Monday, May 11, 2020

‘ಶ್ರಮಿಕ’ ರೈಲುಗಳ ಸಾಮರ್ಥ್ಯ ಹೆಚ್ಚಳ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಶ್ರಮಿಕರೈಲುಗಳ  ಸಾಮರ್ಥ್ಯ ಹೆಚ್ಚಳ:  ಪರಿಷ್ಕೃತ ಮಾರ್ಗಸೂಚಿ  ಬಿಡುಗಡೆ
ನವದೆಹಲಿ: ಕೋವಿಡ್-೧೯ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ  ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ  ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ತಲುಪಿಸುವ ಸಲುವಾಗಿ ಓಡಿಸಲಾಗುತಿರುವಶ್ರಮಿಕವಿಶೇಷ ರೈಲುಗಳ ಮಾರ್ಗಸೂಚಿಗಳನ್ನು ರೈಲ್ವೇ ಸಚಿವಾಲಯವು 2020 ಮೇ 11ರ ಸೋಮವಾರ ಪರಿಷ್ಕರಿಸಿತು.
ಶ್ರಮಿಕವಿಶೇಷ ರೈಲುಗಳ ಸಾಮರ್ಥ್ಯವನ್ನು ಕೂಡಾ ಈಗಿನ ,೨೦೦ ರಿಂದ ,೭೦೦ಕ್ಕೆ ಹೆಚ್ಚಿಸಲು ಕೂಡಾ ಸಚಿವಾಲಯ ನಿರ್ಧರಿಸಿದೆ. ರೈಲುಗಾಡಿಗಳ ಸಾಮರ್ಥ್ಯವು ಸ್ಲೀಪರ್ ಬರ್ತ್ಗಳ ಸಂಖ್ಯೆಗೆ ಸಮವಾಗಿರಬೇಕು ಎಂದು ಪರಿಷ್ಕೃತ ಮಾರ್ಗಸೂಚಿ ಹೇಳಿತು.
ಗಮ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೊನೆಯ ನಿಲುಗಡೆ ಹೊರತಾಗಿ ಮೂರು ನಿಲುಗಡೆಗಳಿಗೆ ವ್ಯವಸ್ಥೆ ಮಾಡುವಂತೆಯೂ ರೈಲ್ವೇ ವಲಯಗಳಿಗೆ ಸೂಚಿಸಲಾಗಿದೆ.

ರಾಜ್ಯಗಳಿಗೆ, ಅದರಲ್ಲೂ ವಿಶೇಷವಾಗಿ ಕೆಲವೇ ಕೆಲವು ರೈಲುಗಾಡಿಗಳ ಪ್ರವೇಶಕ್ಕೆ ಅನುಮತಿ ನೀಡಿರುವ ರಾಜ್ಯಗಳಿಗೆ ರೈಲು ಸಂಚಾರಕ್ಕೆ ಅನುಮತಿ ನೀಡುವಲ್ಲಿ ಉದಾರ ಧೋರಣೆ ತಾಳಲು ರೈಲ್ವೇ ಸಚಿವಾಲಯ ಮನವಿ ಮಾಡಿದೆ. ಭಾನುವಾರ ರಾಜ್ಯಗಳ ಜೊತೆ ಗೃಹ ಕಾರ್ಯದರ್ಶಿಯವರು ನಡೆಸಿದ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗಿದ್ದು, ಗೃಹ ಕಾರ್ಯದರ್ಶಿಯವರು ನಿಟ್ಟಿನಲ್ಲಿ ಪತ್ರಗಳನ್ನೂ ಬರೆದಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳಕ್ಕೆ ನಿಟ್ಟಿನಲ್ಲಿ ಮನವಿ ಮಾಡಿದ್ದಾರೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಲಸೆ ಕಾರ್ಮಿಕರಿಗಾಗಿಶ್ರಮಿಕವಿಶೇಷ ರೈಲುಗಳನ್ನು ಓಡಿಸುವ ನಿಟ್ಟಿನಲ್ಲಿ ರೈಲ್ವೇ ಜೊತೆಗೆ ಸಹಕರಿಸಬೇಕು ಎಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರದಲ್ಲಿ ಕೋರಿದ್ದಾರೆ.

ವಲಸೆ ಕಾರ್ಮಿಕರು ರಸ್ತೆಗಳು, ರೈಲ್ವೇ ಹಳಿಗಳಲ್ಲಿ ಕಾಲ್ನಡಿಗೆ ಮಾಡದಂತೆ ಮತ್ತು ಲಭ್ಯವಿರುವ ವಿಶೇಷ ರೈಲುಗಳನ್ನು ಬಳಸಿಕೊಳ್ಳುವಂತೆ ಖಾತರಿ ಮಾಡಿಕೊಳ್ಳಬೇಕು ಎಂದು ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ.

ಮೇ ೧ರಿಂದ ಭಾರತೀಯ ರೈಲ್ವೇಯು ೪೨೮ಶ್ರಮಿಕವಿಶೇಷ ರೈಲುಗಳನ್ನು ಓಡಿಸಿದ್ದು, ರಾಷ್ಟ್ರದ ವಿವಿಧ ಭಾಗಗಳಲ್ಲಿ ಕೊರೋನಾವೈರಸ್ ದಿಗ್ಬಂಧನದ ಪರಿಣಾಮವಾಗಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಕ್ಕಿಂತಲೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರವರ ಮನೆಗಳಿಗೆ ಮುಟ್ಟಿಸಿದೆ.

ಮೇ ೯ರವರೆಗೆ ರದ್ದು ಪಡಿಸಲಾಗಿರುವ ೨೮೭ ರೈಲುಗಾಡಿಗಳ ಪೈಕಿ, ೧೨೭ ರೈಲುಗಳು ಉತ್ತರ ಪ್ರದೇಶದಲ್ಲಿ ೮೭ ಬಿಹಾರದಲ್ಲಿ, ೨೪ ಮಧ್ಯಪ್ರದೇಶದಲ್ಲಿ, ೨೦ ಒಡಿಶಾದಲ್ಲಿ, ೧೬ ಜಾರ್ಖಂಡಿನಲ್ಲಿ, ರಾಜಸ್ಥಾನದಲ್ಲಿ, ಮೂರು ಮಹಾರಾಷ್ಟ್ರದಲ್ಲಿ, ತಲಾ ಎರಡು ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಮತ್ತು ತಲಾ ಒಂದು ಆಂಧ್ರಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ರದ್ದಾಗಿದ್ದವು ಎಂದು ಅಧಿಕಾರಿಗಳು ನುಡಿದರು.

No comments:

Advertisement