Friday, May 29, 2020

ಜೂನ್ 2ನೇ ವಾರದ ವೇಳೆಗೆ ಇನ್ನೂ ಒಂದು ಲಕ್ಷ ಭಾರತೀಯರು ಸ್ವದೇಶಕ್ಕೆ

ಜೂನ್ 2ನೇ ವಾರದ ವೇಳೆಗೆ ಇನ್ನೂ ಒಂದು ಲಕ್ಷ ಭಾರತೀಯರು ಸ್ವದೇಶಕ್ಕೆ

ನವದೆಹಲಿ: ಕೋವಿಡ್ -೧೯ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಒಂದು ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್‌ನ ಎರಡನೇ ಹಂತ ಮುಕ್ತಾಯದ ವೇಳೆಗೆ ಮರಳಿ ಭಾರತಕ್ಕೆ ಕರೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು  2020 ಮೇ 28ರ ಗುರುವಾರ ತಿಳಿಸಿದವು.

ವಂದೇ ಭಾರತ ಮಿಷನ್ ಹಂತ ಜೂನ್ ೧೩ ರಂದು ಕೊನೆಗೊಳ್ಳಲಿದೆ.

ಕೋವಿಡ್ -೧೯ ಸಾಂಕ್ರಾಮಿP ಹಿನ್ನೆಲೆಯಲ್ಲಿ ಮನೆಗೆ ಮರಳಲು ಸುಮಾರು ,೦೮,೨೦೦ ಭಾರತೀಯರು ವಿದೇಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ನೌಕಾಪಡೆಯು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇರಾನ್‌ಗೆ ನಾಲ್ಕು ವಿಮಾನಗಳನ್ನು ಕಳುಹಿಸಲಿದೆ.

ಕನಿಷ್ಠ ೫೦೦೦ ಭಾರತೀಯರು ಇತ್ತೀಚೆಗೆ ನೆರೆಯ ನೇಪಾಳ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಹಿಂತಿರುಗಿದ್ದಾರೆ.

ಕಳೆದ ವಾರ, ಕೋವಿಡ್ -೧೯ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ವಿದೇಶದಲ್ಲಿ ಸಿಲುಕಿರುವ ನಾಗರಿಕರಿಗಾಗಿ ಅದರ ಬೃಹತ್ ವಾಪಸಾತಿ ಕಾರ್ಯಕ್ರಮವಾಗಿರುವ ವಂದೇ ಭಾರತ್ ಮಿಷನ್‌ನ ಎರಡನೇ ಹಂತದ ವ್ಯಾಪ್ತಿಯಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ ಕಳುಹಿಸಲು ಇನ್ನೂ ೧೪೧ ವಿಮಾನಗಳನ್ನು ಸರ್ಕಾರವು ಸೇರ್ಪಡೆ ಮಾಡಿದೆ.

ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸಿಲುಕಿರುವ ನಾಗರಿಕರಿಂದ ಹೆಚ್ಚಿದ ಬೇಡಿಕೆ ಮತ್ತು ಹಿಂದಿರುಗಿದ ಭಾರತೀಯರಿಗೆ ರಾಜ್ಯಗಳಲ್ಲಿ ಸಾಕಷ್ಟು ಕ್ವಾರಂಟೈನ್ ಸೌಲಭ್ಯಗಳು ಲಭ್ಯವಿರುವುದರಿಂದ ವಿಮಾನಗಳನ್ನು ಸೇರ್ಪಡೆ ಮಾಡಲಾಯಿತು.

ದೇಶಕ್ಕೆ ಮರಳಲು ಸೂಕ್ತ ಕಾರಣಗಳೊಂದಿಗೆ ಮುಂದಾಗುವ ಭಾರತೀಯ ಪ್ರಜೆಗಳಿಗೂ, ವಂದೇ ಭಾರತ್ ಮಿಷನ್ ಅಡಿಯಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಮಾನಗಳಂತೆಯೇ, ಎರಡನೇ ಹಂತದಲ್ಲಿ ಆದ್ಯತೆ ನೀಡಲಾಗುವುದು.

ವಾಪಸಾತಿ ಕಾರ್ಯಕ್ರಮದ ಎರಡನೇ ಹಂತವು ಮೇ ೧೬ ರಂದು ಪ್ರಾರಂಭವಾಗಿದ್ದು, ಜೂನ್ ೧೩ ರವರೆಗೆ ಮುಂದುವರೆಯಲಿದೆ.

ಕಳುಹಿಸಲಾಗುವ ಎಲ್ಲಾ ವಿಮಾನಗಳನ್ನು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಳುಹಿಸುತ್ತಿವೆ. ಖಾಸಗಿ ವಿಮಾನಯಾನ ಸಂಸ್ಥೆಗಳೂ ವಂದೇ ಭಾರತ್ ಮಿಷನ್‌ನ ಮೂರನೇ ಹಂತದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

No comments:

Advertisement