Wednesday, December 10, 2014

ಡಿಸೆಂಬರ್ ೧೦: ವಿಶ್ವ ಮಾನವ ಹಕ್ಕುಗಳ ದಿನ World Human Rights Day

ಡಿಸೆಂಬರ್ ೧೦: ವಿಶ್ವ ಮಾನವ ಹಕ್ಕುಗಳ ದಿನ
December 10: World Human Rights Day


೧೯೪೮ರಲ್ಲಿ ಎಲ್ಲಾ ಮಾನವ ಜೀವಗಳು ಹುಟ್ಟಿನಿಂದ ಸ್ವತಂತ್ರ ಘನತೆ ಮತ್ತು ಹಕ್ಕುಗಳಲ್ಲಿ ಸಮಾನ ಮತ್ತು ಪ್ರತಿಯೊಬ್ಬನಿಗೂ ಯಾವುದೇ ತರಹದ ತಾರತಮ್ಯವಿಲ್ಲದೇ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ಹೊಂದುವ ಅಧಿಕಾರ ಉಳ್ಳವನಾಗಿದ್ದಾನೆ ಎಂದು ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಸಭೆಯು ಘೋಷಿಸಿದೆ. ಸಾರ್ವಜನಿಕ ಹಾಘೂ ಖಾಸಗೀ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳ ತಿರುಳನ್ನು ವೃದ್ಧಿಪಡಿಸುವ ಹಾಘೂ ಮಾನವ ಹಕ್ಕುಗಳ ಕಾನೂನು ಮತ್ತು ರಾಜಕೀಯ ಅಡಿಪಾಯಗಳ ರಕ್ಷಣೆಯನ್ನು ಮಾಡುವ ಕಾರ್ಯದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಸಮಾನ ಜವಾಬ್ದಾರಿ ಹಾಗೂ ಸಮಾನ ಉದ್ದೇಶ ಇಟ್ಟುಕೊಂಡಿದೆ.
ರೂಸೋ ಹೇಳುವಂತೆ ಎಲ್ಲಾ ಮಾನವರು ಹುಟ್ಟುವಾಗ ಸ್ವತಂತ್ರರಾಗಿರುತ್ತಾರೆ. ಆದರೆ ಎಲ್ಲಾ ಕಡೆ ಅವರನ್ನು ಶೃಂಖೆಯಲ್ಲಿಡಲಾಗಿದೆ.

೧೯೯೩ರಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದರೂ, ಕರ್ನಾಟಕದಲ್ಲಿ ೨೮-೦೬-೨೦೦೫ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಧ್ಯಕ್ಷರ, ಸದಸ್ಯರ ನೇಮಕಾತಿಯು ಸರ್ಕಾರದ ಶಿಫಾರಸ್ಸಿನೊಂದಿಗೆ, ರಾಜ್ಯಪಾಲರ ಶಿಫಾರಸ್ಸಿನ್ನಿಗನುಗುಣವಾಗಿ ೧೮-೦-೨೦೦೭ರಂದು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ ೧೯೯೩ರ ಕಲಂ೨೨ರ ಪ್ರಕಾರ ನ್ಯಾಯಮೂರ್ತಿ ಶ್ರೀ ಎಸ್.ಆರ್.ನಾಯಕ್  ರವರನ್ನು ಆಯೋಗದ ಅಧ್ಯಕ್ಷರನ್ನಾಗಿ ಪ್ರಥಮವಾಗಿ ನೇಮಿಸಲಾಯಿತು.

ಮಾನವ ಹಕ್ಕುಗಳ ಆಯೋಗದ ಧ್ಯೇಯೋದ್ದೇಶಗಳು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಪೂರಕವಾಗಿದ್ದು, ಅದು ಮುಖ್ಯವಾಗಿ ಹಕ್ಕುಗಳ ಉಲ್ಲಂಘನೆ ಆಗುವುದನ್ನ ತಡೆಯುವುದು, ಹಕ್ಕುಗಳ ಉಲ್ಲಂಘನೆ ಆಗದಂತೆ ರಕ್ಷಣೆ ನೀಡುವುದು ಹಕ್ಕುಗಳ ಉಲ್ಲಂಘನೆಗೆ ಒಳಗೊಂಡವರಿಗೆ ನೆರವು  ನೀಡುವುದು.

ಭಾರತ ಸಂವಿಧಾನದಿಂದ ಖಾತರೀಪಡಿಸಲಾಗಿರುವ ಅಥವಾ ಅಂತರಾಷ್ಟ್ರೀಯ ಒಡಂಬಡಿಕೆಗಳಲ್ಲಿ ಸೇರಿಸಲಾಗಿರುವ ಮತ್ತು ಭಾರತದಲ್ಲಿ ಜಾರಿಗೊಳಿಸಬಹುದಾದ ಜೀವನದ, ಸ್ವಾತಂತ್ರ್ಯದ, ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕಗಳೇ ಮಾನವ ಹಕ್ಕುಗಳು.

ಎಲ್ಲಾ ಮಾನವ ಜೀವಗಳು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನ ಮತ್ತು ಪ್ರತಿಯೊಬ್ಬನಿಗೂ ಯಾವುದೇ ತರಹದ ತಾರತಮ್ಯ ಇಲ್ಲದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದುವ ಕಾನೂನುವುಳ್ಳವನಾಗಿದ್ದಾನೆ.

ಪ್ರತಿಯೊಬ್ಬ ಮಾನವನಿಗೆ ನೈಸರ್ಗಿಕವಾಗಿ ಬಂದಂತಹ ಮತ್ತು ಪರಭಾರೆಯಾಗದಂತಹ ಹಕ್ಕುಗಳು;
    * ಜೀವಿಸುವ ಹಕ್ಕು
     *  ಮಾನವ ಘನತೆ ಹಕ್ಕು
     *  ಸಮಾನತೆಯ ಹಕ್ಕು
     *  ವೈಯಕ್ತಿಕ ಸ್ವಾತಂತ್ರ್ಯ ಹಕ್ಕು
     *  ಶೋಷಣೆಯ ವಿರುದ್ದ ಹಕ್ಕು
     *  ಗುಲಾಮಗಿರಿಯ ವಿರುದ್ದ ಹಕ್ಕು
     *  ಏಕಾಂತ ಗೌಪ್ಯ ಹಕ್ಕು
     *  ಪ್ರಾಮಾಣಿಕ ವಿಚಾರಣೆ ಹಕ್ಕು
     *  ಕಾರ್ಯೋತ್ತರ ಅಪರಾಧಿಕ ಕಾನೂನು ವಿರುದ್ದದ ಹಕ್ಕು
     *  ಸ್ವ ಅಪರಾಧಿಕರಣದ ವಿರುದ್ದ ಹಕ್ಕು
     *  ಆರೋಗ್ಯ ಹಕ್ಕು
     *  ಧರ್ಮ ಸ್ವಾತಂತ್ರ್ಯದ ಹಕ್ಕು
     *  ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು
     *  ಸಭೆ ಸೇರುವ ಹಕ್ಕು
     *  ಸಂಚರಿಸುವ ಮತ್ತು ವಾಸಿಸುವ ಹಕ್ಕು
     *  ಶಿಕ್ಷಣದ ಹಕ್ಕು
     *  ಉಪಜೀವನದ ಹಕ್ಕು          
     *  ಪರಿಣಾಮಕಾರಿ ಪರಿಹಾರ ದೊರಕಿಸಿಕೊಳ್ಳುವ ಹಕ್ಕು
     *  ಕಾನೂನಿನ ಮುಂದೆ ವ್ಯಕ್ತಿ ಗುರುತಿಸಿಕೊಳ್ಳುವ ಹಕ್ಕು
     *  ಪ್ರಾಣ ರಕ್ಷಣೆ ಹಕ್ಕು
     *  ನ್ಯಾಯ ದೊರಕಿಸಿಕೊಳ್ಳುವ ಹಕ್ಕು
     *  ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಹಕ್ಕು
     *  ಅನ್ಯಾಯಕ್ಕೆ ಒಳಗಾದವರಿಗೆ ಪರಿಹಾರ ಧನದ ಹಕ್ಕು ಹಾಗೂ
     *  ಯೋಗ್ಯ ಪರಿಸರದ ಹಕ್ಕು

 ಸಾಮಾನ್ಯವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಂದರ್ಭಗಳು:
*ವಿಚಾರಣಾಧೀನ ಸಾವು * ಪೊಲೀಸರಿಂದ ಚಿತ್ರಹಿಂಸೆ, ಕಾನೂನು ಬಾಹಿರ ಬಂಧನ, ದಸ್ತಗಿರಿ, ಪೊಲೀಸರು ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿರುವುದು
* ನಕಲಿ ಪೊಲೀಸ್ ಕಾರ್ಯಾಚರಣೆ.
* ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ.
* ದಲಿತರು ಮತ್ತು ಹಿಂದುಳಿದ ವರ್ಗದವರಿಗೆ, ಅಂಗವಿಕಲರ ಮೇಲೆ ನಡೆಯುವ ದೌರ್ಜನ್ಯ.
* ಜೀತದಾಳು
* ಮಾನವನಿಂದ ನಿರ್ಮಲೀಕರಣ
* ಕಾನೂನು ಬಾಹಿರವಾಗಿ ಮಾನವ ಅಂಗಗಳ ವ್ಯವಹಾರ.
* ಭಯೋತ್ಪಾದನೆ.
* ನಕ್ಸಲ್ ಕಾರ್ಯ ಚಟುವಟಿಕೆಗಳು
* ಬಾಲ್ಯ ವಿವಾಹ
* ಬಾಲ ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳು
* ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ಕಿರುಕುಳ
* ಎಚ್.ಐ.ವಿ ಬಾಧಿತರಿಗೆ ಬೇಧಬಾವ ಮಾಡುವುದು
* ಆನಾಂಗೀಯ ನಿಂದನೆ
* ಅಪಾಯಕಾರಿ ಪರಿಸರ.

 
 ಏನು ಮಾಡಬಹುದು? 
ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ವಿಷಯದಲ್ಲಿ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಹಕ್ಕುಗಳ ಉಲ್ಲಂಘನೆ ಆಗದಂತೆ ರಕ್ಷಣೆ ನೀಡಲು ಮತ್ತು ಹಕ್ಕುಗಳ ಉಲ್ಲಂಘನೆಗೆ ಒಳಗೊಂಡವರಿಗೆ ನೆರವು ನೀಡಲು: 
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
೪ನೇ ಮಹಡಿ, ೫ನೇ ಹಂತ, ಎಂ. ಎಸ್ ಬಿಲ್ಡಿಂಗ್, ಬೆಂಗಳೂರು - ೫೬೦೦೦೧
ದೂರವಾಣಿ : ೦೮೦-೨೨೩೯೨೨೦೦, ಫಾಕ್ಸ್ : ೦೮೦-೨೨೩೯೨೨೦೭ ಇಲ್ಲಿ ಸಂಪರ್ಕಿಸಬಹುದು.
ಲೇಖಕರು:                                              
ಸಿದ್ದಲಿಂಗೇಗೌಡಎಂ.ಎ.ಡಿ.ಸಿ.ಇ.                            
ಬಿನ್||ದಿ||ಬೈರೇಗೌಡ                                    
ವಿಶ್ವಮಾನವ ಹಕ್ಕುಗಳ ಹೋರಾಟಗಾರ.
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ  
ಮಾವಿನಕೆರೆ - ೫೭೨೨೨೧ 
ತುರುವೇಕೆರೆ ತಾ|| ತುಮಕೂರು ಜಿಲ್ಲೆ||
ದೂರವಾಣಿ: ೯೮೪೫೧೩೧೮೬೪              ೮೨೭೭೬೭೦೪೪೦      
ಮಿಂಚಂಚೆ:  Email:whrsktumkur@gmail.com

No comments:

Advertisement