Wednesday, December 11, 2019

ಪ್ರಧಾನಿ ನರೇಂದ್ರ ಮೋದಿ ಮಾತು ೨೦೧೯ರ ’ಗೋಲ್ಡನ್ ಟ್ವೀಟ್’

ಪ್ರಧಾನಿ ನರೇಂದ್ರ ಮೋದಿ ಮಾತು ೨೦೧೯ರ ’ಗೋಲ್ಡನ್ ಟ್ವೀಟ್’
ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದ ’ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಟ್ವೀಟ್ ಭಾರತದ ’ಗೋಲ್ಡನ್ ಟ್ವೀಟ್ ಆಫ್ ೨೦೧೯’ ಎಂದು ಟ್ವಿಟರ್  2019 ಡಿಸೆಂಬರ್ 10ರ ಮಂಗಳವಾರ ಘೋಷಿಸಿತು.

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ, ’ಭಾರತ ಮತ್ತೆ ಗೆದ್ದಿದೆ. ಜೊತೆಯಾಗಿ ನಾವು ಬಲಿಷ್ಠ ಮತ್ತು ಐಕ್ಯ ಭಾರತ ಕಟ್ಟೋಣ’ ಎಂದು ಟ್ವೀಟಿಸಿದ್ದರು. ಆ ಟ್ವೀಟ್ ೪,೨೦,೦೦೦ ಸಾವಿರಕ್ಕೂ ಅಧಿಕ ಲೈಕ್ ಪಡೆಯುವುದರ ಜೊತೆಗೆ  ೧,೧೭,೧೦೦ಕ್ಕೂ ಹೆಚ್ಚು ಬಾರಿ ರಿ ಟ್ವೀಟ್ ಆಗಿತ್ತು.  ೨೦೧೯ರ ಮೇ ೨೩ರಂದು ಮಧ್ಯಾಹ್ನ ೨.೪೨ಕ್ಕೆ ಟ್ವೀಟ್ ಪ್ರಕಟಗೊಂಡಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೦೩ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಪ್ರಧಾನಿ ಮೋದಿ ಅವರ ಟ್ವೀಟಿನ ಪೂರ್ತಿಪಾಠ ಈ ಕೆಳಗಿನಂತಿದೆ:

No comments:

Advertisement