ಲೈಂಗಿಕ
ಗುಲಾಮಳನ್ನಾಗಿ ಇಟ್ಟುಕೊಂಡಿದ್ದರು,
ಆಜ್ಞೆ ಪಾಲಿಸದಿದ್ದರೆ ಥಳಿಸುತ್ತಿದ್ದರು...!
ಆಜ್ಞೆ ಪಾಲಿಸದಿದ್ದರೆ ಥಳಿಸುತ್ತಿದ್ದರು...!
ಉನ್ನಾವೋ
ಅತ್ಯಾಚಾರ ಸಂತ್ರಸ್ಥೆಯ ದೂರು, ಬಯಲಾದ ಅಮಾನುಷ ವರ್ತನೆ
ಕಾನ್ಪುರ: ಪೊಲೀಸರನ್ನು
ಸಂಪರ್ಕಿಸಿದರೆ ಪುನಃ ಅತ್ಯಾಚಾರ ಎಸಗುತ್ತೇವೆ, ನಿನ್ನ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತೇವೆ ಎಂಬುದಾಗಿ ಎಚ್ಚರಿಕೆ ನೀಡಿ ’ದಿಗ್ಬಂಧನ’ದಿಂದ ಹೊರ ತಳ್ಳುವುದಕ್ಕೆ ಮುನ್ನ ತನ್ನನ್ನು ’ಲೈಂಗಿಕ
ಗುಲಾಮಳನ್ನಾಗಿ’ ಇಟ್ಟುಕೊಂಡಿದ್ದರು
ಎಂದು 2019 ಡಿಸೆಂಬರ್ 05ರ ಗುರುವಾರ ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿರುವ ಉನ್ನಾವೋ ಸಂತ್ರಸ್ಥೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಲಾಲ್ಗಂಜ್ ಪೊಲೀಸರಿಗೆ ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಈ
ವಿವರಗಳನ್ನು ನೀಡಿರುವ ಮಹಿಳೆ, ’ರಾಯ್ ಬರೇಲಿಯಲ್ಲಿ ದಿಗ್ಬಂಧನದಲ್ಲಿ ಇಡಲಾಗಿದ್ದ ಮನೆಯಲ್ಲಿ ಹೊರಕ್ಕೆ ಇಣುಕಿ ನೋಡಲು ಕೂಡಾ ನನಗೆ ಬಿಡುತ್ತಿರಲಿಲ್ಲ’ ಎಂದು
ಹೇಳಿದ್ದಾರೆ.
ಗುರುವಾರ
ನಸುಕಿನಲ್ಲಿ ರಾಯ್ ಬರೇಲಿಗೆ ನ್ಯಾಯಾಲಯಕ್ಕೆ ಹಾಜರಾಗುವ ಸಲುವಾಗಿ ಹೊರಟಿದ್ದಾಗ ತಡೆದು
ಅತ್ಯಾಚಾರ ಎಸಗಿದ್ದ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಸುಮಾರು ಒಂದು ಕಿಮೀ ದೂರ ನೆರವಿವಾಗಿ ಕೂಗುತ್ತಾ ಓಡಿದ್ದ ಮಹಿಳೆಯನ್ನು ಬಳಿಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಶೇಕಡಾ ೬೦ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವುದಾಗಿ ಪೊಲೀಸರು ತಿಳಿಸಿದ್ದರು.
ತನಗೆ
ಹಾಕಿದ್ದ ಬೆದರಿಕೆಗಳನ್ನು ನಿರ್ಲಕ್ಷಿಸಿದ್ದ ಮಹಿಳೆ ಮಾರ್ಚ್ ೫ರಂದು ಉನ್ನಾವೋ ಜಿಲ್ಲೆಯ ಬಿಹಾರ್ ಬಹ್ತಾ ಪೊಲೀಸ್ ಠಾಣೆಯಲ್ಲಿ ಮತ್ತು ಮರುದಿನ ಲಾಲ್ ಗಂಜ್ (ರಾಯ್ ಬರೇಲಿ) ಪೊಲೀಸ್ ಠಾಣೆಯಲ್ಲಿ ಇನ್ನೊಂದು -ಹೀಗೆ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದರು.
ತಾನು
ಪ್ರೀತಿಸಿದ್ದ ಮತ್ತು ಮದುವೆಯಾಗುವುದಾಗಿ ತನಗೆ ವಚನ ನೀಡಿದ್ದ ಶಿವಮ್ ತ್ರಿವೇದಿ ತಾನು ಬಯಸಿದ್ದ ನ್ಯಾಯ ಮತ್ತು ಪ್ರತಿಷ್ಠೆಯನ್ನು ಹಲವಾರು ಬಾರಿ ದರೋಡೆ ಮಾಡಿದ್ದ’ ಎಂದು ಆಕೆ ಮ್ಯಾಜಿಸ್ಟ್ರೇಟರ ಮುಂದೆ ಪ್ರತಿಪಾದಿಸಿದ್ದರು. ಅದೇ ವ್ಯಕ್ತಿ ಗುರುವಾರ ಆಕೆಗೆ ಬೆಂಕಿ ಹಚ್ಚಿದ್ದ.
ಎಫ್ಐಆರ್ ವಿವರಗಳ ಪ್ರಕಾರ ಮನೆಯಿಂದ ಹೊರಕ್ಕೆ ತಳ್ಳುವ ಮುನ್ನ ಗುರುವಾರ ಆಕೆಯನ್ನು ಪುನಃ ಥಳಿಸಲಾಗಿತ್ತು ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಲಕ್ನೋದ ಮಹಿಳಾ ಆಯೋಗದ ಅಧ್ಯಕ್ಷರಿಗೆ ನೀಡಿದ ದೂರಿನಲ್ಲೂ ಅತ್ಯಾಚಾರ ಸಂತ್ರಸ್ಥೆ ಇದೇ ಮಾಹಿತಿಯನ್ನು ನೀಡಿದ್ದಾರೆ.
ಉತ್ತರ
ಪ್ರದೇಶ ವಿಧಾನಸಭಾಧ್ಯಕ್ಷ ಹೃದಯ ನಾರಾಯಣ ದೀಕ್ಷಿತ್ ಅವರ
ಕ್ಷೇತ್ರದ ಗ್ರಾಮವೊಂದರ ಮಧ್ಯಮ ದರ್ಜೆಯ ರೈತನ ಮನೆಯಲ್ಲಿ ಜನಿಸಿದ ಆಕೆಯನ್ನು ಶ್ರೀಮಂತ ಕುಟುಂಬದ ಶಿವಮ್ ಮದುವೆಯಾಗುವ ಪ್ರಸ್ತಾಪವನ್ನು ಇಟ್ಟು ಸೆಳೆದುಕೊಂಡ. ಶಿವಮ್ ಮಾತುಗಳನ್ನು ನಂಬಿದ ಆಕೆ ಆತನ ಜೊತೆಗೆ ಲಾಲ್ಗಂಜ್ಗೆ ತೆರಳಿದಳು. ಅಲ್ಲಿ
ಅವರಿಬ್ಬರೂ ಮದುವೆಯಾಗುವುದಾಗಿ ಯೋಜಿಸಲಾಗಿತ್ತು.
ಆದರೆ,
ಮದುವೆಗೆ ಬದಲಾಗಿ ಆಕೆಯ ಮೇಲೆ ಅತ್ಯಾಚಾರ ನಡೆಯಿತು. ಆ ದೃಶ್ಯವನ್ನು ಆತನ
ಮೊಬೈಲ್ ಫೋನಿನಲ್ಲಿ ಸೆರೆ ಹಿಡಿಯಲಾಯಿತು. ಇದು ತನ್ನ ನರಕವಾಸದ ಆರಂಭ. ಬಳಿಕ ಆತ ವಿಡಿಯೋವನ್ನು ಸಾಮಾಜಿಕ
ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಾ ಅತ್ಯಾಚಾರವನ್ನು ಪುನರಾವರ್ತಿಸಿದ ಎಂದು ಮಹಿಳೆ ತನ್ನ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಶಿವಮ್
ತನ್ನನ್ನು ಬಾಡಿಗೆ ಕೊಠಡಿ ಒಂದರಲ್ಲಿ ಇರಿಸಿದ್ದ. ತನ್ನ ಮೇಲೆ ಕಟ್ಟು ನಿಟ್ಟಿನ ನಿಗಾ ಇಟ್ಟಿದ್ದ. ಹೊರಕ್ಕೆ ಹೋಗಲು ಯತ್ನಿಸಿದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದ. ಆತ ನಿಯಮಿತವಾಗಿ ಮನೆಗಳನ್ನು
ಮತ್ತು ನಗರಗಳನ್ನು ಬದಲಾಯಿಸುತ್ತಿದ್ದ. ೨೦೧೮ರ ಜನವರಿ ೧೯ರಂದು ಆಕೆ ಕಟ್ಟ ಕಡೆಗೆ ಶಿವನ್ ವರ್ತನೆಯನ್ನು ಪ್ರತಿಭಟಿಸಿದಳು ಮತ್ತು ಭರವಸೆ ನೀಡಿದ್ದಂತೆ ಮದುವೆಯಾಗಲು ಒತ್ತಾಯಿಸಿದಳು ಎಂದು ಆಕೆ ತನ್ನ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಶಿವಮ್
ಆಕೆಯನ್ನು ರಾಯ್ ಬರೇಲಿ ನ್ಯಾಯಾಲಯಕ್ಕೆ ಕರೆದೊಯ್ದು, ಮದುವೆ ಒಪ್ಪಂದವನ್ನು ಸಿದ್ಧ ಪಡಿಸಿದ. ಶೀಘ್ರವೇ ಮದುವೆಯಾಗುವುದಾಗಿ ಹೇಳುತ್ತಾ ರಾಯ್ ಬರೇಲಿಯ ಮನೆಯೊಂದರಲ್ಲಿ ಒಂದು ತಿಂಗಳು ಕಾಲ ಕಳೆದ. ಒಂದು ತಿಂಗಳ ಬಳಿಕ ಆಕೆಯನ್ನು ಹಳ್ಳಿಯಲ್ಲಿ ಬಿಟ್ಟು ಹೋದ. ಶಿವಮ್ ಈ ಬಾರಿ ಭೇಟಿಯಾದಾಗ,
ಆಕೆಯನ್ನು ಹಾಗೂ ಆಕೆಯ ಕುಟುಂಬ ಸದಸ್ಯರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಭೀತಿ
ಹಾಗೂ ಭ್ರಮನಿರಸನಕ್ಕೆ ಒಳಗಾದ ಸಂತ್ರಸ್ಥೆ ರಾಯ್ ಬರೇಲಿಯ ತನ್ನ ಬಂಧುವೊಬ್ಬರ ಮನೆಯಲ್ಲಿ ಆಶ್ರಯ ಪಡೆದರು. ಶಿವಮ್ ಹೇಗೋ ಆಕೆಯ ವಿಳಾಸ ಪತ್ತೆ ಹಚ್ಚಿ, ಡಿಸೆಂಬರ್ ೧೨ರಂದು ಅಲ್ಲಿಗೂ ಬಂದ.
ಮತ್ತೆ
ಮದುವೆಯಾಗುವ ಭರವಸೆ ನೀಡಿ, ದೇವಾಲಯ ಒಂದಕ್ಕೆ ಕರೆದೊಯ್ದು ದೇವರ ಮುಂದೆ ಪ್ರಮಾಣ ಮಾಡಿದ. ಆದರೆ ಅಲ್ಲಿಂದ ವಾಪಸ್ ಬರುತ್ತಿದ್ದಂತೆಯೇ ಶಿವಮ್ ಮತ್ತು ಆತನ ಸಹೋದರ ಶುಭಮ್ ಆಕೆಯನ್ನು ಹೊಲ ಒಂದಕ್ಕೆ ಎಳೆದೊಯ್ದು ಪಿಸ್ತೂಲು ತೋರಿಸಿ ಅತ್ಯಾಚಾರ ಎಸಗಿದರು ಎಂದು ಎಫ್ಐಆರ್ ಹೇಳಿದೆ.
ಆಕೆ,
ರಾಯ್ ಬರೇಲಿ ಪೊಲೀಸ್ ಬಳಿಗೆ ಹೋಗಿ ದೂರು ಕೊಟ್ಟಳು ಆದರೆ, ಅವರು ದೂರು ದಾಖಲಿಸಿಕೊಳ್ಳದೆಯೇ ಆಕೆಯನ್ನು ವಾಪಸ್ ಕಳುಹಿಸಿದರು ಎಂದು ಎಫ್ಐಆರ್ ತಿಳಿಸಿದೆ.
ನ್ಯಾಯಾಲಯದ
ಮಧ್ಯಪ್ರವೇಶದ ಬಳಿಕ ಮಾತ್ರವೇ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೬ಡಿ (ಸಾಮೂಹಿಕ ಅತ್ಯಾಚಾರ) ಮತ್ತು ೫೦೬ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ೨೦೧೯ರ ಮಾರ್ಚ್ ೫ರಂದು ಬಿಹಾರ್ ಬಹ್ತ ಪೊಲೀಸ್ ಠಾಣೆಯಲ್ಲೂ, ಮಾರ್ಚ್ ೬ರಂದು ಲಾಲ್ ಗಂಜ್ ಠಾಣೆಯಲ್ಲೂ ಎಫ್ಐಆರ್ ದಾಖಲಿಸಿದ್ದರು.
No comments:
Post a Comment