ದೆಹಲಿ
ಶಾಂತಿಯುತ ಚುನಾವಣೆ, ಶೇ. 61ರಷ್ಟು ಮತದಾನ, ಶೇ.05 ರಷ್ಟು ಇಳಿಕೆ
ನವದೆಹಲಿ:
ನವದೆಹಲಿಯ ಪ್ರತಿಷ್ಠಿತ ವಿಧಾನಸಭೆಗೆ 2020 ಫೆಬ್ರುವರಿ
08ರ ಶನಿವಾರ ನಡೆದ
ಏಕಹಂತದ ಚುನಾವಣೆಯಲ್ಲಿ ಶೇಕಡಾ ೫೭%
ರಷ್ಟು ಮತದಾನವಾಗಿದ್ದು, ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಆದರೆ ಮತದಾನ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾ
೧೦ರಷ್ಟು ಇಳಿಮುಖವಾಯಿತು.
೨೦೧೫
ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ೬೭ರಷ್ಟು ಮತದಾನವಾಗಿತ್ತು.
ಪೌರತ್ವ
ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಭಟನೆಗಳ ಹಿನ್ನೆಲೆಯಲಿ ಕಾವೇರಿದ್ದ ದೆಹಲಿಯಲ್ಲಿ ಪ್ರಚಾರವು ಕೋಮಬಣ್ಣವನ್ನು ತಳೆದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಅಲಕಾ ಲಾಂಬಾ ಮತ್ತು ಚಾಂದನಿ ಚೌಕದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ಕಾರ್ಯಕರ್ತರು
ಘರ್ಷಣೆಯಲ್ಲಿ ಶಾಮೀಲಾದ ಘಟನೆಯನ್ನು ಹೊರತುಪಡಿಸಿ ಮತದಾನವು ಬಹುತೇಕ
ಶಾಂತಿಯುತವಾಗಿತ್ತು.
ದೆಹಲಿಯಲ್ಲಿ
ಆಮ್ ಆದ್ಮಿ ಪಕ್ಷ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಕ್ತ ಪಡಿಸಿದರು.
ಆಪ್
ಸರ್ಕಾರ ಮಾಡಿದ ಕಾರ್ಯಗಳ ಆಧಾರದ ಮೇಲೆ ದೆಹಲಿಯ ಜನರು ಮತ ಚಲಾಯಿಸಲಿದ್ದಾರೆ ಎಂದು
ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಮತ್ತು ಮಗ ಪುಲ್ಕಿತ್ ಅವರೊಂದಿಗೆ
ಸಿವಿಲ್ ಲೈನ್ಸ್ ಪ್ರದೇಶದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಬಳಿಕ
ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
೮೧,೦೫,೨೩೬ ಪುರುಷ
ಮತದಾರರು, ೬೬,೮೦,೨೭೭
ಮಹಿಳಾ ಮತದಾರರು ಮತ್ತು ೮೬೯ ತೃತೀಯ ಲಿಂಗ ಮತದಾgರು ಇರುವ ರಾಷ್ಟ್ರ
ರಾಜಧಾನಿಯ ೨,೬೮೯ ಪ್ರದೇಶಗಳಲ್ಲಿ
೧೩,೫೭೦ ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಿತು.
ರಾಷ್ಟ್ರಪತಿ
ರಾಮನಾಥ್ ಕೋವಿಂದ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಚಿವರಾದ ರ್ಷ ವರ್ಧನ್ ಮತ್ತು ಎಸ್ ಜೈಶಂಕರ್, ವಿವಾದಾತ್ಮಕ ಬಿಜೆಪಿ ಮುಖಂಡ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಸೇರಿದಂತೆ ವಿವಿಧ ಸಂಸದರು, ತಮ್ಮ ಕುಟುಂಬಗಳೊಂದಿಗೆ ಮುಂಜಾನೆ ಮತ ಚಲಾಯಿಸಿದರು.
ನವದೆಹಲಿ
ಕ್ಷೇತ್ರದಿಂದ ಮತ್ತೊಂದು ಅವಧಿ ಬಯಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ತಂದೆ, ತಾಯಿ ಮತ್ತು ಪತ್ನಿಯೊಂದಿಗೆ ಸಿವಿಲ್ ಲೈನ್ಸ್ ಪ್ರದೇಶದ ರಾಜ್‌ಪುರ ಸಾರಿಗೆ ಪ್ರಾಧಿಕಾರದ ಮತದಾನ ಕೇಂದ್ರದಲ್ಲಿ ಬಿಗಿ ಭದ್ರತೆಯ ಮಧ್ಯೆ ಮತ ಚಲಾಯಿಸಿದರು.
ಕಾಂಗ್ರೆಸ್
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮತದಾನ ಕೇಂದ್ರಗಳಲ್ಲಿ ಮುಂಜಾನೆಯೇ ಹಾಜರಾಗಿದ್ದರು. ಹೊಟ್ಟೆಯ ಸೋಂಕಿನ ನಾಲ್ಕು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ಸೋನಿಯಾ ಗಾಂಧಿ, ಕೇಂದ್ರ ದೆಹಲಿಯ ನಿರ್ಮಾಣ್ ಭವನದ ಮತದಾನ ಕೇಂದ್ರಕ್ಕೆ ಬಂದರು.
ಮಾಜಿ
ಪ್ರಧಾನಿ ಮನಮೋಹನ್ ಸಿಂಗ್ ಸಹ ನಿರ್ಮಾಣ್ ಭವನ್
ಮತದಾನ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.
ಕೇರಳದ
ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಲ್ಲಿನ ಔರಂಗಜೇಬ್ ಲೇನ್‌ನಲ್ಲಿರುವ ಎನ್‌ಪಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವೋಟು ನೀಡಿದರು.
ಪೂರ್ವ
ದೆಹಲಿಯ ಬಾಬರ್ಪುರ್ ಅಸೆಂಬ್ಲಿ ಕ್ಷೇತ್ರದಲ್ಲಿ ನಿಯೋಜಿತರಾಗಿದ್ದ ಚುನಾವಣಾ ಅಧಿಕಾರಿ
ಉಧಮ್ ಸಿಂಗ್ ಹೃದಯಸ್ತಂಭನದಿಂದ ಸಾವನ್ನಪ್ಪಿದರು.
ಏಷ್ಯಾದ
ಅತಿದೊಡ್ಡ ಅನಧಿಕೃತ ವಸಾಹತುಗಳಲ್ಲಿ ಒಂದಾದ ನೆಬ್ ಸರಾಯ್ ಪ್ರದೇಶದ ಮತದಾರರಲ್ಲಿ ಭಾರೀ ಉತ್ಸಾಹ ಕಂಡು ಬಂದಿತು. ಯುವ ಮತದಾರರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರು.
ಸಂಜೆ
೬ ಗಂಟೆಗೆ ಮತದಾನ ಕೊನೆಗೊಂಡಿತು. ಫಲಿತಾಂಶ ಪೆಬ್ರುವರಿ ೧೧ ರಂದು ಪ್ರಕಟವಾಗಲಿದೆ.
ಚುನಾವಣೆಯಲ್ಲಿ,
ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ-ಆಪ್) ಅಧಿಕಾರಕ್ಕೆ ಮರಳಲು ಮತ್ತೊಂದು ಪ್ರಯತ್ನವನ್ನು ಮಾಡುತ್ತಿದ್ದರೆ, ಭಾರತೀಯ ಜನತಾ ಪಕ್ಷವು ೨೦ ವರ್ಷಗಳ ನಂತರ
ಅಧಿಕಾರಕ್ಕೆ ಪುನರಾಗಮನ ಮಾಡಲು ಯತ್ನಿಸಿದೆ. ದೆಹಲಿಯನ್ನು ೧೫ ವರ್ಷಗಳ ಕಾಲ
ಆಳಿದ ಕಾಂಗ್ರೆಸ್ ತನ್ನ ಮತ್ತೆ ಪುನರುತ್ಥಾನ ನಿರೀಕ್ಷಿಸುತ್ತಿದೆ.
ಕಳೆದ
ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ೭೦ ಸ್ಥಾನಗಳಲ್ಲಿ ೬೭
ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿತ್ತು. ಬಿಜೆಪಿಗೆ
ಮೂರು ಸ್ಥಾನಗಳು ದೊರೆತಿದ್ದವು. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.
ಈ
ಬಾರಿ ಎಎಪಿ ಎಲ್ಲಾ ೭೦ ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ,
ಬಿಜೆಪಿ ೬೭ ಸ್ಥಾನಗಳಲ್ಲಿ ತನ್ನ
ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಮತ್ತು ಮೂರು ಸ್ಥಾನಗಳನ್ನು ಮಿತ್ರಪಕ್ಷಗಳಾದ ಜನತಾದಳ (ಸಂಯುಕ್ತ) (೨) ಮತ್ತು ಮತ್ತು
ಒಂದು ಲೋಕ ಜನಶಕ್ತಿ ಪಕ್ಷಕ್ಕೆ (ಎಲ್ಜೆಪಿ) (೧) ಬಿಟ್ಟುಕೊಟ್ಟಿದೆ.
ಮತ್ತೊಂದೆಡೆ,
ಕಾಂಗ್ರೆಸ್ ೬೬ ಸ್ಥಾನಗಳಲ್ಲಿ ಸ್ಪರ್ಧಿಸಿದೆ
ಮತ್ತು ತನ್ನ
ಮಿತ್ರ ಪಕ್ಷವಾದ ಜನತಾದಳಕ್ಕೆ
(ಆರ್‌ಜೆಡಿ) ನಾಲ್ಕು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಸುಗಮ
ಮತದಾನಕ್ಕಾಗಿ ಪೊಲೀಸರು ಸುಮಾರು ೪೦,೦೦೦ ಭದ್ರತಾ
ಸಿಬ್ಬಂದಿ, ೧೯,೦೦೦ ಗೃಹರಕ್ಷಕರು
ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ೧೯೦ ಕಂಪನಿಗಳನ್ನು ನಿಯೋಜಿಸಿದ್ದರು.
No comments:
Post a Comment