Saturday, March 14, 2020

ತಮಾಷೆ ಮಾಡಿದ್ದ ಬಾಸ್ಕೆಟ್ ಬಾಲ್ ತಾರೆಗೆ ಕೊರೊನಾ

ತಮಾಷೆ ಮಾಡಿದ್ದ ಬಾಸ್ಕೆಟ್ ಬಾಲ್ ತಾರೆಗೆ ಕೊರೊನಾ
ಆಟೋಗ್ರಾಫ್ ಪಡೆದ ಬಾಲಕಿ, ನವಜಾತ ಶಿಶುವಿಗೂ ಸೋಂಕು
ಪ್ಯಾರಿಸ್/ ಲಂಡನ್: ಕೊರೊನಾ ವೈರ್ಸಸನ್ನು ತಮಾಷೆ ಮಾಡಿದ್ದ ಫ್ರಾನ್ಸಿನ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ರೂಡಿ ಗಾಬರ್ಟ್ ಸ್ವತಃ, ಸೋಂಕಿಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲಂಡನ್ನಿನಲ್ಲಿ
ನವಜಾತ ಶಿಶುವಿಗೂ ಕೊರೋನಾವೈರಸ್ ಸೋಂಕು ತಗುಲಿರುವುದು 2020 ಮಾರ್ಚ್  14ರ ಶನಿವಾರ ಪತ್ತೆಯಾಯಿತು.
ಅಮೆರಿಕದ ಎನ್ ಬಿಎನಲ್ಲಿ ಉಟಾಹ್ಜಾಜ್ ತಂಡದ ಪರ ಆಡುತ್ತಿರುವ ರೂಡಿ ಗಾರ್ಬರ್ಟ್ ಅವರು ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಮೈಕ್, ಧ್ವನಿಮುದ್ರಣ ಉಪಕರಣಗಳನ್ನೆಲ್ಲ ಒಂದೊಂದಾಗಿ ಮುಟ್ಟಿ ನಂಗೇನು ಆಗಲ್ಲ ಎಂದು ಹೇಳಿದ್ದರು.

ಆದರೆ, ಬುಧವಾರ ರಾತ್ರಿಯ ವೇಳೆಗೆ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತವಾಯಿತು! ಪರಿಣಾಮವಾಗಿ ಉಟಾಹ್ ಮತ್ತು ಒಕ್ಲಹಾಮ ಸಿಟಿ ನಡುವಿನ ಬಾಸ್ಕೆಟ್ ಬಾಲ್ ಪಂದ್ಯ ರದ್ದಾಯಿತು.
ಇಷ್ಟೇ ಅಲ್ಲದೆ ಕಳೆದ ವಾರ ರೂಡಿ ಗೋಬರ್ಟ್ ಬಳಿಯಲ್ಲಿ ಆಟೋಗ್ರಾಫ್ ಪಡೆದಿದ್ದ ಮಗು ಒಂದಕ್ಕೆ ಕೂಡಾ ಕೊರೊನಾ ಸೋಂಕು ಇರುವುದು ಪತ್ತೆಯಾಯಿತು.
ಅಮೆರಿಕದ ಅತಿ ಪ್ರಸಿದ್ಧ ಕೂಟ ಎನ್ಬಿಎ ತಾತ್ಕಾಲಿಕವಾಗಿ ರದ್ದಾಗಿದೆ. ಸದ್ಯ ಗಾಬರ್ಟ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಡೊನೊವಾನ್ ಮಿಚೆಲ್ ಎಂಬ ಇನ್ನೊಬ್ಬ ಆಟಗಾರನಿಗೆ ಸೋಂಕು ತಗುಲಿದೆ ಎಂದು ವರದಿ ತಿಳಿಸಿತು.
ನವಜಾತ ಶಿಶುವಿಗೂ ಸೋಂಕು: ಲಂಡನ್ನಿನಿಂದ  ಬಂದಿರುವ ವರದಿಯ ಪ್ರಕಾರ, ಲಂಡನ್ನಿನಲ್ಲಿ ಅದೇತಾನೇ ಜನಿಸಿದ ನವಜಾತ ಶಿಶುವಿಗೂ ಕೊರೋನಾಸೋಂಕು ಇರುವುದು ದೃಢ ಪಟ್ಟಿದ್ದು, ಇದು ಇದು ವಿಶ್ವದಲ್ಲೇ ಅತ್ಯಂತ ಕಿರಿಯ ವ್ಯಕ್ತಿಗೆ ಕೋವಿಡ್-೧೯ ಬಾಧಿಸಿರುವ ಪ್ರಕರಣ ಎನಿಸಿದೆ.

ನಾರ್ಥ್ ಮಿಡ್ಲ್ಸೆಕ್ಸ್ನ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಹುಟ್ಟಿದ ಕೂಡಲೇ ನಡೆಸಿದ ರಕ್ತ ಮಾದರಿ ಪರೀಕ್ಷೆ, ಮೂತ್ರ ಪರೀಕ್ಷೆ, ಮಲ ಪರೀಕ್ಷೆ ಹಾಗೂ ಗಂಟಲಿನ ಸ್ರಾವದ ಪರೀಕ್ಷೆಯಲ್ಲಿ ಶಿಶುವಿಗೆ ಕೊರೊನಾ ಸೋಂಕು ಇರುವುದು ಖಚಿತಪಟ್ಟಿದೆ.

ಕೆಲವು ದಿನಗಳ ಹಿಂದೆ ಗರ್ಭಿಣಿ ಮಹಿಳೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹೆರಿಗೆಯಾಗುವ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಈಗ ಸೋಂಕು ತಗುಲಿದೆ. ಇದರಿಂದಾಗಿ ಮಗುವಿಗೂ ಸೋಂಕು ತಗುಲಿದೆ ಎಂದು ವೈದ್ಯರು ತಿಳಿಸಿದರು.

No comments:

Advertisement