಾತನಾಡಿದ್ದಾರೆ. ಇತರ ಹಲವರೂ ಅವರ ಟೀಕೆಗೆ ದನಿಗೂಡಿದ್ದಾರೆ.

ಆದರೆ ಇದು ತಮ್ಮ ಶಾಲೆಯ ಶಾಲಾಗೀತೆ. ಯಾವ ಸಂಘಟನೆಯ ಹಾಡೂ ಅಲ್ಲ ಎಂಬುದಾಗಿ ಸರಸ್ವತಿ ವಿದ್ಯಾಲಯ ಸ್ಪಷ್ಟ ಪಡಿಸಿದೆ. ಆದರೂ ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟ ಮುಂದುವರೆದಿದೆ.

ಈ ಹಾಡನ್ನು ಇಲ್ಲಿ ಪೂರ್ತಿಯಾಗಿ ಆಲಿಸಿ. ಈ ಹಾಡೂ ವಿವಾದದ ಕೇಂದ್ರವಾಗಬೇಕೇ?


No comments:

Advertisement