Sunday, March 22, 2020

ವಸುಂಧರಾ ರಾಜೆ, ದುಶ್ಯಂತ ಸಿಂಗ್ : ಕೊರೋನಾ ಸೋಂಕಿಲ್ಲ

ವಸುಂಧರಾ ರಾಜೆ, ದುಶ್ಯಂತ ಸಿಂಗ್ : ಕೊರೋನಾ ಸೋಂಕಿಲ್ಲ
ನವದೆಹಲಿ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಅವರ ಪುತ್ರ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಅವರು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರೊಂದಿಗೆ ಸಂಪರ್ಕಕ್ಕೆ ಬಂದದ್ದು ಬೆಳಕಿಗೆ ಬಂದ ನಂತರ ನಡೆಸಿದ ಪರೀಕ್ಷೆಯಲ್ಲಿ ಕೊರೋನಾವೈರಸ್ ಸೋಂಕುನೆಗೆಟಿವ್ಆಗಿರುವುದು ಬೆಳಕಿಗೆ ಬಂದಿದೆ. ಸ್ವತಃ ವಸುಂಧರಾ ರಾಜೆ ಅವರು  2020 ಮಾರ್ಚ್ 21ರ ಶನಿವಾರ ಬಗ್ಗೆ ಟ್ವೀಟ್ ಮಾಡಿದರು.

ಕೋವಿಡ್ ೧೯ ಪರೀಕ್ಷೆಯನ್ನು ನಡೆಸಿದ ನಂತರ, ಫಲಿತಾಂಶಗಳು ನಕಾರಾತ್ಮಕವಾಗಿ ಕಂಡು ಬಂದಿವೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಆದಾಗ್ಯೂ, ಸೋಂಕು ಹರಡದಂತೆ ಮುಂಜಾಗರೂಕತಾ ಕ್ರಮವಾಗಿ, ನನ್ನ ಮಗ ಮತ್ತು ನಾನು ೧೫ ದಿನಗಳ ಕಾಲ ಪ್ರತ್ಯೇಕವಾಸ ಮುಂದುವರಿಯುತ್ತೇವೆಎಂದು ಬಿಜೆಪಿಯ ಹಿರಿಯ ಮುಖಂಡರಾದ ವಸುಂಧರಾ ರಾಜೆ ಟ್ವೀಟಿನಲ್ಲಿ ತಿಳಿಸಿದರು.

ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಅವರಿಗೂ ಕೊರೋನಾವೈರಸ್ ಸೋಂಕು ನೆಗೆಟಿವ್  ಆಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು  ಹೆಸರು ಹೇಳಲು ಇಚ್ಛಿಸದ ಉತ್ತರಪ್ರದೇಶದ ಅಧಿಕಾರಿಯೊಬ್ಬರು ಹೇಳಿದರು.

ಬಾಲಿವುಡ್ ನಟಿ ಕನಿಕಾಕಪೂರ್ ಅವರು ಮಾರ್ಚ್ ೧೧ ರಂದು ಲಂಡನ್ನಿಂದ ಆಗಮಿಸಿದ ನಂತರ ಪಾಲ್ಗೊಂಡಿದ್ದ ಮೂರು ಸಮಾರಂಭಗಳ ಪೈಕಿ ಒಂದರಲ್ಲಿ ವಸುಂಧರಾ ರಾಜೆ ಮತ್ತು ದುಶ್ಯಂತ್ ಸಿಂಗ್ ಇತರ ಹಲವರ ಜೊತೆಗೆ ಪಾಲ್ಗೊಂಡಿದ್ದರು. ಬಳಿಕ ಕನಿಕಾ ಕಪೂರ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು.

ಲಖನೌದಲ್ಲಿ ಕನಿಕಾ ಹಾಜರಿದ್ದ ಸಮಾರಂಭದಲ್ಲಿ ಹಾಜರಿದ್ದ ಮತ್ತೊಬ್ಬ ರಾಜಕಾರಣಿ ಮತ್ತು ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರಿಗೆ ಕೂಡಾ ಕೊರೋನಾವೈರಸ್ ಸೋಂಕು ದೃಢಪಟ್ಟಿಲ್ಲ.

ವಸುಂಧರಾ ರಾಜೆ ಅವರು ತಾವು ಮತ್ತು ಪುತ್ರ ಸ್ವಯಂ ಪ್ರತ್ಯೇಕವಾಸದ ನಿರ್ಬಂಧ ವಿಧಿಸಿಕೊಂಡಿರುವುದಾಗಿ ಟೀಟ್ ಮಾಡಿದ ಬಳಿಕ ತಮ್ಮ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದ ಎಲ್ಲ ಹಿತೈಷಿಗಳಿಗೂ ಧನ್ಯವಾದ ಅರ್ಪಿಸಿದರು.

ತಾಯಿ-ಮಗ ಜೋಡಿ ಶುಕ್ರವಾರ ತಮ್ಮನ್ನು ತಾವು ಸ್ವಯಂ-ನಿರ್ಬಂಧಿಸಿಕೊಳ್ಳುವುದಾಗಿ ಘೋಷಿಸಿದ ನಂತರ ಕಾಳಜಿ ವ್ಯಕ್ತ ಪಡಿಸಿದ ಎಲ್ಲ ಹಿತೈಷಿಗಳಿಗೆ ವಸುಂಧರಾ ರಾಜೆ ಧನ್ಯವಾದಗಳನ್ನು ಅರ್ಪಿಸಿದರು.

ಕನಿಕಾ ಕಪೂರ್ ತಮಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಪ್ರಕಟಿಸಿದ ಬಳಿಕ, ಅವರ ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿದ್ದ ಹಲವಾರು ಗಣ್ಯರು ಸ್ವಯಂ ಪ್ರತ್ಯೇಕವಾಸ ಮಾಡುತ್ತಿದ್ದಾರೆ. ಅವರಲ್ಲಿ ಸಂಸತ್ ಸದಸ್ಯ ಬ್ರಿಯೆನ್ ಮತ್ತು ಅಪ್ನಾದಳದ ಸಂಸದರಾದ ಅನುಪ್ರಿಯಾ ಪಟೇಲ್ ಕೂಡಾ ಇದ್ದಾರೆ.

ಮಾಜಿ ಬಿಎಸ್ಪಿ ಸಂಸದ ಅಕ್ಬರ್ ಅಹ್ಮದ್ ಡಂಪಿ ಅವರು ಕಪೂರ್ ಹಾಜರಿದ್ದ ಸಮಾರಂಭದಲ್ಲಿ ಇದ್ದ ಇನ್ನೊಬ್ಬ ಗಣ್ಯ ವ್ಯಕ್ತಿಯಾಗಿದ್ದು ಅವರ ಕೂಡಾ ಏಕಾಂಗಿವಾಸದ ಆಯ್ಕೆ ಮಾಡಿಕೊಂಡಿದ್ದಾರೆ.

No comments:

Advertisement