ಬೆಂಗಳೂರಿನ ಕೊರೋನಾ ರಾತ್ರಿ..!
(ಇದು ಸುವರ್ಣ ನೋಟ)
ರಾತ್ರಿಯ ಝಗಮಗಿಸುವ ಬೆಳಕಿನಲ್ಲಿ ಕಣ್ಣು ಕೋರೈಸುವ ಲೈಟು, ಕಿವಿಗಡಚಿಕ್ಕುವ ಹಾರ್ನ್ ಸದ್ದಿನೊಂದಿಗೆ ಪೈಪೋಟಿಯಲ್ಲಿ ಸಂಚರಿಸುವ ವಾಹನಗಳ ಭರಾಟೆ ನಿಂತೇ ಹೋಗಿದೆ.
ಜನಸಂದಣಿಯಿಂದ ಕಿಕ್ಕಿರಿಯುತ್ತಿದ್ದ ಬೆಂಗಳೂರಿನ ಕೇಂದ್ರೀಯ ಬಸ್ಸು ನಿಲ್ದಾಣ, ನಗರ ಬಸ್ಸು ನಿಲ್ದಾಣಗಳು ಈಗ ‘ಹಾಳು ಹಂಪಿ’ಯನ್ನು ನೆನಪು ಮಾಡುತ್ತವೆ.
ವಿದ್ಯುದ್ದೀಪಗಳ ಬೆಳಕು ಎಂದಿನಂತಿದ್ದರೂ ಸದ್ದುಗದ್ದಲವನ್ನು ಮೂಲೆಗುಂಪು ಮಾಡಿದ ಕೊರೋನಾವೈರಸ್ ಅಬ್ಬರಕ್ಕೆ ದಿಕ್ಕೆಟ್ಟ ‘ಬೆಂಗಳೂರಿನ ಕೊರೋನಾರಾತ್ರಿ’
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಸಲ್ಪಟ್ಟು ಹೀಗೆ.
No comments:
Post a Comment