ಇಂದಿನ ಇತಿಹಾಸ
ನವೆಂಬರ್ 10
ಬ್ಯೂನೋಸ್ ಐರಿಸ್ಸಿನ ಬೊಂಬೊನೇರಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ತಮ್ಮ `ವಿದಾಯ ಆಟ'ವನ್ನು ಆಡಿದರು.
ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯ ರೈತರಾದ ದೇವಿಂದರ್ ಸಿಂಗ್ ಮತ್ತಿತರರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಪಿ.ಸಿನ್ಹಾ ಹಾಗೂ ಹರ್ಜೀತ್ ಸಿಂಗ್ ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿತು. ಜೊತೆಗೆ ಈ ಸಂಬಂಧ ರಾಜ್ಯ ಸರ್ಕಾರಕ್ಕೆ 25,000 ರೂ ದಂಡವನ್ನೂ ನ್ಯಾಯಾಲಯ ವಿಧಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಯಾವುದೇ ಕಂಪೆನಿಗೆ ಭೂಮಿ ನೀಡುವಾಗ ಅದು ಫಲವತ್ತಾದ ಕೃಷಿ ಭೂಮಿಯೇ ಅಲ್ಲವೇ ಎಂಬುದನ್ನು ಸರ್ಕಾರ ಖಾತರಿ ಮಾಡಿಕೊಳ್ಳಬೇಕು. ಫಲವತ್ತಾದ ಭೂಮಿ ಅಲ್ಲ ಎಂದು ದೃಢಪಡಿಸಿಕೊಂಡೇ ಮುಂದಿನ ಹೆಜ್ಜೆ ಇಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಈ ಸಂಬಂಧ ನಿಯಮಗಳು ಇರುವುದರಿಂದ ಸರ್ಕಾರ ಅವುಗಳನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಬಾರದು ಎಂದು ಹೇಳಿದ ಪೀಠವು, ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಎತ್ತಿಹಿಡಿದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ಆದೇಶ ಸರಿಯಾದುದಲ್ಲ ಎಂದು ಹೇಳಿತು.
2007: ಸರ್ಕಾರಿ ವೈದ್ಯರ ನೇಮಕಾತಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರಿಗೆ ಸರ್ಕಾರ ನೀಡುತ್ತಿದ್ದ ಪ್ರಾಶಸ್ತ್ಯದ ಕ್ರಮ `ಕಾನೂನು ಬಾಹಿರ' ಎಂದು ಲಂಡನ್ ಹೈಕೋರ್ಟ್ ಹೇಳಿತು. ಉನ್ನತ ಮಟ್ಟದ ಪರಿಣಿತ ವಲಸೆ ಕಾರ್ಯಕ್ರಮದಡಿಯಲ್ಲಿ (ಎಚ್ಎಸ್ಎಂಪಿ) ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದ ಆರೋಗ್ಯ ಇಲಾಖೆಯ ಕ್ರಮ ಕಾನೂನು ಬಾಹಿರ ಎಂದು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ತೀರ್ಪು ನೀಡಿತು. ಸರ್ಕಾದ ಕ್ರಮದ ವಿರುದ್ಧ ಭಾರತೀಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ಭಾರತೀಯ ವೈದ್ಯರ ಸಂಘಟನೆ `ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಸಿಯನ್ ಆಫ್ ಇಂಡಿಯನ್ ಒರಿಜಿನ್ (ಬಿಎಪಿಐಒ)' ಸುಮಾರು 16 ತಿಂಗಳು ಕಾಲ ಕಾನೂನು ಹೋರಾಟ ನಡೆಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಪಟ್ಟಿಯನ್ನು ತಯಾರಿಸಿತ್ತು. ಮೊದಲನೇ ಪಟ್ಟಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರದ್ದಾದರೆ, ಇನ್ನೊಂದು ಭಾರತೀಯರು ಸೇರಿದಂತೆ ಇತರ ರಾಷ್ಟ್ರಗಳ ವೈದ್ಯರ ಪಟ್ಟಿ. ಮೊದಲನೇ ಪಟ್ಟಿಯಲ್ಲಿರುವ ವೈದ್ಯರಿಂದ ಸ್ಥಾನ ಭರ್ತಿಯಾಗದಿದ್ದಾಗ ಮಾತ್ರ ಎರಡನೇ ಪಟ್ಟಿಯನ್ನು ಪರಿಶೀಲಿಸಲಾಗುತ್ತಿತ್ತು. ಇದರಿಂದ 16 ಸಾವಿರ ಸಾಗರೋತ್ತರ ವೈದ್ಯರಿಗೆ ತೊಂದರೆ ಉಂಟಾಯಿತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ವೈದ್ಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
2006: ಹದಿನಾರು ವರ್ಷದ ಬಾಲೆ ಅಕಾಂಷ ಜಾಚಕ್ ನಿರಂತರವಾಗಿ 61 ಗಂಟೆಗಳ ಕಾಲ ಹಾಡುವ ಮೂಲಕ ಇಂದೋರಿನಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಿದಳು. ನವೆಂಬರ್ 7ರಿಂದ ನವೆಂಬರ್ 9ರ ಮಧ್ಯರಾತ್ರಿಯವರೆಗೆ ಆಕೆ ನಿರಂತರವಾಗಿ 725 ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದಳು.
2006: ಆಧುನಿಕ ವಚನಕಾರ ಶಿವಕವಿ ಸಂಗಮೇಶ ಹೊಸಮನಿ (90) ರಾಣೆಬೆನ್ನೂರಿನಲ್ಲಿ ನಿಧನರಾದರು. ಮೂಲತಃ ಹುನಗುಂದ ತಾಲ್ಲೂಕಿನ ರಾಮವಾಡಗಿ ಗ್ರಾಮದವರಾದ ಸಂಗಮೇಶ ರಾಣೆಬೆನ್ನೂರಿನಲ್ಲಿ ಹತ್ತು ವರ್ಷಗಳಿಂದ ವಾಸವಾಗಿದ್ದರು.
2006: `ಶೇನ್' ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ನಟಿಸಿ ಖ್ಯಾತಿಯ ಶಿಖರ ತಲುಪಿದ್ದ ಹಾಲಿವುಡ್ ನಟ ಜಾಕ್ ಪಲಾನ್ಸ್ (87) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.
2006: ಮದುವೆಯಾದ 11 ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ ತನ್ನನ್ನು ತ್ಯಜಿಸಿರುವುದಾಗಿ ಪ್ರತಿಪಾದಿಸಿ ಆಂಧ್ರಪ್ರದೇಶದ ಗುಂಟೂರು ನಿವಾಸಿ ವಿಚರಪು ರಾಮಕೃಷ್ಣ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ತಾನು ಕಾನೂನು ಬದ್ಧವಾಗಿ ಶ್ರೇದೇವಿಯನ್ನು 15-3-1992ರಲ್ಲಿ ಮದುವೆಯಾಗಿದ್ದು ಆಕೆ 2003ರಲ್ಲಿ ತನ್ನನ್ನು ತ್ಯಜಿಸಿದ್ದಾಳೆ ಎಂದು ರಾಮಕೃಷ್ಣ ಗೌಡ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ನೀಡಿದ್ದ. 2004ರ ಮಾರ್ಚ್ 26ರಂದು ಕೌಟುಂಬಿಕ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ನೀಡಿತ್ತು. ಶ್ರೀದೇವಿ ಉತ್ತರಿಸುವ ಬದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಆಕೆಯ ಅರ್ಜಿಯನ್ನು ಪುರಸ್ಕರಿಸಿತು. ಗೌಡ ಈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.
2006: ಭಾರತದ ಪ್ರಮುಖ ಕಂಪೆನಿ ಟಾಟಾ ಸಮೂಹವು ಪ್ರಸಿದ್ಧ ಬೋಸ್ಟನ್ ರಿಜ್ ಕಾರ್ಲಟನ್ ಹೋಟೆಲನ್ನು 17 ಕೋಟಿ ಡಾಲರ್ಗೆ ಖರೀದಿಸಲು ಮತ್ತು ಅದಕ್ಕೆ `ತಾಜ್ ಬೋಸ್ಟನ್' ಹೆಸರು ಇಡಲು ನಿರ್ಧರಿಸಿತು.
2001: ಬ್ಯೂನೋಸ್ ಐರಿಸ್ಸಿನ ಬೊಂಬೊನೇರಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ತಮ್ಮ `ವಿದಾಯ ಆಟ'ವನ್ನು ಆಡಿದರು.
2000: ಭಾರತ ಮತ್ತು ಬಾಂಗ್ಲಾದೇಶ ಡಾಕ್ಕಾದಲ್ಲಿ ತಮ್ಮ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಆಡಿದವು.
1998: ಲಾಹೋರಿನಲ್ಲಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ನಡುವಣ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊತ್ತ ಮೊದಲ ಬಾರಿಗೆ ನಾಲ್ಕು ಸೆಂಚುರಿಗಳು ಸಿಡಿದವು. ಪಾಕಿಸ್ಥಾನದ ಇಯಾಜ್ ಅಹಮದ್ ಮತ್ತು ಯೂಸುಫ್ ಯೌಹಾನ ಅವರು ಶತಕಗಳನ್ನು ಬಾರಿಸಿದರೆ, ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಶತಕಗಳನ್ನು ಬಾರಿಸಿದರು. ಆಸ್ಟ್ರೇಲಿಯಾ 6 ವಿಕೆಟುಗಳ ಜಯ ಗಳಿಸಿತು.
1994: ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ನಿಧನರಾದರು.
1990: ಚಂದ್ರಶೇಖರ್ ಅವರು ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
1989: ಅಯೋಧ್ಯೆಯ ರಾಮಜನ್ಮಭೂಮಿಯ್ಲಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿತು.
1983: ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ್ಯೂಯಾರ್ಕ್ ನಗರದಲ್ಲಿ `ವಿಂಡೋಸ್'ನ್ನು ಔಪಚಾರಿಕವಾಗಿ ಪ್ರಕಟಿಸಿತು.
1982: ಸೋವಿಯತ್ ನಾಯಕ ಲಿಯೋನಿದ್ ಬ್ರೆಜ್ನೇವ್ ತಮ್ಮ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತರಾದರು.
1970: ಪ್ರವಾಸೋದ್ಯಮಕ್ಕಾಗಿ ಚೀನಾದ ಮಹಾಗೋಡೆಯನ್ನು ತೆರೆಯಲಾಯಿತು.
1948: ಸಾಹಿತಿ ವೇಣುಗೋಪಾಲ ಕಾಸರಗೋಡು ಜನನ.
1948: ಸಾಹಿತಿ ಬಿ.ವಿ. ಸತ್ಯನಾರಾಯಣರಾವ್ ಜನನ.
1933: ಸಾಹಿತಿ ಕೆ.ಎಸ್. ಕರುಣಾಕರನ್ ಜನನ.
1931: ಸಾಹಿತಿ ಬಿ.ಆರ್. ನಾಗೇಶ್ ಜನನ.
1926: ಸಾಹಿತಿ ಆದ್ಯ ರಾಮಾಚಾರ್ಯ ಜನನ.
1925: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-1984) ಹುಟ್ಟಿದ ದಿನ. ಇವರು ಚಿತ್ರನಟಿ ಎಲಿಜಬೆತ್ ಟೇಲರ್ ಅವರನ್ನು ಮದುವೆಯಾಗಿದ್ದರು.
1924: ಸಾಹಿತಿ ಕ.ವೆಂ. ರಾಜಗೋಪಾಲ ಜನನ.
1905: ಸಹೃದಯ, ಸುಸಂಸ್ಕೃತ ಹಾಸ್ಯದ `ರಾಶಿ' ಕಾವ್ಯನಾಮದ ಸಾಹಿತಿ ಡಾ. ಎಂ. ಶಿವರಾಂ (10-11-1905ರಿಂದ 13-1-1984) ಅವರು ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದರು.
1848: ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ ಸುರೇಂದ್ರನಾಥ ಬ್ಯಾನರ್ಜಿ (1848-1925) ಹುಟ್ಟಿದ ದಿನ. ಬ್ರಿಟಿಷ್ ಕಾಮನ್ವೆಲ್ಥ್ ಅಡಿಯಲ್ಲೇ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಇವರು ಪ್ರಬಲವಾಗಿ ಪ್ರತಿಪಾದಿಸಿದ್ದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment