Wednesday, January 15, 2020

ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಕುಸಿತ: ೪ ಯೋಧರು ಹುತಾತ್ಮ, ೫ ನಾಗರಿಕರ ಸಾವು

ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಕುಸಿತ ಯೋಧರು ಹುತಾತ್ಮ, ನಾಗರಿಕರ ಸಾವು
ನವದೆಹಲಿ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಾಚಿಲ್ ವಿಭಾಗದ ಸಮೀಪ ಸಂಭವಿಸಿದ ಭಾರೀ ಪ್ರತ್ಯೇಕ ಹಿಮಕುಸಿತಗಳಲ್ಲಿ ನಾಲ್ವರು ಯೋಧರು ಹಾಗೂ ಐವರು ನಾಗರಿಕರು ಸಾವನ್ನಪ್ಪಿರುವ ಘಟನೆ  2020 ಜನವರಿ 14ರ ಮಂಗಳವಾರ  ನಸುಕಿನಲ್ಲಿ ಘಟಿಸಿತು.
ಗಾಯಗೊಂಡಿರುವ ಯೋಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿತು.
ಸೋಮವಾರ ರಾತ್ರಿ ಗಂಟೆ ಸುಮಾರಿಗೆ ಸೇನಾ ಶಿಬಿರದ ಮೇಲೆ ಹಿಮದ ರಾಶಿ ಕುಸಿದು ಬಿದ್ದಿರುವುದಾಗಿ ವರದಿ ಹೇಳಿದೆ.

ಪ್ರತ್ಯೇಕ ಹಿಮಕುಸಿತ ಘಟನೆಗಳಲ್ಲಿ ಯೋಧರು ಹುತಾತ್ಮರಾದರು.
ಜಮ್ಮು ಕಾಶ್ಮೀರದ ನೌಗಾಮ್ ವಿಭಾಗದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್ ) ಯೋಧ ಹುತಾತ್ಮರಾದರು. ಆರು ಮಂದಿ ಯೋಧರನ್ನು ರಕ್ಷಿಸಲಾಯಿತು.

ಗಡಿನಿಯಂತ್ರಣ
ರೇಖೆ ಬಳಿ ಗಡಿ ಭದ್ರತಾ ಪಡೆ ತೆರಳಿ ರಕ್ಷಣಾ ಕಾರ್ಯ ನಡೆಸಿರುವುದಾಗಿ ವರದಿ ತಿಳಿಸಿತು.

ಮತ್ತೊಂದು ಘಟನೆಯಲ್ಲಿ ಗಂದೆರ್ಬಾಲ್ ಜಿಲ್ಲೆಯ ಸೋನ್ ಮಾರ್ಗ್ನಲ್ಲಿ ಭಾರೀ ಪ್ರಮಾಣದ ಹಿಮ ಕುಸಿತದಲ್ಲಿ ಒಂಬತ್ತು ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ರಕ್ಷಿಸಲಾಯಿತು. ಐವರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಉತ್ತರ ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಕಳೆದ ೪೮ಗಂಟೆಗಳಲ್ಲಿ ಭಾರೀ ಪ್ರಮಾಣದ ಹಿಮಕುಸಿತ ಸಂಭವಿಸಿದ್ದು, ಹಲವಾರು ಯೋಧರನ್ನು ರಕ್ಷಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಹಿಮಕುಸಿತದೊಳಕ್ಕೆ ಸಿಲುಕಿದ್ದು, ಸ್ಥಳೀಯರು ಇಬ್ಬರನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.

No comments:

Advertisement