ಮುಂಬೈ
ವಿಲೆ ಪಾರ್ಲೆ ವಸತಿ ಕಟ್ಟಡದಲ್ಲಿ ಭಾರೀ ಅಗ್ನಿದುರಂತ: ಐವರ ರಕ್ಷಣೆ
Add caption |
ಮುಂಬೈ: ಮುಂಬೈಯ ಹೊರವಲಯ ವಿಲೆ ಪಾರ್ಲೆಯಲ್ಲಿ ವಸತಿ ಕಟ್ಟಡವೊಂದರಲ್ಲಿ 2019 ಡಿಸೆಂಬರ್ 22ರ ಭಾನುವಾರ ರಾತ್ರಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು ರಾತ್ರಿ 11 ಗಂಟೆಯ ವೇಳೆಗೆ ಬೆಂಕಿಯನ್ನು
ಆರಿಸಲಾಯಿತು. ಐದು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು.
ವಿಲೇ
ಪಾರ್ಲೆಥಿ (ಪಶ್ಚಿಮ) ೧೩ ಅಂತಸ್ತುಗಳ ಲಭ
ಶ್ರಿವಾಲಿ ಕಟ್ಟಡದ ೭ ಮತ್ತು ೮ನೇ
ಮಹಡಿಯಲ್ಲಿ ರಾತ್ರಿ ೭.೧೦ರ ಅಂದಾಜಿಗೆ
ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು.
ಕನಿಷ್ಠ
೮-೧೦ ಅಗ್ನಿಶಾಮಕ ವಾಹನಗಳು
ನೀರಿನ ಟ್ಯಾಂಕರುಗಳ ಜೊತೆಗೆ ೧೦ ನಿಮಿಷಗಳ ಒಳಗಾಗಿ
ಸ್ಥಳಕ್ಕೆ ಧಾವಿಸಿದವು ಎಂದು ಅವರು ನುಡಿದರು.
ಕಟ್ಟಡದಲ್ಲಿ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭೀತಿ ಪಡಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಅವರು ಇದಕ್ಕೆ ಮುನ್ನ ಹೇಳಿದ್ದರು.
ಕಟ್ಟಡದಲ್ಲಿ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭೀತಿ ಪಡಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಅವರು ಇದಕ್ಕೆ ಮುನ್ನ ಹೇಳಿದ್ದರು.
No comments:
Post a Comment