ಭಾರತ: ಒಂದೇ ದಿನ ೬೩೮೭ ಕೊರೊನಾ ಪ್ರಕರಣ, ೧೭೦ ಸಾವು
ನವದೆಹಲಿ: ಭಾರತದಾದ್ಯಂತ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೩೮೭ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ೧೭೦ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2020 ಮೇ 27ರ ಬುಧವಾರ ತಿಳಿಸಿತು.
ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ೧,೫೧,೭೬೭ಕ್ಕೆ ಏರಿಕೆಯಾಗಿದೆ. ೮೩,೦೦೪ ಸಕ್ರಿಯ ಪ್ರಕರಣಗಳಿದ್ದು, ೬೪,೪೨೫ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ೪,೩೩೭ ಜನ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಕೋವಿಡ್-೧೯ರಿಂದ ಅತಿಹೆಚ್ಚು ಸಂಕಷ್ಟಕ್ಕೀಡಾಗಿರುವ ಮಹಾರಾಷ್ಟ್ರದಲ್ಲಿ ಈವರೆಗೆ ೫೪,೭೫೮ ಮಂದಿಗೆ ಸೋಂಕು ತಗುಲಿದೆ. ೧,೭೯೨ ಸೋಂಕಿತರು ಮೃvರಾಗಿದ್ದಾರೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ೧೭,೭೨೮ಕ್ಕೆ ಏರಿಕೆಯಾಗಿದ್ದರೆ ಗುಜರಾತಿನಲ್ಲಿ ೧೪,೮೨೧, ದೆಹಲಿಯಲ್ಲಿ ೧೪,೪೬೫ ಕ್ಕೆ ತಲುಪಿತು.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಪ್ರತಿದಿನ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜಾಗತಿಕವಾಗಿ ಅತಿ ಹೆಚ್ಚು ಸೋಂಕಿತರಿರುವ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.
ದೆಹಲಿ ಪರಿಸ್ಥಿತಿ
೭೯೨ ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಒಂದೇ ದಿನದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾದವು. ಇದರೊಂದಿಗೆ ಸೋಂಕಿತರ ಸಂಖ್ಯೆಯು ೧೫,೨೫೭ಕ್ಕೆ ಏರಿಕೆಯಾಯಿತು.
ಇದುವರೆಗೂ ೭,೨೬೪ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ೭,೬೯೦ ಸಕ್ರಿಯ ಪ್ರಕರಣಗಳಿವೆ ಎಂದು ಬುಧವಾರ ಆರೋಗ್ಯ ಸಚಿವಾಲಯದ ವರದಿ ತಿಳಿಸಿತು.
ಕಳೆದ ೨೪ ಗಂಟೆಗಳಲ್ಲಿ ೧೫ ಜನರು ಕೋವಿಡ್-೧೯ಗೆ ಬಲಿಯಾಗಿದ್ದು, ಮೃತರ ಸಂಖ್ಯೆಯು ೩೦೩ಕ್ಕೆ ಏರಿಕೆಯಾಯಿತು.
ವಿವಿಧ ಆಸ್ಪತ್ರೆಗಳಿಂದ ಪಡೆದ ಮಾಹಿತಿ ಆಧಾರದ ಮೇಲೆ ತಯಾರಿಸಲಾದ ಡೆತ್ ಆಡಿಟ್ ಸಮಿತಿಯ ವರದಿ ಪ್ರಕಾರ, ಪ್ರಾಥಮಿಕವಾಗಿ ಸೋಂಕಿನಿಂದಲೇ ಸಾವಿನ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಅಂಕಿ ಅಂಶಗಳು ಉಲ್ಲೇಖಿಸುತ್ತವೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.
ಮೇ ೨೨ ರಂದು ೨೪ ಗಂಟೆಗಳಲ್ಲಿ ೬೬೦ ಹೊಸ ಪ್ರಕರಣಗಳು ವರದಿಯಾಗಿದ್ದವು. ಅದಾದ ಬಳಿಕ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನದಲ್ಲಿ ೭೦೦ಕ್ಕೂ ಹೆಚ್ಚಿನ ಕೋವಿಡ್-೧೯ ಪ್ರಕರಣಗಳು ವರದಿಯಾದವು.
ಕಂಟೈನ್ಮೆಂಟ್ ವಲಯಗಳ ಸಂಖ್ಯೆಯು ೯೬ಕ್ಕೆ ಏರಿಕೆಯಾಗಿದ್ದು, ಮಂಗಳವಾರವಷ್ಟೇ ಸೋಂಕಿತರ ಸಂಖ್ಯೆ ೧೪,೪೬೫ ಮತ್ತು ಮೃತರ ಸಂಖ್ಯೆ ೨೮೮ಕ್ಕೆ ಏರಿಕೆಯಾಗಿತ್ತು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೫೭,೧೮,೭೬೦, ಸಾವು ೩,೫೩,೦೪೯
ಚೇತರಿಸಿಕೊಂಡವರು- ೨೪,೫೬,೪೦೦
ಅಮೆರಿಕ ಸೋಂಕಿತರು ೧೭,೨೯,೮೨೩, ಸಾವು ೧,೦೦,೭೫೦
ಸ್ಪೇನ್ ಸೋಂಕಿತರು ೨,೮೩,೩೩೯, ಸಾವು ೨೭,೧೧೭
ಇಟಲಿ ಸೋಂಕಿತರು ೨,೩೦,೫೫೫, ಸಾವು ೩೨,೯೫೫
ಜರ್ಮನಿ ಸೋಂಕಿತರು ೧,೮೧,೫೩೦, ಸಾವು ೮,೪೯೮
ಚೀನಾ ಸೋಂಕಿತರು ೮೨,೯೯೩, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೬೫,೨೨೭, ಸಾವು ೩೭,೦೪೮
ಅಮೆರಿಕದಲ್ಲಿ ೧೭೮ ಇರಾನಿನಲ್ಲಿ ೫೬, ಬೆಲ್ಜಿಯಂನಲ್ಲಿ ೩೦, ಇಂಡೋನೇಷ್ಯ ೫೫, ನೆದರ್ ಲ್ಯಾಂಡ್ಸ್ನಲ್ಲಿ ೧೫, ರಶ್ಯಾದಲ್ಲಿ ೧೬೧, ಸ್ವೀಡನ್ನಲ್ಲಿ ೯೫, ಮೆಕ್ಸಿಕೋದಲ್ಲಿ ೫೦೧ ಒಟ್ಟಾರೆ ವಿಶ್ವಾದ್ಯಂತ ೧೩೯೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment