Thursday, December 19, 2019

ನಿರ್ಭಯಾ ಪ್ರಕರಣ: ಸುಪ್ರೀಂನಿಂದ ಪುನರ್ ಪರಿಶೀಲನಾ ಅರ್ಜಿ ವಜಾ

ನಿರ್ಭಯಾ ಪ್ರಕರಣ: ಸುಪ್ರೀಂನಿಂದ ಪುನರ್ ಪರಿಶೀಲನಾ ಅರ್ಜಿ ವಜಾ
ಮರಣ ವಾರಂಟ್ ಜಾರಿಗೆ ದೆಹಲಿ ಕೋರ್ಟ್ ನಕಾರ, ಗಳಗಳನೆ ಅತ್ತ ನಿರ್ಭಯಾ ತಾಯಿ
ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಮರಣದಂಡನೆ ಪುನರ್ ಪರಿಶೀಲನಾ ಕೋರಿಕೆ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ  2019 ಡಿಸೆಂಬರ್  18ರ ಬುಧವಾರ ವಜಾಗೊಳಿಸಿತು. ಆದರೆ ಶಿಕ್ಷೆ ಜಾರಿ ಸಂಬಂಧವಾಗಿ ಮರಣ ವಾರಂಟ್ (ಬ್ಲ್ಯಾಕ್ ವಾರಂಟ್) ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯ ನಿರಾಕರಿಸಿತು. ಪರಿಣಾಮವಾಗಿ ನಿರ್ಭಯಾ ತಾಯಿ ನ್ಯಾಯಾಲಯದಲ್ಲೇ ಗಳಗಳನೆ ಅತ್ತ ಘಟನೆ ಘಟಿಸಿತು.

ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾದ ಮರಣದಂಡನೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟಿನ ೨೦೧೭ರ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯಲ್ಲಿ ತೀರ್ಪಿನ ಪುನರ್ ಪರಿಶೀಲನೆಗೆ ಆಧಾರವಾದ ಯಾವ ಹೊಸ ಅಂಶವೂ ಇಲ್ಲ. ಅದರಲ್ಲಿ ಹೇಳಿದ ವಿಚಾರಗಳನ್ನು ತನ್ನ ಮುಖ್ಯ ತೀರ್ಪಿನಲ್ಲೇ ಸುಪ್ರೀಂಕೋರ್ಟ್ ಪರಿಗಣಿಸಿದೆ ಎಂದು ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತು.

ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನೂ ಒಳಗೊಂಡಿರುವ ಪೀಠವುಪುನರ್ ಪರಿಶೀಲನಾ ಅರ್ಜಿಯು ಮರು ವಿಚಾರಣಾ ಮನವಿ ಅಲ್ಲ. ೨೦೧೭ರ ಮುಖ್ಯ ತೀರ್ಪಿನಲ್ಲಿ ಪುನರ್ ಪರಿಶೀಲನೆ ಮಾಡಲು ಬೇಕಾದಂತಹ ಯಾವುದೇತಪ್ಪುಗಳೂಕಂಡು ಬಂದಿಲ್ಲಎಂದು ಹೇಳಿ, ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು. ಇದರೊಂದಿಗೆ ಅಪರಾಧಿಗಳಿಗೆ ಮರಣದಂಡನೆಯನ್ನು ಸುಪ್ರೀಂಕೋರ್ಟ್ ಮತ್ತೆ ದೃಢ ಪಡಿಸಿತು.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ದೆಹಲಿಯ ವಿಚಾರಣಾ ನ್ಯಾಯಾಲಯವು ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮೇಲೆ ೨೦೧೨ರಲ್ಲಿ ಸಾಮೂಹಿಕ ಅತ್ಯಚಾರ ಎಸಗಿ ಕೊಲೆಗೈದ ಪ್ರಕರಣದ ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ತತ್ ಕ್ಷಣಮರಣ ವಾರಂಟ್ (ಬ್ಲ್ಯಾಕ್ ವಾರಂಟ್) ಜಾರಿಗೊಳಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿತು.

ನಾಲ್ವರೂ
ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಬ್ಲ್ಯಾಕ್ ವಾರಂಟ್ ಜಾರಿಗೊಳಿಸುವಂತೆ ಪೊಲೀಸರು ಮಾಡಿದ ಮನವಿಯ ಮೇಲಿನ ವಾದ ಆಲಿಸಿ ನ್ಯಾಯಾಧೀಶ ಸತೀಶ್ ಕುಮಾರ್ ಅರೋರ ಅವರುಬ್ಲ್ಯಾಕ್ ವಾರಂಟ್ ಜಾರಿಗೆ ಮುನ್ನ ಶಿಕ್ಷಿತರಲ್ಲಿ ಒಬ್ಬ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವವರೆಗೆ ಕಾಯಲು ತಾನು ಬಯಸಿರುವುದಾಗಿ ಹೇಳಿದರು.

ವಾದಗಳನ್ನು ನಾನು ಆಲಿಸುವುದಿಲ್ಲ. ಕ್ಷಮಾದಾನ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ ಎಂಬುದು ವಾಸ್ತವಾಂಶಎಂದು ಆರೋರಾ ತಮ್ಮ ತೀರ್ಪಿನಲ್ಲಿ ತಿಳಿಸಿದರು. ಶಿಕ್ಷಿತ ವ್ಯಕ್ತಿಗಳಿಗೆ ಅವರು ಚಲಾಯಿಸಬಹುದಾದ ಕಾನೂನುಬದ್ಧ ಪರಿಹಾರಗಳ ಬಗ್ಗೆ ವಿವರಿಸಿ ಹೊಸದಾಗಿ ನೋಟಿಸ್ ಜಾರಿ ಮಾಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಆದೇಶ ನೀಡಿದ ಸತೀಶ್ ಕುಮಾರ್ ವಿಚಾರಣೆಯನ್ನು ಜನವರಿ ೭ಕ್ಕೆ ಮುಂದೂಡಿದರು.

ನ್ಯಾಯಾಧೀಶರು ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆಯೇ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ಥೆಯ ತಾಯಿ ನ್ಯಾಯಾಲಯದಲ್ಲೇ ಗಳಗಳನೆ ಅತ್ತರು. ’ನಮಗೆ ಯಾವ ಹಕ್ಕುಗಳೂ ಇಲ್ಲ.. ನಾವು ಎಲ್ಲಿಗೇ ಹೋಗಲಿ, ಜನರು ಅವರ (ಶಿಕ್ಷಿತರ) ಹಕ್ಕುಗಳ ಬಗ್ಗೆ ಮಾತನಾಡುವುದೇ ಕೇಳಿಸುತ್ತದೆ. ನಮ್ಮ ಹಕ್ಕುಗಳ ಗತಿ ಏನು?’ ಎಂದು ಆಕೆ ಅಳುತ್ತಾ ಪ್ರಶ್ನಿಸಿದರು.

ನ್ಯಾಯಾಧೀಶರು ಅವರನ್ನು ಸಂತೈಸಲು ಯತ್ನಿಸಿದರು. ’ನಾವು ಇಲ್ಲಿರುವುದು ಅದನ್ನು ಎತ್ತಿ ಹಿಡಿಯುವುದಕ್ಕಾಗಿಎಂದು ನ್ಯಾಯಾಧೀಶರು ಆಕೆಗೆ ಹೇಳಿದರು.

ಆಕೆ ತನ್ನ ಒಳಗಿನ ಹಾಗೂ ಹೊರಗಿನ ಭ್ರಮನಿರಸನದ ಬಗ್ಗೆ ಮಾತನಾಡಿದರು.

ನಾವು ಸ್ಥಳಕ್ಕೆ (ಪಟಿಯಾಲ ಹೌಸ್ ನ್ಯಾಯಾಲಯ ಸಮುಚ್ಚಯ) ಬರುತ್ತಲೇ ಇದ್ದೇವೆ... ಪ್ರತಿಯೊಂದು ಕಡೆಯಲ್ಲಿಯೂ ವ್ಯವಸ್ಥೆಯು ಶಿಕ್ಷಿತರಿಗೇ ಬೆಂಬಲ ನೀಡುತ್ತಿದೆ... ಸರ್ಕಾರ ಅಥವಾ ಪ್ರಾಸೆಕ್ಯೂಷನ್ ಸುಪ್ರೀಂ ಅಲ್ಲ ಶಿಕ್ಷಿತರೇ ಸುಪ್ರೀಂ ಆಗಿರುವಂತೆ ಕಾಣುತ್ತಿದೆಎಂದು ತನ್ನ ಕಣ್ಣೀರು ಒರೆಸಿಕೊಳ್ಳುತ್ತಾ ಸಂತ್ರಸ್ಥೆಯ ತಾಯಿ ನುಡಿದರು.

ಆಕೆಯ
ಪುತ್ರಿ, ೨೦೧೨ರ ಡಿಸೆಂಬರ್ ತಿಂಗಳ ಚಳಿಗಾಲದ ರಾತ್ರಿಯಲ್ಲಿ ಗೆಳೆಯನ ಜೊತೆಗೆ ಖಾಸಗಿ ಬಸ್ಸೊಂದನ್ನು ಏರಿದ್ದಳು. ಬಸ್ಸಿನಲ್ಲಿದ್ದ ವ್ಯಕ್ತಿಗಳು ಆಕೆಯ ಗೆಳೆಯನನ್ನು ಥಳಿಸಿ, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಕಬ್ಬಿಣದ ಸರಳಿನಿಂದ ಮರ್ಮಾಂಗಕ್ಕೆ ತಿವಿದು ತೀವ್ರವಾಗಿ ಗಾಯಗೊಳಿಸಿ ಬಳಿಕ ಇಬ್ಬರನ್ನೂ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹೆದ್ದಾರಿಗೆ ತಳ್ಳಿ ಪರಾರಿಯಾಗಿದ್ದರು. ಯುವತಿ ಎರಡು ವಾರಗಳ ಜೀವನ್ಮರಣ ಹೋರಾಟದ ಬಳಿಕ ೨೦೧೨ರ  ಡಿಸೆಂಬರ್ ೨೯ರ ರಾತ್ರಿ  ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಳು. ಆಕೆಯ ಕುಟುಂಬ ಅಂದಿನಿಂದಲೂ ತಪ್ಪಿತಸ್ಥರ ಶಿಕ್ಷೆಗಾಗಿ ಹೋರಾಟ ನಡೆಸುತ್ತಲೇ ಇದೆ.

ತಪ್ಪಿತಸ್ಥರಲ್ಲಿ ಒಬ್ಬನನ್ನು ಅಪ್ರಾಪ್ತ ಎಂಬ ಕಾರಣಕ್ಕಾಗಿ ಹಗುರವಾಗಿ ಪರಿಗಣಿಸಲಾಯಿತು. ಮೂರು ವರ್ಷಗಳ ಸೆರೆವಾಸದ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು. ಇನ್ನೊಬ್ಬ ಆರೋಪಿ ರಾಮ್ ಸಿಂಗ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಉಳಿದ ನಾಲ್ವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಪೈಕಿ ಮುಖೇಶ್, ಪವನ್ ಗುಪ್ತ ಮತ್ತು ವಿನಯ್ ಶರ್ಮ - ಮೂವರು ಸುಪ್ರೀಂಕೋರ್ಟಿನಲ್ಲಿ ಮರಣದಂಡನೆ ಜಾರಿಯ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಕಳೆದ ವರ್ಷ ಜುಲೈ ೯ರಂದು ಅದನ್ನು ವಜಾಗೊಳಿಸಿತ್ತು. ತಿಹಾರ್ ಸೆರೆಮನೆ ಅಧಿಕಾರಿಗಳು ಮರಣದಂಡನೆ ಜಾರಿಗೆ ಸಿದ್ಧತೆ ಆರಂಭಿಸುತ್ತಿದ್ದಂತೆಯೇ ನಾಲ್ಕನೇ ಶಿಕ್ಷಿತ ಅಕ್ಷಯ್ ಕುಮಾರ್ ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ.

ಪುನರ್ ಪರಿಶೀಲನಾ ಅರ್ಜಿಯನ್ನು ಬುಧವಾರ ಕೆಲವೇ ಗಂಟೆಗಳ ಮುನ್ನ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿತ್ತು. ಸುದ್ದಿ ಸಂತ್ರಸ್ಥೆಯ ಹೆತ್ತವರ ಮುಖದಲ್ಲಿ ನಗು ಅರಳಿಸಿತ್ತು. ’ನನಗೆ ಸಂತಸವಾಗಿದೆಎಂದು ಸಂತ್ರಸ್ಥೆಯ ತಂದೆ ವರದಿಗಾರರ ಜೊತೆ ಹೇಳಿದ್ದರು.

ಸಂತ್ರಸ್ಥೆಯ ತಾಯಿ ಕೆಳ ನ್ಯಾಯಾಲಯದಲ್ಲಿ ಮರಣದಂಡನೆ ಜಾರಿಯನ್ನು ತ್ವರಿತಗೊಳಿಸಲು ಯತ್ನ ನಡೆಸಿದ್ದರು. ಅವರು ಮರಣದಂಡನೆ ಜಾರಿಯನ್ನು ತ್ವರಿತಗೊಳಿಸಲು ನ್ಯಾಯಾಧೀಶರುಮರಣ ವಾರಂಟ್ಜಾರಿಗೊಳಿಸಬೇಕು ಎಂದು ಬಯಸಿದ್ದರು.

ಮರಣ ವಾರಂಟ್ಜಾರಿಗೊಳಿಸುವಂತೆ ನ್ಯಾಯಾಧೀಶರಿಗೆ ಪಬ್ಲಿಕ್ ಪ್ರಾಸೆಕ್ಯೂಟರ್ ಮನವಿ ಮಾಡಿದರು. ಕ್ಯುರೇಟಿವ್ ಅರ್ಜಿಗಳು ಅಥವಾ ಕ್ಷಮಾದಾನ ಅರ್ಜಿಗಳು ಹೇಗಿದ್ದರೂ ನಿಲ್ಲುವುದಿಲ್ಲ ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದರು.

ಶಿಕ್ಷಿತರಲ್ಲಿ ಒಬ್ಬನಾದ ಮುಖೇಶ್ ಸಿಂಗ್ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿಸಲು ಅಮಿಕಸ್ ಕ್ಯೂರಿ (ಕೋರ್ಟ್ ಸಹಾಯಕರು)  ಆಗಿ ನೇಮಕಗೊಂಡಿದ್ದ ವಕೀಲೆ ವೃಂದಾ ಗ್ರೋವರ್ ಅವರುಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿಯ ಕಾನೂನು ಬದ್ಧ ಪರಿಹಾರ ಚಲಾಯಿಸುವ ಮುನ್ನ ಹಂತದಲ್ಲಿ ಮರಣ ವಾರಂಟ್ ಜಾರಿಗೊಳಿಸಲಾಗದುಎಂದು ಹೇಳಿದರು.

ಪ್ರತಿ ಹಂತದಲ್ಲೂ ತಮ್ಮ ಕಾನೂನುಬದ್ಧ ಹಕ್ಕುಗಳ ಬಗ್ಗೆ ಶಿಕ್ಷಿತರಿಗೆ ಹೊಸದಾಗಿ ನೋಟಿಸ್ ಜಾರಿಗೊಳಿಸಬೇಕಾದದ್ದು ಜೈಲು ಅಧಿಕಾರಿಗಗಳ ಕರ್ತವ್ಯಎಂದು ಆಕೆ ಒತ್ತಿ ಹೇಳಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರುಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಚಲಾಯಿಸುವ ಬಗ್ಗೆ ಶಿಕ್ಷಿತರ ಅಭಿಪ್ರಾಯ ಪಡೆಯುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುಪ್ರೀಂಕೋರ್ಟಿನ ಆದೇಶದ ಪ್ರತಿ ಲಭಿಸುವವರೆಗೂ ತಾನು ಕಾಯುವುದಾಗಿ ಹೇಳಿದ ನ್ಯಾಯಾಧೀಶರು ವಿಚಾರಣೆಯನ್ನು ೨೦೨೦ರ ಜನವರಿ ೭ಕ್ಕೆ ಮುಂದೂಡಿದರು.

ಸುಪ್ರೀಂಕೋರ್ಟಿನಲ್ಲಿ ಬುಧವಾರ ಬೆಳಗ್ಗೆ ತ್ರಿಸದಸ್ಯ ಪೀಠವು ಅಪರಾಧಿ ಅಕ್ಷಯ್ ಕುಮಾರನ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆಯೇ, ಅಪರಾಧಿ ಪರ ವಕೀಲ ಎಪಿ ಸಿಂಗ್ ಅವರು ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ಕೋರಿದರು.

ದೆಹಲಿ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ಕ್ಷಮಾದಾನ ಅರ್ಜಿ ಸಲ್ಲಿಕೆಗೆ ಕಾನೂನಿನ ಅಡಿಯಲ್ಲಿ ಇರುವ ಕಾಲಾವಧಿ ಒಂದು ವಾರ ಮಾತ್ರ ಎಂದು ಹೇಳಿದರು.
ಬಗ್ಗೆ ನಾವು ನಮ್ಮ ಅಭಿಪ್ರಾಯ ನೀಡುವುದಿಲ್ಲ. ನಿಗದಿತ ಅವಧಿಯ ಒಳಗೆ ಕ್ಷಮಾದಾನ ಅರ್ಜಿ ಸಲ್ಲಿಕೆಯ ಪರಿಹಾರದ ಬಳಕೆ ಅರ್ಜಿದಾರರಿಗೆ ಬಿಟ್ಟದ್ದುಎಂದು ಪೀಠ ಹೇಳಿತು.

No comments:

Advertisement