ಕರ್ನಾಟಕ: ಮನೆ ಮನೆಗೆ ದಿನಸಿ ಸರಬರಾಜು; ವಾಟ್ಸಪ್ ಸಹಾಯವಾಣಿ
ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ ಜನರು ಮನೆಗಳ ಒಳಗೇ ಉಳಿಯುವಂತೆ ನೆರವಾಗಲು ಅವರ ಅಗತ್ಯ ವಸ್ತುಗಳು ಮತ್ತು ದಿನಸಿಯನ್ನು ಮನೆ ಮನೆಗೇ ಸರಬರಾಜು ಮಾಡುವ ಸಲುವಾಗಿ ಅಧಿಕೃತ ಸಹಾಯವಾಣಿ ಸೇವೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020 ಏಪ್ರಿಲ್ 21ರ ಮಂಗಳವಾರ ಚಾಲನೆ ನೀಡಿದರು.
ವಾಟ್ಸಪ್ ಮತ್ತು ಕರೆ ನೀಡುವ ಮೂಲಕ ಈ ಸಹಾಯವಾಣಿಯನ್ಜು ಬಳಸಿಕೊಳ್ಳಬಹುದು. ಗ್ರಾಹಕರು ತಮ್ಮ ದಿನಸಿ ಪಟ್ಟಿಯನ್ನು ೦೮೦೬೧೯೧೪೯೬೦ ಈ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು.
ಸುಮಾರು ೫೦೦೦ ಮಂದಿ ವಿತರಣಾ ಏಜೆಂಟರನ್ನು ವಿವಿಧ ಸಂಸ್ಥೆಗಳಿಂದ ಈ ಸೇವೆಗಾಗಿ ಬಳಸಿಕೊಳ್ಳಲಾಗಿದೆ. ಇವರು ಮನೆ ಮನೆಗೆ ದಿನಸಿ ಮತ್ತು ಅಗತ್ಯವಸ್ತು ವಿತರಣೆಗೆ ನೆರವಾಗುವರು ಎಂದು ಮುಖ್ಯಮಂತ್ರಿ ನುಡಿದರು.
ಈ ಉಪಕ್ರಮದಿಂದಾಗಿ ಕಡಿಮೆ ಜನರು ಮನೆಯಿಂದ ಹೊರಬರುವಂತಾಗುತ್ತದೆ ಎಂದು ನಾವು ಹಾರೈಸುತ್ತೇವೆ. ಜನರಿಗೆ ಮನೆಯಲ್ಲೇ ಉಳಿಯುವಂತೆ ಮತ್ತು ರಸ್ತೆಗಳಿಗೆ ಇಳಿಯುವುದನ್ನು ನಿವಾರಿಸುವಂತೆ ನಾವು ಆಗ್ರಹಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಈ ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರೂಪಿಸಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು ತಮ್ಮ ಕ್ಷೇತ್ರದಲ್ಲಿ ಈ ಸೇವೆಯು ಹೇಗೆ ಜನರಿಗೆ ನೆರವಾಗಿದೆ ಎಂದು ವಿವರಿಸಿದರು.
ಈ ಸಹಾಯವಾಣಿ ಬಳಸಿಕೊಂಡು ಅಗತ್ಯವಸ್ತು/ ದಿನಸಿಗಳಿಗೆ ಆದೇಶ ನೀಡುವ ಬಗೆ ಹೇಗೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.
ವಾಟ್ಸಪ್ ಮೂಲಕ ಆದೇಶ ನೀಡಲು ೯ ಹೆಜ್ಜೆಗಳು:
·
ನಿಮ್ಮ ಮೊಬೈಲಿನಲ್ಲಿ ೦೮೦೬೧೯೧೪೯೬೦ ಸಂಖ್ಯೆಯನ್ನು ದಾಖಲಿಸಿಕೊಳ್ಳಿ.
·
ಹಿ (ಎಚ್ಐ) ಸಂದೇಶವನ್ನು ಈ ಸಂಖ್ಯೆಗೆ ಕಳುಹಿಸಿ.
·
ನಿಮ್ಮ ಲೊಕೇಷನ್/ ವಿಳಾಸವನ್ನು ಹಂಚಿಕೊಳ್ಳಿ.
·
ನಿಮಗೆ ಸೂಚನೆಗಳನ್ನು ಅನುಸರಿಸಲು ಹೇಳಲಾಗುತ್ತದೆ- ದಿನಸಿ ಮತ್ತು ತರಕಾರಿ ಬೇಕಿದ್ದರೆ ’ಎ’ ಯನ್ನು ಅಥವಾ ಔಷಧ ಬೇಕಿದ್ದರೆ ’ಬಿ’ಯನ್ನು ಟೈಪ್ ಮಾಡಿ.
·
ನಿಮಗೆ ಬೇಕಾದ ವಸ್ತುಗಳನ್ನು ಟೈಪ್ ಮಾಡಿ ಅಥವಾ ನಿಮ್ಮ ದಿನಸಿ ಪಟ್ಟಿಯ ಚಿತ್ರವನ್ನು ಕಳುಹಿಸಿ.
·
ಪಟ್ಟಿ ಕಳುಹಿಸಿದ ಬಳಿಕ ನಿಮ್ಮ ಆರ್ಡರ್ ದಾಖಲಾಗುತ್ತದೆ.
·
ನಿಮ್ಮ ಆರ್ಡರ್ ತಲುಪಿದ್ದಕ್ಕೆ ಉತ್ತರವಾಗಿ ನಿಮಗೆ ಒಂದು ಎಸ್ ಎಂಎಸ್ ಬರುತ್ತದೆ ಅದರ ಜೊತೆಗೆ ನಿಮಗೆ ಟ್ರಾನ್ಸಾಕ್ಷನ್ ಐಡಿಯೂ ಬರುತ್ತದೆ.
·
ಸೂಚಿತ ಸಮಯದಲ್ಲಿ ಡೆಲಿವರಿ ಪಾರ್ಟ್ನರ್ ನಿಮ್ಮ ಮನೆಗೆ ನಿಮ್ಮ ಆದೇಶ ಪ್ರಕಾರ ವಸ್ತುಗಳನ್ನು ತಲುಪಿಸುತ್ತಾರೆ.
·
ಆರ್ಡರ್ ಮಾಡಿದ ವಸ್ತುಗಳಿಗೆ ಹಣವನ್ನು ಪಾವತಿ ಮಾಡಿ ಜೊತೆಗೆ ೧೦ ರೂಪಾಯಿಗಳ ಹೆಚ್ಚುವರಿ ಡೆಲಿವರಿ ಶುಲ್ಕವನ್ನೂ ಪಾವತಿ ಮಾಡಿ.
ಆಂಧ್ರಪ್ರದೇಶದಲ್ಲಿ
ಈ ಮಧ್ಯೆ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರವು ದಿಗ್ಬಂಧನ ಅವಧಿಯಲ್ಲಿ ಮನೆ ಮನೆಗೆ ದಿನಸಿ, ತಾಜಾ ಹಣ್ಣು, ತರಕಾರಿ ತಲುಪಿಲು ಆಹಾರ ವಿತರಣಾ ಕಂಪೆನಿ ಸ್ವಿಗ್ಗಿ ಜೊತೆಗೆ ಸಹಯೋಗ ಒಪ್ಪಂದ ಮಾಡಿಕೊಂಡಿದೆ.
No comments:
Post a Comment