ಎಷ್ಟು
ಬೇಕಾದರೂ ಪ್ರತಿಭಟಿಸಿ, ಸಿಎಎ ವಾಪಸಾತಿ ಇಲ್ಲ
ಲಕ್ನೋ
ಜನ
ಜಾಗೃತಿ ಸಭೆಯಲ್ಲಿ ಅಮಿತ್ ಶಾ ಗುಡುಗು
ಲಕ್ನೋ:
ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು
2020 ಜನವರಿ 21ರ ಮಂಗಳವಾರ ಇಲ್ಲಿ ಖಂಡತುಂಡವಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರವ್ಯಾಪಿ
ಪ್ರತಿಭಟನೆಗಳಿಗೆ ಕಾರಣವಾಗಿರುವ ಶಾಸನದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ಉತ್ತರ
ಪ್ರದೇಶದ ಲಕ್ನೋದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪಕ್ಷ ಸಂಘಟಿಸಿದ ಜನ ಜಾಗೃತಿ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ’ಕಾಂಗ್ರೆಸ್ ಪಕ್ಷದ ಕ್ರಮಗಳು ದೇಶವನ್ನು ವಿಭಜಿಸಿವೆ’
ಎಂದು ವಿರೋಧ ಪಕ್ಷದ ಮೇಲೆ ಹರಿಹಾಯ್ದರು.
ಕಾಂಗ್ರೆಸ್
ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಅಮಿತ್ ಶಾ ದಾಳಿಗೆ ಪ್ರಮುಖವಾಗಿ
ಗುರಿಯಾದರು.
‘ದೇಶವನ್ನು
ಒಡೆಯುವವರ ವಿರುದ್ಧ ಹಮ್ಮಿಕೊಳ್ಳಲಾಗಿರುವ ಜನಜಾಗೃತಿ ಅಭಿಯಾನದ ಬಗ್ಗೆ ಸಿಎಎ ವಿರೋಧೀ ಪಕ್ಷಗಳು ಬಿಜೆಪಿಯು ಏಕೆ ಈ ಅಭಿಯಾನವನ್ನು ನಡೆಸುತ್ತಿದೆ
ಎಂಬುದಾಗಿ ಪ್ರಶ್ನಿಸುತ್ತ್ಗಾ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿವೆ’ ಎಂದು
ಬಿಜೆಪಿ ನಾಯಕ ನುಡಿದರು.
‘ಜೋರಾಗಿ
ಮತ್ತು ಸ್ಪಷ್ಟವಾಗಿ ನಮ್ಮ ವಿರೋಧಿಗಳಿಗೆ ಹೇಳುತ್ತೇವೆ- ಎಷ್ಟೇ ಪ್ರತಿಭಟನೆಗಳು ನಡೆದರೂ, ಯಾವುದೇ ಬೆಲೆ ತೆರಬೇಕಾಗಿ ಬಂದರೂ ಸರಿ ಪೌರತ್ವ ಕಾಯ್ದೆಯನ್ನು ವಾಪಸ್ ಪಡೆಯುವುದಿಲ್ಲ’ ಎಂದು
ಶಾ ಗುಡುಗಿದರು.
‘ತಿದ್ದುಪಡಿಗೊಂಡಿರುವ
ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರರಿಗೆ ಪೌರತ್ವ ಒದಗಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ’ ಎಂದು
ನುಡಿದ ಸಚಿವರು ’ಸಿಎಎಯಲ್ಲಿ ಯಾವುದೇ ಸ್ಥಳದ ಯಾವುದೇ ವ್ಯಕ್ತಿಯ ಪೌರತ್ವ ಕಿತ್ತುಕೊಳ್ಳುವ ಯಾವ ವಿಧಿಯೂ ಇಲ್ಲ, ಬದಲಿಗೆ ಅದು ಜನರಿಗೆ ಭಾರತದ ಪೌರತ್ವವನ್ನು ನೀಡುತ್ತದೆ’
ಎಂದು ಪುನರುಚ್ಚರಿಸಿದರು.
‘ನಾನು
ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದೇನೆ. ನೀವು ಈ ಮಸೂದೆ ಬಗ್ಗೆ
ಬಹಿರಂಗವಾಗಿ ಚರ್ಚಿಸಬೇಕು ಎಂದು ನಾನು ವಿರೋಧ ಪಕ್ಷಗಳಿಗೆ ಹೇಳಬಯಸಿದ್ದೇನೆ. ಅದು
ಯಾರಾದರೂ ಒಬ್ಬ ವ್ಯಕ್ತಿಯ ಪೌರತ್ವವನ್ನು ಕಿತ್ತು ಕೊಳ್ಳಬಲ್ಲುದಾದರೆ ಅದನ್ನು ಸಾಬೀತು ಪಡಿಸಿ ಮತ್ತು ತೋರಿಸಿಕೊಡಿ’ ಎಂದು
ಶಾ ಸವಾಲು ಹಾಕಿದರು.
ಮೂರು
ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳಿಂದ ಹಲವಾರು ಅಲ್ಪಸಂಖ್ಯಾತ ಸಮುದಾಯಗಳ ಜನರು ರಾಜಕೀಯವಾಗಿ ನಿರ್ಣಾಯಕವಾಗಿರುವ ರಾಜ್ಯದ ವಿವಿಧ ಕಡೆಗಳಲ್ಲಿ ಆಶ್ರಯ ಪಡೆದಿದ್ದು, ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ
ಎಂದು ನುಡಿದ ಬಿಜೆಪಿ ನಾಯಕ, ವಿರೋಧ ಪಕ್ಷಗಳು ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ನಡೆಸುತ್ತಿವೆ ಎಂದು ಹೇಳಿದರು.
‘ಅಂಧ
ಮತ್ತು ಕಿವುಡ ನಾಯಕರು ಧಾರ್ಮಿಕವಾಗಿ ಕಿರುಕುಳಕ್ಕೆ ತುತ್ತಾಗಿರುವ ಈ ಅಲ್ಪಸಂಖ್ಯಾತರ ಮೇಲಿನ
ಬೆಟ್ಟದಂತಹ ದೌರ್ಜನ್ಯಗಳನ್ನು ನೋಡಲು ಸಾಧ್ಯವಿಲ್ಲ’ ಎಂದು
ಶಾ ನುಡಿದರು.
ಸಮಾಜವಾದಿ
ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಅತ್ಯುಗ್ರವಾಗಿ ತರಾಟೆಗೆ ತೆಗೆದುಕೊಂಡ ಹಿರಿಯ ಸಚಿವ, ಅಖಿಲೇಶ್
ಜಿ ನೀವು ಬರೆದುಕೊಟ್ಟ ಭಾಷಣ ಓದುತ್ತಿದ್ದೀರಿ. ಪೌರತ್ವ ವಿಷಯದ ಬಗ್ಗೆ ಐದು ನಿಮಿಷಗಳ ಕಾಲ ಸ್ವತಂತ್ರವಾಗಿ ಮಾತನಾಡಿ ಎಂದು ನಾವು ನಿಮಗೆ ಸವಾಲು ಹಾಕುತ್ತೇನೆ’ ಎಂದು
ಶಾ ಚುಚ್ಚಿದರು. ಅಖಿಲೇಶ್ ಯಾದವ್ ಅವರ ಪುತ್ರಿ ಇತ್ತೀಚೆಗೆ ಲಕ್ನೋದ ಹಳೆ ನಗರ ಪ್ರದೇಶದ ಗಡಿಯಾರ ಗೋಪುರದ ಬಳಿ ಮುಸ್ಲಿಮ್ ಮಹಿಳೆಯರು ಕಾಯ್ದೆ ವಿರುದ್ಧ ನಡೆಸುತ್ತಿರುವ ಅನಿರ್ದಿಷ್ಟ ಪ್ರತಿಭಟನೆಯಲ್ಲಿ ಕಂಡು ಬಂದದ್ದು ದೊಡ್ಡ ಸುದ್ದಿಯಾಗಿತ್ತು.
ಪೌರತ್ವ
ತಿದ್ದುಪಡಿ ಕಾಯ್ದೆ ವಿರುದ್ಧದ ಮಹಿಳಾ ನೇತೃತ್ವದ ಪ್ರತಿಭಟನೆ ಐದನೇ ದಿನಕ್ಕೆ ಪ್ರವೇಶಿಸಿದ್ದು, ಇದೇ ವೇಳೆಯಲ್ಲಿ ಅಮಿತ್ ಶಾ ಅವರ ಸಭೆ
ನಡೆಯಿತು.
ಉತ್ತರ
ಪ್ರದೇಶದ ರಾಜಧಾನಿಯ ಚೌಕ ಪ್ರದೇಶದ ಗಡಿಯಾರ ಗೋಪುರದ ಬಳಿ ಸಿಎಎ ವಿರೋಧ ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದಕ್ಕೆ ಸಂಬಂಧಿಸಿದಂತೆ ಕವಿ ಮುನಾವ್ವರ್ ರಾಣಾ ಅವರ ಇಬ್ಬರು ಪುತ್ರಿಯರು ಸೇರಿದಂತೆ ೧೬ ಮಂದಿ ಮಹಿಳೆಯರು
ಮತ್ತು ೧೦೦ ಅಪರಿಚಿತ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರ್ಯಾಲಿಗೆ ಮುಂಚಿತವಾಗಿ ಪೊಲೀಸರು ಗಡಿಯಾರ ಗೋಪುರದ ಬಳಿ ಧ್ವಜ ಮೆರವಣಿಗೆ ನಡೆಸಿದರು. ಆದರೆ, ಪ್ರತಿಭಟನಕಾರರನ್ನು ಮನ ಒಲಿಸುವಲ್ಲಿ ಅವರು
ವಿಫಲರಾದರು.
ಪ್ರತಿಭಟನೆಯು
ಗೋಮತಿ ನಗರದ ಉಜಾರಿಯಾಂವ್ ಪ್ರದೇಶಕ್ಕೂ ಹರಡಿದ್ದು, ಇಲ್ಲಿ ೧೫ಕ್ಕೂ ಹೆಚ್ಚು ಮಹಿಳೆಯರು ದರ್ಗಾ ಸಮೀಪ ಸಿಎಎ ವಿರೋಧಿ ಮತ್ತು ರಾಷ್ಟ್ರೀಯ ಪೌರ ನೋಂದಣಿ ವಿರೋಧಿ ಘೋಷಣೆಗಳಿದ್ದ ಭಿತ್ತಿಚಿತ್ರಗಳನ್ನು ಹಿಡಿದುಕೊಂಡು ಧರಣಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ
ಪಾಪಗಳು:
ಕಾಂಗ್ರೆಸ್ ಪಕ್ಷವನ್ನು ಜರೆಯಲು ಅಮಿತ್ ಶಾ ಅವರು ಬಾಂಗ್ಲಾದೇಶ
ಮತ್ತು ಪಾಕಿಸ್ತಾನದಲ್ಲಿ ಗಣನೀಯವಾಗಿ ಕುಗ್ಗುತ್ತಿರುವ ಅಲ್ಪಸಂಖ್ಯಾತ ಜನಸಂಖ್ಯೆಯ ಕುರಿತ ಮಾಹಿತಿಯನ್ನು ಬಳಸಿಕೊಂಡರು.
‘ವಿಭಜನೆಯ
ಕಾಲದಲ್ಲಿ, ಬಾಂಗ್ಲಾದೇಶದ ಜನಸಂಖ್ಯೆಯ ಶೇಕಡಾ ೩೦ರಷ್ಟು ಮಂದಿ ಮತ್ತು ಪಾಕಿಸ್ತಾನದ ಶೇಕಡಾ ೨೩ರಷ್ಟು ಮಂದಿ ಹಿಂದು, ಸಿಖ್ ಮತ್ತು ಜೈನ ಸಮುದಾಯಗಳ ಸದಸ್ಯರಾಗಿದ್ದರು. ಆದರೆ, ಇಂದು ಅವರ ಸಂಖ್ಯೆ ಕ್ರಮವಾಗಿ ಶೇಕಡಾ ೭ ಮತ್ತು ಶೇಕಡಾ
೩ಕ್ಕೆ ಕುಸಿದಿದೆ. ಈ ಜನರೆಲ್ಲ ಎಲ್ಲಿಗೆ
ಹೋದರು? ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ನಾನು ಈ ಪ್ರಶ್ನೆ ಕೇಳಬಯಸುತ್ತೇನೆ’ ಎಂದು
ಅವರು ನುಡಿದರು.
ಕಾಂಗ್ರೆಸ್ಸಿನ
ಪಾಪಕೃತ್ಯಗಳು ಭಾರತವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸಲು ಕಾರಣವಾದವು. ಪಾಕಿಸ್ತಾನ, ಆಫ್ಘಾನಿಸ್ಥಾನದಲ್ಲಿನ ಅಲ್ಪಸಂಖ್ಯಾತರ ಸಂಖ್ಯೆ ಇಳಿಯುತ್ತಲೇ ಇದೆ. ಇವರೆಲ್ಲರು ಎಲ್ಲಿಗೆ ಹೋದರು? ಕೆಲವರು ಕೊಲ್ಲಲ್ಪಟ್ಟರು, ಇತರ ಕೆಲವರು ಬಲವಂತವಾಗಿ ಮತಾಂತರಕ್ಕೆ ಒಳಗಾದರು’ ಎಂದು ಸಚಿವರು ವಿವರಿಸಿದರು.
ಪಾಕಿಸ್ತಾನ,
ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಜನರಿಗೆ ಪೌರತ್ವ ನೀಡುವುದಾಗಿ ರಾಜಸ್ಥಾನದಲ್ಲಿ ನೀಡಿದ್ದ ಪಕ್ಷದ ಭರವಸೆಯನ್ನು ಕೂಡಾ ಅಮಿತ್ ಶಾ ಕಾಂಗ್ರೆಸ್ ಪಕ್ಷಕ್ಕೆ
ನೆನಪಿಸಿದರು.
‘ಇತ್ತೀಚಿನ
ರಾಜಸ್ಥಾನ ವಿಧಾನಸಭಾ ಚುನಾವಣೆ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಾಕಿಸ್ತಾನದ ಹಿಂದುಗಳು ಮತ್ತು ಸಿಕ್ಖರಿಗೆ ಪೌರತ್ವ ನೀಡಲಾಗುವುದು ಎಂದು ತಿಳಿಸಿತ್ತು. ನೀವು ಆಗ ಇದನ್ನು ಮಾಡುವುದು
ಸರಿ ಮತ್ತು ಮೋದಿಜಿ ಅದನ್ನು ಮಾಡಿದಾಗ ನೀವು ಪ್ರತಿಭಟಿಸುತ್ತೀರಿ’ ಎಂದು
ಶಾ ಕುಟುಕಿದರು.
ತಮ್ಮ
ಸರ್ಕಾರವು ರೂಪಿಸಿದ ಶಾಸನದ ಸಮರ್ಥನೆಗಾಗಿ ಮಹಾತ್ಮಾ ಗಾಂಧಿ ಮತ್ತು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮಾತುಗಳನ್ನು ಕೂಡಾ ಶಾ ಉಲ್ಲೇಖಿಸಿದರು.
೧೯೪೭ರಲ್ಲಿ
ಮಹಾತ್ಮ ಗಾಂಧಿಯವರು ಪಾಕಿಸ್ತಾನದಲ್ಲಿ ವಾಸವಾಗಿರುವ ಹಿಂದುಗಳು ಮತ್ತು ಸಿಕ್ಖರು ಭಾರತಕ್ಕೆ ಬರಬಹುದು ಎಂದು ಹೇಳಿದ್ದರು. ಅವರಿಗೆ ಪೌರತ್ವ ನೀಡುವುದು ಮತ್ತು ಭಾರತ ಸರ್ಕಾರದ ಕರ್ತವ್ಯ ಎಂದು ಗಾಂಧೀಜಿ ಹೇಳಿದ್ದರು ಎಂದು ಶಾ ಬೊಟ್ಟು ಮಾಡಿದರು.
‘ನಿರಾಶಿತರಿಗೆ
ಪರಿಹಾರ ಕಲ್ಪಿಸಲು ಕೇಂದ್ರೀಯ ಪರಿಹಾರ ನಿಧಿಯನ್ನು ಬಳಸಬೇಕು ಎಂದು ನೆಹರೂಜಿ ಹೇಳಿದ್ದರು. ಅವರಿಗೆ ಪೌರತ್ವ ನೀಡಲು ಅಗತ್ಯವಾದ ಎನನ್ನಾದರೂ ಮಾಡಬೇಕು ಎಂದು ಅವರು ನುಡಿದಿದ್ದರು, ಆದರೆ ಕಾಂಗ್ರೆಸ್ ಏನೂ ಮಾಡಲಿಲ್ಲ’
ಎಂದು ಬಿಜೆಪಿ ನಾಯಕ ಹೇಳಿದರು.
ಲಕ್ನೋದಲ್ಲಿ
ಮಾಡಿದ ಭಾಷಣವು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಡಿದ ಮಿತ್ ಶಾ ಅವರ ಮೊದಲ
ರಾಜಕೀಯ ರ್ಯಾಲಿಯ ಭಾಷಣವಾಗಿದೆ.
ಪೌರತ್ವ ಕಾಯ್ದೆಯನ್ನು ಸಮರ್ಥಿಸಿ ಉತ್ತರ ಪ್ರದೇಶದಲ್ಲಿ ಉನ್ನತ ಬಿಜೆಪಿ ನಾಯಕರ ೬ ರ್ಯಾಲಿಗಳನ್ನು
ನಡೆಸಲು ಬಿಜೆಪಿ ಉದ್ದೇಶಿಸಿದೆ.
ಪಕ್ಷದ
ನೂತನ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಗುರುವಾರ ಆಗ್ರಾದಲ್ಲಿ ಸಭೆ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ಉತ್ತರ ಪ್ರದೇಶದಲ್ಲಿ ಜನ ಜಾಗೃತಿ ಸಭೆಗಳನ್ನು
ನಡೆಸಲಿದಾರೆ.
No comments:
Post a Comment