Wednesday, January 29, 2020

'ಗೋಲಿ ಮಾರೊ ಘೋಷಣೆ: ಕೇಂದ್ರ ಸಚಿವ ಠಾಕೂರ್ ಗೆ ಇಸಿ ನೋಟಿಸ್

'ಗೋಲಿ ಮಾರೊ  ಘೋಷಣೆ: ಕೇಂದ್ರ ಸಚಿವ ಠಾಕೂರ್ ಗೆ
ಇಸಿ ನೋಟಿಸ್
ನವದೆಹಲಿ:  ದೆಹಲಿಯಲ್ಲಿ ನಡೆದ ಎರಡು ಚುನಾವಣಾ ಸಭೆಗಳಲ್ಲಿ  ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸತ್ ಸದಸ್ಯ ಪರ್ವೇಶ್ ವರ್ಮಾ ಅವರಿಗೆ ಚುನಾವಣಾ ಆಯೋಗವು 2020 ಜನವರಿ 28ರ ಮಂಗಳವಾರ ನೋಟಿಸ್ ನೀಡಿತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ "ಗೋಲಿ ಮಾರೊ" - ಅಥವಾದೇಶದ್ರೋಹಿಗಳಿಗೆ ಗುಂಡಿಕ್ಕಿಎಂಬುದಾಗಿ ಚುನಾವಣಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಕೇಂದ್ರ ಹಣಕಾಸು ಸಹಾಯಕ ಸಚಿವ ಠಾಕೂರ್ ಅವರಿಗೆ ನೋಟಿಸ್ ನೀಡಲಾಗಿದ್ದು, 2020 ಜನವರಿ 30ರ ಗುರುವಾರ ಮಧ್ಯಾಹ್ನದೊಳಗೆ   ಉತ್ತರ ನೀಡುವಂತೆ  ನಿರ್ದೇಶಿಲಾಗಿದೆ  ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದ ಕೇಂದ್ರ ಹಣಕಾಸು ಸಹಾಯಕ ಸಚಿವ ಠಾಕೂರ್ ಮತ್ತು ಸಂಸದ ಪರ್ವೇಶ್ ವರ್ಮಾ ಅವರು ಬಳಸಿದಪ್ರಚೋದನಕಾರಿಭಾಷೆಯ ಕುರಿತು ಚುನಾವಣಾ ಆಯೋಗಕ್ಕೆ  ಹಿಂದಿನ ದಿನ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ವರದಿ ಸಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ವಾಯವ್ಯ ದೆಹಲಿಯ ರಿಥಾಲಾದಲ್ಲಿ ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ ಪರ ಪ್ರಚಾರ ನಡೆಸುತ್ತಿದ್ದಾಗ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ  ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ನಂತರ  ಠಾಕೂರ್ ಅವರುಗುಂಡು ಹಾರಿಸಿ  ಘೋಷಣೆ ಕೂಗಿದ್ದರು ಎನ್ನಲಾಗಿದೆ.

ಠಾಕೂರ್ ಅವರು ಜನರನ್ನು ಪ್ರಚೋದಿಸಲು "ದೇಶ್ ಕೆ ಗದ್ದಾರೋಂ ಕೋ ..." ಎಂಬುದಾಗಿ ಕೂಗಿದ್ದು ಮತ್ತು ಜನ ಸಮುದಾಯವು  "... ಗೋಲಿ ಮಾರೊ ಸಾ *** ನ್  ಕೊ" ("ದೇಶಕ್ಕೆ ದ್ರೋಹ ಮಾಡುವ ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂಬುದಾಗಿ ಪ್ರತಿಕ್ರಿಯಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.
ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆಗೆ ಸಚಿವರು ಸುದ್ದಿ ಸಂಸ್ಥೆಗೆ ಲಭಿಸಿಲ್ಲ. ಆದರೆ ಅವರ ತಂಡದ ಸದಸ್ಯರೊಬ್ಬರು ಠಾಕೂರ್ ಅವರು ಘೋಷಣೆಯ ಎರಡನೇ ಭಾಗವನ್ನು ಉಚ್ಚರಿಸಿಲ್ಲ ಎಂದು ಹೇಳಿದರು.

ಮಂಗಳವಾರ ನಡೆದ ಮತ್ತೊಂದು ಸಭೆಯಲ್ಲಿ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರೊಂದಿಗೆ ಏನಾಯಿತೋ ಅದೇ  ದೆಹಲಿಯಲ್ಲಿ ಸಂಭವಿಸಬಹುದು ಎಂದು ಹೇಳಿದ್ದರು.

ಶಾಹೀನ್ ಬಾಗ್ ಲಕ್ಷಾಂತರ ಸಿಎಎ ವಿರೋಧಿ ಪ್ರತಿಭಟನಾಕಾರರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲ್ಲಲು ಮನೆಗಳಿಗೆ ಪ್ರವೇಶಿಸಬಹುದು ಎಂದು ಅವರು ಎಚ್ಚರಿಸಿದ್ದರು.

ಫೆಬ್ರುವರಿ ಚುನಾವಣೆಗೆ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರ ಅವರ ಮೇಲೆಇಂಡಿಯಾ ವರ್ಸಸ್ ಪಾಕ್ಟ್ವೀಟ್ ಸರಣಿಯ ಬಳಿಕ ಶನಿವಾರ ಚುನಾವಣಾ ಆಯೋಗವು ೪೮ ಗಂಟೆಗಳ ಪ್ರಚಾರ ನಿಷೇಧ ಹೇರಿತ್ತು. ಮಿಶ್ರ ಅವರ ಮನವಿಯು ಕೋಮು ಭಾವನೆಗಳಿಗೆ ಪ್ರಚೋದನೆ ಎಂಬುದಾಗಿ ಚುನಾವಣಾ ಆಯೋಗ ಹೇಳಿತ್ತು.

No comments:

Advertisement