'ಕೊಳಕು
ಚಿತ್ರ’ ಹೇಳಿಕೆ:
ಕಾಶ್ಮೀರಿಗಳ ಕ್ಷಮೆ ಕೋರಿದ ನೀತಿ ಆಯೋಗದ ಸದಸ್ಯ
ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿಷೇಧಕ್ಕೆ (ಇಂಟರ್ನೆಟ್ ಬ್ಯಾನ್) ಸಂಬಂಧಿಸಿದಂತೆ ತಾನು ನೀಡಿದ ಹೇಳಿಕೆಗಾಗಿ ಅವರು
2020 ಜನವರಿ 19ರ ಭಾನುವಾರ
ಕಾಶ್ಮೀರಿಗಳ
ಕ್ಷಮೆ ಯಾಚಿಸಿದ ನೀತಿ ಆಯೋಗದ ಸದಸ್ಯ ವಿ ಕೆ ಸಾರಸ್ವತ್
ಅವರು ’ಅದನ್ನು ಸಂದರ್ಭವನ್ನು ಮೀರಿ ಉಲ್ಲೇಖಿಸಲಾಗಿದೆ’ ಎಂದು
ಹೇಳಿದರು.
ಜಮ್ಮು
ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ನ್ನು ಕೇವಲ ’ಕೊಳಕು ಚಿತ್ರಗಳನ್ನು’ ವೀಕ್ಷಿಸಲು
ಬಳಸಲಾಗುತ್ತದೆ ಎಂದು ಸಾರಸ್ವತ್ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.
‘ಸಂದರ್ಭವನ್ನು
ಮೀರಿ ನನ್ನನ್ನು ಉಲ್ಲೇಖಿಸಲಾಗಿದೆ. ಈ ತಪ್ಪು ಉಲ್ಲೇಖವು
ಕಾಶ್ಮೀರದ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದರೆ, ನಾನು ಅವರ ಕ್ಷಮೆ ಯಾಚಿಸುತ್ತೇನೆ ಮತ್ತು ಇದು ನಾನು ಕಾಶ್ಮೀರಿಗಳ ಇಂಟರ್ ನೆಟ್ ಬಳಕೆ ಹಕ್ಕಿಗೆ ವಿರುದ್ಧವಾಗಿದ್ದೇನೆ ಎಂಬ ಭಾವನೆ ಮೂಡಿಸುವುದನ್ನು ಇಚ್ಛಿಸುವುದಿಲ್ಲ’ ಎಂದು
ಅವರು ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಅಹಮದಾಬಾದಿನ
ಧೀರೂಭಾಯಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆಯಲ್ಲಿ ಅವರು
2020 ಜನವರಿ 18ರ ಶನಿವಾರ
ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಾರಸ್ವತ್ ಅವರು ’ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಸರ್ಕಾರದ ಕ್ರಮವನ್ನು ಅನುಸರಿಸಿ ಇಂಟರ್ನೆಟ್ ನಿಷೇಧಿಸಿದ್ದರಿಂದ ಪ್ರದೇಶದ ಜನರಿಂದ ’ಕೊಳಕು
ಚಿತ್ರ’ಗಳ
ವೀಕ್ಷಣೆಗೆ ಕತ್ತರಿ ಬಿದ್ದಿರುವುದರ ಹೊರತಾಗಿ ಕಾಶ್ಮೀರ ಕಣಿವೆಯಲ್ಲಿ ವ್ಯವಹಾರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಿಲ್ಲ’ ಎಂದು
ಹೇಳಿದ್ದರು ರೆಂದು ಮಾಧ್ಯಮಗಳು ವರದಿ ಮಾಡಿದ್ದವು.
‘ಕಾಶ್ಮೀರದಲ್ಲಿ
ಇಂಟರ್ ನೆಟ್ ಇಲ್ಲದೇ ಇದ್ದರೆ ಏನು ವ್ಯತ್ಯಾಸವಾಗುತ್ತದೆ? ಅಲ್ಲಿ ನೀವು ಇಂಟರ್ ನೆಟ್ ನಲ್ಲಿ ಏನನ್ನು ನೋಡುತ್ತೀರಿ? ಯಾವ ಇ-ಟೈಲಿಂಗ್ ಅಲ್ಲಿ
ನಡೆಯುತ್ತದೆ? ಕೊಳಕು ಚಿತ್ರಗಳ ವೀಕ್ಷಣೆ ಹೊರತಾಗಿ ನೀವು ಅಲ್ಲಿ ಬೇರೇನನ್ನೂ ಮಾಡುವುದಿಲ್ಲ’ ಎಂದು
ಸಾರಸ್ವತ್ ಹೇಳಿದ್ದುದಾಗಿ ವರದಿಗಳು ತಿಳಿಸಿದ್ದವು.
‘ಸಂಸ್ಥೆಯು
ಸಂಸ್ಥೆಯು ಪ್ರೆಸ್ ಕ್ಲಬ್ನಲ್ಲಿ ಸಂಸ್ಥೆ ಮತ್ತು ನನ್ನ ಸಂವಾದ ಏರ್ಪಡಿಸಿತ್ತು. ನಾವು ಅಲ್ಲಿ ೫ ಜಿ ಸೇರಿದಂತೆ
ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೆವು. ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸುವುದನ್ನು ಬಿಟ್ಟು ಸರ್ಕಾರದ ಸಾಧನೆ ಮತ್ತು ಆರ್ಥಿಕತೆಯ ಕುರಿತು ನನ್ನ ಅಭಿಪ್ರಾಯಗಳ ಬಗ್ಗೆ ಅವರು (ವರದಿಗಾರರು) ಪ್ರಶ್ನೆಗಳನ್ನು ಕೇಳಿದರು’ ಎಂದು ಸಾರಸ್ವತ್ ಸುದ್ದಿ ಸಂಸ್ಥೆಗೆ ತಿಳಿಸಿದರು.
‘ಇದು
ಅಲ್ಲಿ ಇದ್ದ ಜನರ ನಡುವಣ ಖಾಸಗಿ ಸಂಭಾಷಣೆಯಾಗಿತ್ತು. ಆದ್ದರಿಂದ ಅಲ್ಲಿ ಬೇರೆ ಏನನ್ನಾದರೂ ಹೇಳಿದ್ದೇನೆ ಎಂಬುದನ್ನು ನಾನು ಪ್ರಬಲವಾಗಿ ನಿರಾಕರಿಸುತ್ತೇನೆ’ ಎಂದು
ಅವರು ನುಡಿದರು.
ಆಗಸ್ಟ್
೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯವನ್ನು ವಿಭಜಿಸುವ ಕ್ರಮದ ಮುನ್ನಾ ದಿನ ಕೇಂದ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಸಂಪರ್ಕ ನಿಷೇಧವನ್ನು ಜಾರಿಗೊಳಿಸಿತ್ತು.
ಕ್ರಮೇಣ
ಸ್ಥಿರ ದೂರವಾಣಿಯನ್ನು ಒದಗಿಸಿದರೂ, ಇಂಟರ್ ನೆಟ್ ಮತ್ತು ಪೂರ್ವ ಪಾವತಿ ಮೊಬೈಲಸ್ ಸೇವೆಗಳನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಆಗಸ್ಟ್ -ಸೆಪ್ಟೆಂಬರ್ ಮಧ್ಯಾವಧಿ ವೇಳೆಗೆ ಸ್ಥಿರ ದೂರವಾಣಿ ಸಂಪರ್ಕ ಮತ್ತು ಅಕ್ಟೋಬರ್ ೧೪ರ ವೇಳೆಗೆ ಪೂರ್ವ ಪಾವತಿ ಮೊಬೈಲ್ ಸಂಪರ್ಕಗಳು ಪುನಃಸ್ಥಾಪನೆಗೊಂಡಿದ್ದವು.
ಕೇಂದ್ರಾಡಳಿತ
ಪ್ರದೇಶ ಲಡಾಖ್ನ ಭಾಗವಾದ ಕಾರ್ಗಿಲ್
ನಲ್ಲಿ ಡಿಸೆಂಬರ್ ಕೊನೆಯವಾರ ಮೊಬೈಲ್ ಇಂಟರ್ ನೆಟ್ ಪುನಾರಂಭವಾಗಿತ್ತು. ಎಸ್ ಎಂಎಸ್ ಮತ್ತು ಮೊಬೈಲ್ ಫೋನುಗಳು ಹಾಗೂ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆಗಳು ಜನವರಿ ೧ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಪುನಃಸ್ಥಾಪನೆಗೊಂಡಿದ್ದವು.
ಜನವರಿ ೧೦ರಂದು ಇಂಟರ್ ನೆಟ್ ಬಳಕೆಯನ್ನು ಮೂಲಭೂತ ಹಕ್ಕು ಎಂಬುದಾಗಿ ಹೇಳಿದ ಸುಪ್ರೀಂಕೋರ್ಟ್ ಇಂಟರ್ ನೆಟ್ ಮೇಲಿನ ನಿಯಂತ್ರಣಗಳನ್ನು ಪುನರ್ ಪರಿಶೀಲಿಸುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಆಜ್ಞಾಪಿಸಿತ್ತು. ನಿಯಂತ್ರಣಗಳ ಪುನರ್ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಂದು ವಾರದ ಗಡುವು ನೀಡಿತ್ತು.
No comments:
Post a Comment