Sunday, November 24, 2019

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ‘ಮಹಾ’ ಬೆಳವಣಿಗೆ; ಭಾನುವಾರ ವಿಚಾರಣೆ

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ‘ಮಹಾ’ ಬೆಳವಣಿಗೆ; ಭಾನುವಾರ ವಿಚಾರಣೆ
ನವದೆಹಲಿ: ನಾಟಕೀಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಮತ್ತು ಎನ್ಸಿಪಿಯ ನಾಯಕ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಭಾರತೀಯ ಜನತಾ ಪಕ್ಷವು ಅಚ್ಚರಿ ಮೂಡಿಸಿದ ಬಳಿಕ ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ (ಎನ್ಸಿಪಿ) ಮತ್ತು ಕಾಂಗ್ರೆಸ್ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ 2019 ನವೆಂಬರ್ 23  ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣವು 2019 ನವೆಂಬರ್ 24 ಭಾನುವಾರ ಬೆಳಗ್ಗೆ 11.30 ಗಂಟೆಗೆ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಶೋಕ ಭೂಷಣ್ ಮತ್ತು ಸಂಜೀವ ಖನ್ನಾ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದೆ, 24 ಗಂಟೆಗಳ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ನಿರ್ದೇಶಿಸುವಂತೆ ಮೂರು ಪಕ್ಷಗಳು ಸುಪ್ರೀಂಕೋರ್ಟಗೆ ಮನವಿ ಮಾಡಿವೆ.

ದೇವೇಂದ್ರ ಫಡ್ನವಿಸ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಿರ್ಧಾರವನ್ನು ರದ್ದುಪಡಿಸಬೇಕು ಮತ್ತುಬಹುಮತಪಡೆದಿರುವುದರಿಂದ ತಮ್ಮನ್ನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಮೂರೂ ಪಕ್ಷಗಳು ತಮ್ಮ ಅರ್ಜಿಯಲ್ಲಿ ಸುಪ್ರೀಂಕೋರ್ಟಿಗೆ ಮನವಿ ಮಾಡಿದವು.

ಬಿಜೆಪಿಯೇತರ ಸರ್ಕಾರ ರಚನೆಗೆ ಹಕ್ಕು ಮಂಡನೆಯಾಗುವ ಸಾಧ್ಯತೆಯನ್ನು ಅನುಸರಿಸಿ, ಬಿಜೆಪಿಯು ೨೨.೧೧.೨೦೧೯ ಮತ್ತು ೨೩.೧೧.೨೦೧೯ರ ನಡುವಣ ರಾತ್ರಿಯಲ್ಲಿ ರಾಜಕೀಯ ಕುತಂತ್ರಗಳ ಮೂಲಕ ಸಂವಿಧಾನಬಾಹಿರವಾದ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿದೆ. ಶ್ರೀ ದೇವೇಂದ್ರ ಫಡ್ನವಿಸ್ ಮತ್ತು / ಅಥವಾ ಬಿಜೆಪಿಯು ೨೨.೧೧-೨೦೧೯ ಮತ್ತು ೨೩.೧೧.೨೦೧೯ರ ರಾತ್ರಿಯಲ್ಲಿ ಅಧಿಕಾರದ ಹಕ್ಕು ಮಂಡನೆಯನ್ನು ಯಾವ ರೀತಿಯಾಗಿ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲಎಂದು ಮೂರೂ ಪಕ್ಷಗಳು ತಮ್ಮ ಅರ್ಜಿಯಲ್ಲಿ ಸುಪ್ರೀಂಕೋರ್ಟಿಗೆ ತಿಳಿಸಿದವು.

ಶುಕ್ರವಾರ ರಾತ್ರಿಯಷ್ಟೇ ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಮೂರು ಪಕ್ಷಗಳು ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಿದ್ದವು ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಪ್ರಕಟಿಸಿದ್ದರು.

ಆದಾಗ್ಯೂ, ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಬೆಳಗ್ಗೆ ಟೆಲಿವಿಷನ್ ಜಾಲಗಳು  ಶನಿವಾರ ಬೆಳಗ್ಗೆ ಪ್ರಸಾರ ಮಾಡಿದಾಗ ಮೂರೂ ಪಕ್ಷಗಳಿಗೆ ದಿಗ್ಭ್ರಮೆಯಾಗಿತ್ತು.

ಕ್ರಮದ ಹಿಂದಿದ್ದ ಅತಿ ಅವಸರವನ್ನುಪ್ರಶ್ನಿಸಿರುವ ಅರ್ಜಿದಾರರು , ತಮ್ಮ ಮೈತ್ರಿಕೂಟವು ಹಿಂದಿನ ಸಂಜೆಯಷ್ಟೇ ರಚನೆಯಾಗಿರುವಾಗ ಬಿಜೆಪಿ ನಾಯಕನನ್ನು ಸರ್ಕಾರ ರಚನೆಗೆ ಆಹ್ವಾನಿಸುವ ನಿರ್ಧಾರಕ್ಕೆ ರಾಜ್ಯಪಾಲರು ಹೇಗೆ ಬಂದರು ಎಂಬುದನ್ನು ತಿಳಿಯಬಯಸಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.

ನಸುಕಿನ .೪೭ ಗಂಟೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯುವ ಮತ್ತು ಕೇವಲ ಎರಡೂವರೆ ಗಂಟೆಗಳಲ್ಲಿ ಬೆಳಗ್ಗೆ .೦೦ ಗಂಟೆಯ ಸುಮಾರಿಗೆ ಪ್ರಮಾಣವಚನ ಬೋಧಿಸುವ ತರಾತುರಿ ಏನಿತ್ತು ಎಂಬುದು ಅರ್ಥವಾಗುತ್ತಿಲ್ಲ. ಶ್ರೀ ದೇವೇಂದ್ರ ಫಡ್ನವಿಸ್ ಅವರು ಏನಾದರೂ ಹಕ್ಕು ಮಂಡನೆ ಮಾಡಿದ್ದರೆ ಅದನ್ನು ಅಧ್ಯಯನ ಮಾಡುವ ಕರ್ತವ್ಯ ಗೌರವಾನ್ವಿತ ರಾಜ್ಯಪಾಲರಿಗೆ ಇತ್ತು. ಇದಕ್ಕೂ ಹೆಚ್ಚಾಗಿ ಹಿಂದಿನ ರಾತ್ರಿಯಷ್ಟೇ ಮೂರು ರಾಜಕೀಯ ಪಕ್ಷಗಳು ೧೫೪ ಶಾಸಕರ ಬಲ ತಮಗೆ ಇರುವುದಾಗಿ ಖಡಾಖಂಡಿತ ಹೇಳಿಕೆ ನೀಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿರುವುದಾಗಿ ಬಹಿರಂಗ ಪಡಿಸಿದ್ದಾಗ ಇಂತಹ ಅಧ್ಯಯನದ ಅಗತ್ಯ ಇನ್ನೂ ಹೆಚ್ಚಾಗಿತ್ತುಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಜಿತ್ ಪವಾರ್ ಅವರನ್ನು ಹೊರತುಪಡಿಸಿ, ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಎಲ್ಲ ಶಾಸಕರೂ ಪೂರ್ಣವಾಗಿ ಮತ್ತು ದೃಢವಾಗಿ ತಮ್ಮ  ಮಹಾ ವಿಕಾಸ ಅಗಾಧಿಹಿಂದೆ ನಿಂತಿದ್ದಾರೆ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ರಾಜ್ಯಪಾಲರು ಪಕ್ಷಪಾತದ ವರ್ತನೆ ತೋರುವ ಮೂಲಕ ಉನ್ನತ ಹುದ್ದೆಯನ್ನು ನಗೆಪಾಟಲಿಗೆ ಈಡು ಮಾಡಿದ್ದಾರೆ ಎಂದೂ ಆಪಾದಿಸಿದ ಅರ್ಜಿದಾರರು, ’ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷದ ಆಜ್ಞೆಯಂತೆ ವರ್ತಿಸುತ್ತಿದ್ದಾರೆಎಂದೂ ಹೇಳಿದ್ದಾರೆ.

ರೆಸಾರ್ಟ್ಗಳತ್ತ  ಶಾಸಕರು: ಮಧ್ಯೆ, ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರು ಬೇರೆ ರಾಜ್ಯಗಳ ರೆಸಾರ್ಟ್ಗಳತ್ತ ಮುಖ ಮಾಡಿದ್ದಾರೆ ಎಂದೂ ಮುಂಬೈ ವರದಿಗಳು ತಿಳಿಸಿವೆ.

No comments:

Advertisement