ಭಾರತ: ೮೨೬ ಮಂದಿ ಸಾವು, ೨೭ ಸಾವಿರ ಸೋಂಕು
ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ ೨೪ ಗಂಟೆ ಅವಧಿಯಲ್ಲಿ ೪೭ ಮಂದಿ ಅಸುನೀಗಿದರು. ೧,೯೭೫ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ 2020 ಏಪ್ರಿಲ್ 26ರ ಭಾನುವಾರದವರೆಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೮೨೬ಕ್ಕೆ ಏರಿದೆ. ಸೋಂಕಿತರ ಸಂಖ್ಯೆ ೨೬,೯೧೭ ತಲುಪಿದೆ. ೫,೮೦೩ ಮಂದಿ ಗುಣಮುಖರಾಗಿರುವ ಕಾರಣ ಕೊರೊನಾ ಸಕ್ರಿಯ ಪ್ರಕರಣಗಳು ಸಂಖ್ಯೆ ೧೯,೮೬೮ ಆಗಿದೆ.
ಮಾರಕ ವೈರಾಣುವಿನಿಂದ ಬಳಲುತ್ತಿರುವ ದೇಶದ ಜನರ ಪ್ರಾಣ ಉಳಿಸಲು ಹಗಲು-ರಾತ್ರಿಯೆನ್ನದೇ ವೈದ್ಯರು ಶ್ರಮಿಸುತ್ತಿದ್ದಾರೆ. ಹೀಗೆಯೇ ಕೋವಿಡ್-೧೯ ಪೀಡಿತರಿಗೆ ದೆಹಲಿಯ ಜಹಾಂಗೀರ ಪುರ ಪ್ರದೇಶದಲ್ಲಿರುವ ಬಾಬು ಜಗಜೀವನ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ೪೦ ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-೧೯ ಸೋಂಕು ತಗಲಿರುವುದು ಧೃಡಪಟ್ಟಿತು. ಇದು ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯರು ಆತಂಕಕ್ಕೀಡಾದರು.
ಕರ್ನಾಟಕದಲ್ಲಿಯೂ ಕೊರೋನಾ ಹಾವಳಿ ಹೆಚ್ಚಾಗಿದೆ. ಇದುವರೆಗೂ ರಾಜ್ಯದಲ್ಲಿ ೫೦೩ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ ಕೇವಲ ಬೆಂಗಳೂರಿನಲ್ಲೇ ೧೪ ಮಂದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ೭ ಮಂದಿಯಲ್ಲಿ ಸೋಂಕು ಪತ್ತೆಯಾಯಿತು..
ಈದಿನ ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದು ಇದುವರೆಗೂ ೧೯ ಮಂದಿ ಮೃತರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿತು.
ಒಂದು ತಿಂಗಳ ಕಾಲ ದೇಶವ್ಯಾಪಿ ದಿಗ್ಬಂಧನ (ಲಾಕ್
ಡೌನ್) ಮಾಡಿದ್ದರ ಹೊರತಾಗಿಯೂ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ.
ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು 29,66,488, ಸಾವು 2,05,686
ಚೇತರಿಸಿಕೊಂಡವರು- 8,73,525
ಅಮೆರಿಕ ಸೋಂಕಿತರು 9,70,757, ಸಾವು 54,941
ಸ್ಪೇನ್ ಸೋಂಕಿತರು 2,26,629, ಸಾವು 23,190
ಇಟಲಿ ಸೋಂಕಿತರು 1,97,675, ಸಾವು 26,644
ಜರ್ಮನಿ ಸೋಂಕಿತರು 1,57,114, ಸಾವು 5,884
ಚೀನಾ ಸೋಂಕಿತರು 82,827, ಸಾವು 4,632
ಇಂಗ್ಲೆಂಡ್ ಸೋಂಕಿತರು 1,52,840, ಸಾವು 20,732
ಇಂಗ್ಲೆಂಡಿನಲ್ಲಿ 413, ಬೆಲ್ಜಿಯಂನಲ್ಲಿ 177, ಸ್ಪೇನಿನಲ್ಲಿ 288, ಅಮೆರಿಕದಲ್ಲಿ 685, ಇಟಲಿಯಲ್ಲಿ 260,
ಟರ್ಕಿಯಲ್ಲಿ 99, ಒಟ್ಟಾರೆ ವಿಶ್ವಾದ್ಯಂತ 2,522 ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment