Friday, January 3, 2020

ಬೆಂಗಳೂರು ಡಿಆರ್‌ಡಿಓದಲ್ಲಿ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು ಡಿಆರ್ಡಿಓದಲ್ಲಿ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ತುಮಕೂರಿನ ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್ಡಿಒ) ಯುವ ವಿಜ್ಞಾನಿಗಳಿಗೆ ಅತ್ಯಾಧುನಿಕ ಸಂಶೋಧನೆ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಸಲುವಾಗಿ ಐದು ಪ್ರಯೋಗಾಲಯಗಳನ್ನು (ಲ್ಯಾಬೋರೇಟರಿ) ಉದ್ಘಾಟಿಸಿದರು.

ಅತ್ಯಂತ
ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಹೊಸ ಆವಿಷ್ಕಾಗಳಿಗಾಗಿ ಹೋಡಿಕೆ ಮಾಡುವುದು ಅತಿ ಮುಖ್ಯ, ಸಂಶೋಧನೆಯಲ್ಲಿ ನಮ್ಮ ಯುವಕರು ಹಿಂದೆ ಬೀಳಬಾರದು ಎಂದು ಅವರು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು

No comments:

Advertisement