Friday, January 3, 2020

ರಾಜಸ್ಥಾನದ ಕೋಟಾ ಶಿಶು ಸಾವು ಸಂಖ್ಯೆ ೧೦೨ಕ್ಕೆ, ಕೇಂದ್ರ ಮಧ್ಯಪ್ರವೇಶ

ರಾಜಸ್ಥಾನದ ಕೋಟಾ ಶಿಶು ಸಾವು ಸಂಖ್ಯೆ ೧೦೨ಕ್ಕೆ,
ಕೇಂದ್ರ ಮಧ್ಯಪ್ರವೇಶ
ನವದೆಹಲಿ: ರಾಜಸ್ಥಾನದ ಕೋಟಾದಲ್ಲಿನ ಜೆಕೆ ಲೋನ್ ಆಸ್ಪತ್ರೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪುವುದರೊಂದಿಗೆ ಡಿಸೆಂಬರ್ ಆರಂಭದಿಂದ ಈವರೆಗೆ ಸಾವನ್ನಪ್ಪಿದ ಶಿಶುಗಳ ಸಂಖ್ಯೆ ೧೦೨ಕ್ಕೆ ಏರಿದೆ. ಕಳೆದ ೭೨ ಗಂಟೆಗಳ ಅವಧಿಯಲಿ ೧೧ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು 2020 ಜನವರಿ 02ರ ಗುರುವಾರ  ಮಧ್ಯಪ್ರವೇಶ ಮಾಡಿದರು.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ವರ್ಷ ಶಿಶುಗಳ ಮರಣದ ಸಂಖ್ಯೆ ಖಂಡಿತವಾಗಿ ಹೆಚ್ಚಾಗಿದೆ ಎಂದು ಹೇಳಿದ ಕೇಂದ್ರ ಸಚಿವರು ಆರೋಗ್ಯ ಬಿಕ್ಕಟ್ಟು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಬೆಂಬಲದ ಭರವಸೆ ನೀಡಿದರು. ’ನಾನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಪತ್ರ ಬರೆದು ವಿಷಯದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದೇನೆಎಂದು ಅವರು ಹೇಳಿದರು.
  
ಡಿಸೆಂಬರ್ ತಿಂಗಳಲ್ಲಿ ಕನಿಷ್ಠ ೧೦೦ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ೨೦೧೮ರಲ್ಲಿ ಸಂಭವಿಸಿದ್ದ ೭೭ ಮಕ್ಕಳ ಸಾವಿನ ಸಂಖ್ಯೆಯನ್ನು ಮೀರಿದೆ. ೨೦೧೯ರ ಕೊನೆಯ ಎರಡು ದಿನಗಳಲ್ಲಿ ಶಿಶುಗಳು ಅಸು ನೀಗಿದ್ದು, ಎಲ್ಲ ಸಾವುಗಳೂ ಜನನ ಕಾಲದಲ್ಲಿನ ಕಡಿಮೆ ತೂಕದ ಕಾರಣ ಸಂಭವಿಸಿದೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುರೇಶ್ ದುಲೇರಾ ನುಡಿದರು.

ಶಿಶು ಮರಣದ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೂಡಾ ಪಕ್ಷದ ರಾಜ್ಯ ಅಧ್ಯಕ್ಷ ಅವಿನಾಶ್ ಪಾಂಡೆ ಅವರಿಂದ ವಿವರಣೆ ಕೇಳಿದ್ದಾರೆ. ಸಾವುಗಳ ಬಗ್ಗೆ ವಿವರವಾದ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಪಾಂಡೆ ನುಡಿದರು.

ಶಿಶುಸಾವು ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಗುರುವಾರ ಸರಣಿ ಟ್ವೀಟ್ಗಳ ಮೂಲಕ ತಮ್ಮ ಸರ್ಕಾರವು ಜೆಕೆ ಲೋನ್ ಆಸ್ಪತ್ರೆಯಲ್ಲಿ ಅಸ್ವಸ್ಥ ಶಿಶುಗಳ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಗಮನ ಹರಿಸಿದೆ, ವಿಷಯಕ್ಕೆ ಸಂಬಂಧಿಸಿದಂತೆ ಯಾರೂ ರಾಜಕಾರಣ ಮಾಡಬೇಡಿ ಎಂದು ಮನವಿ ಮಾಡಿದರು.

ಕೋಟಾದ ಆಸ್ಪತ್ರೆಯಲ್ಲಿ ಶಿಶು ಮರಣದ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಅದನ್ನು ಇನ್ನಷ್ಟು ಇಳಿಸಬೇಕಾಗಿದೆ. ತಾಯಂದಿರು ಮತ್ತು ಮಕ್ಕಳ ಆರೋಗ್ಯಕ್ಕೆ ನಮ್ಮ ಆದ್ಯತೆ ಇದೆಗೆಹ್ಲೋಟ್ ಟ್ವೀಟ್ ಮೂಲಕ ತಿಳಿಸಿದರು.

ರಾಜ್ಯದಲ್ಲಿ ಆರೋಗ್ಯ ಸೇವೆ ಸುಧಾರಣೆಗೆ ನೆರವಾಗಲು ತಜ್ಞರ ತಂಡದ ರಚನೆ ಮೂಲಕ ಕೇಂದ್ರ ಸರ್ಕಾರವು ಮುಂದೆ ಬಂದಿರುವುದನ್ನು ಕೂಡಾ ಕಾಂಗ್ರೆಸ್ ಮುಖ್ಯಮಂತ್ರಿ ಸ್ವಾಗತಿಸಿದರು. ಅವರ ಜೊತೆ ಸಮಾಲೋಚನೆ ಮತ್ತು ಸಹಕಾರದ ಮೂಲಕ ರಾಜ್ಯದಲ್ಲಿ ವೈದ್ಯಕೀಯ ಸೇವೆಗಳನ್ನು ಸುಧಾರಿಸಲು ನಾವು ಸಿದ್ಧರಿದ್ದೇವೆಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದರು.

ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಯಾವುದೇ ನ್ಯೂನತೆಗಳು ಇಲ್ಲ ಮತ್ತು ಸಮರ್ಪಕ ಚಿಕಿತ್ಸೆ ನೀಡಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರವು ದೃಢ ಪಡಿಸಿದ ಎರಡು ದಿನಗಳ ಬಳಿಕ ಮುಖ್ಯಮಂತ್ರಿಯಿಂದ ಹೇಳಿಕೆ ಬಂದಿದೆ.

ಆಸ್ಪತ್ರೆ ಆಡಳಿತವು ಕಳೆದವಾರ ಮಕ್ಕಳ ವಿಭಾಗದ ಮುಖ್ಯಸ್ಥ ಅಮೃತ್ ಲಾಲ್ ಭೈರ್ವಾ ನೇತೃತ್ವದಲ್ಲಿ ಶಿಶುಮರಣದ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು.

ಆದಾಗ್ಯೂ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ಸೋಮವಾರ ಕೋಟಾ ಆಸ್ಪತ್ರೆಯಲ್ಲಿ ಗಂಭೀರವಾದ ನ್ಯೂನತೆಗಳು ಇರುವುದನ್ನು ಪತ್ತೆ ಹಚ್ಚಿತ್ತು. ಒಡೆದ ಕಿಡಕಿಗಳು ಮತ್ತು ಗೇಟುಗಳು, ಆಸ್ಪತ್ರೆ ಆವರಣದ ಒಳಗೆ ಹಂದಿಗಳ ಸ್ವಚ್ಚಂದ ವಿಹಾರ ಮತ್ತು ತೀವ್ರಸ್ವರೂಪದ ಸಿಬ್ಬಂದಿ ಕೊರತೆ ತನಿಖೆಯಿಂದ ಬೆಳಕಿಗೆ ಬಂತು ಎಂದು ಆಯೋಗ ಹೇಳಿದೆ.

ಏನಿದ್ದರೂ
, ೨೦೧೯ರಲ್ಲಿ ಆರೋಗ್ಯ ಸವಲತ್ತು ವಿಭಾಗದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ ೨೦೧೪ರಿಂದೀಚೆಗೆ ಗಮನಾರ್ಹವಾಗಿ ಇಳಿದಿರುವುದು ಕಂಡು ಬಂದಿದೆ. ೨೦೧೪ರಲ್ಲಿ ,೧೯೮ ಮಕ್ಕಳು ಸಾವನ್ನಪ್ಪಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ಪ್ರತಿಪಾದಿಸಿದ್ದರು.

೨೦೧೯ರಲ್ಲಿ ೯೬೩ ಶಿಶುಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದವು. ೨೦೧೮ರಲ್ಲಿ ಸಂಖ್ಯೆ ೧೦೦೫ ಆಗಿತ್ತು. ಅವಧಿಪೂರ್ವ ಮತ್ತು  ಅಸ್ವಸ್ಥ ಶಿಶುಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ನವಜಾತ ಶಿಶುಗಳ ತೀವ್ರ ನಿಗಾ ಕೇಂದ್ರದ ನರ್ಸಿಂಗ್ ಉಸ್ತುವಾರಿ ನೋಡುತ್ತಿದ್ದವರನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರ್ದೇಶನಗಳ ಪ್ರಕಾರ ಆಸ್ಪತ್ರೆಯ ನಿರ್ವಹಣಾ ಸಲಕರಣೆಗಳ ನವೀಕರಣಕ್ಕೆ ಯತ್ನಕ್ಕೆಗಳನ್ನು ಮಾಡಲಾಗುತ್ತಿದೆ.

ಆಸ್ಪತ್ರೆಯಲಿ
ಸೆಂಟ್ರಲ್ ಆಕ್ಸಿಜನ್ ಸಪ್ಲೈ ಲೈನ್ ಅಳವಡಿಕೆಗೆ ಆದೇಶ ನೀಡಲಾಗಿದ್ದು, ಮುಂದಿನ ೧೫ ದಿನಗಳಲ್ಲಿ ಕಾರ್ ಪೂರ್ಣಗೊಳ್ಳಲಿದೆ ಎಂದು ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ವಿಜಯ್ ಸರ್ದಾನ ಹೇಳಿದರು.

ಸಂಸತ್ ಸದಸ್ಯರಾದ ಲಾಕೆಟ್ ಚಟರ್ಜಿ, ಕಾಂತಾ ಕರ್ದಮ್ ಮತ್ತು ಜಸ್ಕೌರ್ ಮೀನಾ ಅವರನ್ನು ಒಳಗೊಂಡ ಬಿಜೆಪಿ ಸಂಸದೀಯ ಸಮಿತಿಯು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮೂಲಸವಲತ್ತು ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ ಬಳಿಕ ಸೆಂಟ್ರಲ್ ಆಕ್ಸಿಜನ್ ಸಪ್ಲೈ ಲೈನ್ ಅಳವಡಿಕೆಗೆ ನಿರ್ದೇಶನ ನೀಡಲಾಗಿದೆ.

ಒಂದೇ ಹಾಸಿಗೆಯಲ್ಲಿ ಎರಡು ಅಥವಾ ಮೂರು ಮಕ್ಕಳು ಕಂಡುಬಂದರು ಮತ್ತು ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಾದಿಯರು ಇಲ್ಲ ಎಂದು ಸಮಿತಿ ಹೇಳಿತ್ತು.

ಮಾಯಾವತಿ ತರಾಟೆ: ಮಧ್ಯೆ ಕೋಟಾ ಆಸ್ಪತ್ರೆಯ ದುರವಸ್ಥೆ ಬಗ್ಗೆ ಕಾಂಗ್ರೆಸ್ ವರಿಷ್ಠ ಮಂಡಳಿ ಅದರಲ್ಲೂ ವಿಶೇಷವಾಗಿ ಎಐಸಿಸಿಯ ಮಹಿಳಾ ಪ್ರಧಾನ ಕಾರ್ಯದರ್ಶಿ ಮೌನವಾಗಿರುವುದು ಏಕೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಟ್ವೀಟ್ ಮಾಡುವ ಮೂಲಕ ಈದಿನ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತರಾಟೆಗೆ ತೆಗೆದುಕೊಂಡರು

No comments:

Advertisement