Friday, March 6, 2020

ನಿರ್ಭಯಾ ಪ್ರಕರಣ: ಮತ್ತೆ ಸುಪ್ರೀಂಗೆ ಮುಕೇಶ್ ಸಿಂಗ್

ನಿರ್ಭಯಾ ಪ್ರಕರಣ: ಮತ್ತೆ ಸುಪ್ರೀಂಗೆ ಮುಕೇಶ್ ಸಿಂಗ್
ತನ್ನ ವಿರುದ್ಧ ಸಂಚು ಆರೋಪ,  ಸಿಬಿಐ ತನಿಖೆಗೆ ಮನವಿ
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನಾದ ಮುಕೇಶ್ ಸಿಂಗ್ 2020 ಮಾರ್ಚ್  06ರ ಶುಕ್ರವಾರ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ತನ್ನ ಎಲ್ಲ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಪುನಸ್ಥಾಪಿಸಬೇಕು ಎಂದು ಕೋರಿದ. ತನ್ನ ವಕೀಲರು ತನ್ನನ್ನು ದಾರಿ ತಪ್ಪಿಸಿದರು ಎಂದೂ ಆತ ಆಪಾದಿಸಿದ.

ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಪ್ರಕರಣದಲ್ಲಿ ಕೋರ್ಟ್ ಸಹಾಯಕರಾಗಿದ್ದ (ಅಮಿಕಸ್ ಕ್ಯೂರಿ) ವಕೀಲೆ ವೃಂದಾ  ಗ್ರೋವರ್ ಅವರು ಹೂಡಿದ ಕ್ರಿಮಿನಲ್ ಸಂಚಿನ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂದು ವಕೀಲ ಎಂ.ಎಲ್. ಶರ್ಮ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಮುಕೇಶ್ ಸಿಂಗ್ ಕೋರಿದ.

ದೆಹಲಿಯ ವಿಚಾರಣಾ ನ್ಯಾಯಾಲಯವು ಗುರುವಾರ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಅವರನ್ನು ಮಾರ್ಚ್ ೨೦ರ ಬೆಳಗ್ಗೆ .೩೦ಕ್ಕೆ ಗಲ್ಲಿಗೇರಿಸಲು ದಿನಾಂಕ ನಿಗದಿ ಪಡಿಸಿತ್ತು.

ಅರ್ಜಿದಾರನು (ಮುಕೇಶ್) ಪ್ರತಿವಾದಿ - (ಗೃಹ ವ್ಯವಹಾರಗಳ ಸಚಿವಾಲಯ), ಪ್ರತಿವಾದಿ - (ದೆಹಲಿ ಸರ್ಕಾರ)  ಮತ್ತು ಪ್ರತಿವಾದಿ - (ವೃಂದಾ ಗ್ರೋವರ್) ಮತ್ತು ಸೆಷನ್ಸ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನಲ್ಲಿ ಅರ್ಜಿದಾರನ ಡೆತ್ ವಾರಂಟ್ ಪ್ರಕರಣದಲ್ಲಿ ಹಾಜರಾಗಿದ್ದ ಇನ್ನೊಬ್ಬ ವಕೀಲ- ಇವರು ಹೂಡಿದ ಕ್ರಿಮಿನಲ್ ಸಂಚು ಮತ್ತು ವಂಚನೆಯ ಬಲಿಪಶುಎಂಬುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರತಿವಾದಿಗಳು ಸೆಷನ್ ಕೋರ್ಟ್ ಆದೇಶದ ಬೆದರಿಕೆ ಒಡ್ಡಿ ವಿವಿಧ ಪತ್ರಗಳಿಗೆ ಸಹಿ ಹಾಕುವಂತೆ ಅರ್ಜಿದಾರನ ಮೇಲೆ ಒತ್ತಡ ಹಾಕಿದ್ದಾರೆ. (ಇದನ್ನು ಸೆಷನ್ ನ್ಯಾಯಾಲಯ ಜಾರಿ ಮಾಡಿರಲೇ ಇಲ್ಲ). ತನ್ನ ಪರವಾಗಿ ಕ್ಯುರೇಟಿವ್ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನಲ್ಲಿ ಡೆತ್ ವಾರಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಸಲುವಾಗಿ ವಿವಿಧ ದಾಖಲೆಗಳಿಗೆ ಸಹಿಗಳನ್ನು ಪಡೆಯುವಂತೆ ಕೋರ್ಟ್ ನಿರ್ದೇಶಿಸಿದೆ ಎಂದು ಹೇಳಿ ಸಹಿಗಳನ್ನು ಪಡೆಯಲಾಗಿತ್ತುಎಂದು ಅರ್ಜಿ ತಿಳಿಸಿದೆ.

ಪ್ರತಿವಾದಿಗಳು ಗೊತ್ತಿದ್ದೂ, ಉದ್ದೇಶಪೂರ್ವಕವಾಗಿ, ಸ್ಥಾಪಿತ ಹಿತಾಸಕ್ತಿ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಮುಕೇಶ್ ಸಿಂಗ್ ವಿರುದ್ಧ ಜಂಟಿ ಕ್ರಿಮಿನಲ್ ಸಂಚು ಹೆಣೆದಿದ್ದರು ಮತ್ತು ತಿಹಾರ್ ಸೆರೆಮನೆಗೆ ಭೇಟಿ ನೀಡಿ ಅರ್ಜಿದಾರನನ್ನು ಭೇಟಿ ಮಾಡಿ ವಿವಿಧ ದಾಖಲೆಗಳಿಗೆ ಸಹಿ ಮಾಡುವಂತೆ ಆತನಿಗೆ ಸೂಚಿಸಿದ್ದರು ಎಂದು ಸುಪ್ರೀಕೋರ್ಟಿಗೆ ಸಲ್ಲಿಸಲಾದ ಅರ್ಜಿ ತಿಳಿಸಿದೆ.

ಎಲ್ಲ ನ್ಯಾಯಾಲಯಗಳಲ್ಲಿ ಆತನ ಪರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ಸಲುವಾಗಿ ವಿವಿಧ ದಾಖಲೆಗಳಿಗೆ ಸಹಿ ಪಡೆಯುವಂತೆ ಸೆಷನ್ ಕೋರ್ಟ್ ಆದೇಶ ನೀಡಿದೆ ಎಂದು ಹೇಳಿ ವಕಾಲತ್ನಾಮಾಕ್ಕೆ ಸಹಿ ಹಾಕುವಂತೆ ಅವರು ಆತನಿಗೆ ಸೂಚಿಸಿದ್ದರು ಎಂದು ಅರ್ಜಿ ಹೇಳಿದೆ.

ತಥಾಕಥಿತ ಸೆಷನ್ ಕೋರ್ಟ್ ಆದೇಶದ ಪರಿಣಾಮವಾಗಿ ಒತ್ತಡ/ ಭೀತಿಗೆ ಒಳಗಾಗಿ ಅರ್ಜಿದಾರರು ವಿವಿಧ ವಕಾಲತ್ನಾಮಾ ಸೆಟ್ಗಳಿಗೆ ಮತ್ತು ಇತರ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಆದರೆ, ಇತ್ತೀಚೆಗೆ ಅರ್ಜಿದಾರರಿಗೆ ಅಂತಹ ಯಾವುದೇ ಆದೇಶವನ್ನು ಸೆಷನ್ ಕೋರ್ಟ್ ನೀಡಿರಲಿಲ್ಲ ಎಂಬುದು ಗೊತ್ತಾಯಿತು ಎಂದು ಅರ್ಜಿ ತಿಳಿಸಿದೆ.

ಕ್ಯುರೇಟಿವ್ ಅರ್ಜಿ ಸಲ್ಲಿಸಲು ಇರುವ ವಾಯಿದೆ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ದಿನಾಂಕದಿಂದ ಮೂರು ವರ್ಷಗಳಾಗಿವೆ ಎಂದು ಪ್ರತಿಪಾದಿಸಿದ ಅರ್ಜಿ, ತನಗೆ ಲಭ್ಯವಿರುವ ಕಾನೂನುಬದ್ಧ ಪರಿಹಾರಗಳ ಹಕ್ಕುಗಳನ್ನು ಪುನಃಸ್ಥಾಪಿಸಬೇಕು ಮತ್ತು  ಕ್ಯುರೇಟಿವ್ ಅರ್ಜಿ ಸಲ್ಲಿಸಲು  ೨೦೨೧ರ ಜುಲೈವರೆಗೆ ಕಾಲಾವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿ ಹೇಳಿದೆ.

ನಿರ್ಭಯಾಎಂಬುದಾಗಿ ಮಾಧ್ಯಮಗಳು ಹೆಸರಿಸಿದ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬ರಂದು ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ಮಂದಿಯಿಂದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹಿಂಸೆ ನಡೆದಿತ್ತು. ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದ ಆಕೆ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬ ವ್ಯಕ್ತಿ ವಿಚಾರಣೆ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡರೆ, ಬಾಲಾಪರಾಧಿಯನ್ನು ಸುಧಾರಣಾವಾಸಕ್ಕೆ ಒಳಪಡಿಸಿ ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ವರನ್ನು ತಪ್ಪಿತಸ್ಥರು ಎಂದು ಘೋಷಿಸಿ ಮರಣದಂಡನೆ ವಿಧಿಸಲಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು.

No comments:

Advertisement