Thursday, June 25, 2020

ಚೀನಾ ಸೋಗು: ಲಡಾಖ್‌ನಲ್ಲಿ ಸೇನೆ ಹೆಚ್ಚಳ: ಉಪಗ್ರಹ ಚಿತ್ರಗಳಿಂದ ಖಚಿತ

ಚೀನಾ ಸೋಗು: ಲಡಾಖ್ನಲ್ಲಿ  ಸೇನೆ ಹೆಚ್ಚಳ:  
ಉಪಗ್ರಹ ಚಿತ್ರಗಳಿಂದ ಖಚಿತ

ನವದೆಹಲಿ:  ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸೈನಿಕರ ಜಮಾವಣೆ, ಸೇನಾ ವಾಹನಗಳು, ಮಣ್ಣು ಸಾಗಣೆ ಯಂತ್ರೋಪಕರಣಗಳ ಓಡಾಟು ಮತ್ತು ಕಟ್ಟಡಗಳ ನಿರ್ಮಾಣ ಕಾರ್ ಮುಂದುವರೆದಿದ್ದು, ಸೇನಾ ಜಮಾವಣೆ ಸ್ಥಗಿತಗೊಂಡಿಲ್ಲ ಎಂಬುದು ಉಪಗ್ರಹ ಚಿತ್ರಗಳಿಂದ ಖಚಿತಗೊಂಡಿದೆ ಎಂದು ಇಬ್ಬರು ಹಿರಿಯ ಅಧಿಕಾರಿಗಳು  2020 ಜೂನ್ 25ರ ಗುರುವಾರ ತಿಳಿಸಿದರು.

ಜೂನ್ ೨೨ರಂದು ಪ್ರದೇಶದ ಉಪಗ್ರಹ ಚಿತ್ರಗಳನ್ನು ತೆಗೆಯಲಾಗಿದೆ. ಜೂನ್ ೧೫ರ ರಾತ್ರಿ ಪ್ರದೇಶದಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಘರ್ಷಣೆಗಳು ಸಂಭವಿಸಿದ್ದು, ಭಾರತದ ೨೦ ಮಂದಿ ಯೋಧರು ಹುತಾತ್ಮರಾಗಿದ್ದು, ಚೀನೀ ಪಡೆಗಳ ಅಸಂಖ್ಯಾತ ಸೈನಿಕರು ಸಾವನ್ನಪ್ಪಿದ್ದರು.

ಘರ್ಷಣೆ ಸಂಭವಿಸಿದ್ದ ಪಹರೆ ಪಾಯಿಂಟ್ (ಪಿಪಿ) ೧೪ ಸಮೀಪ ಚೀನೀ ಪಡೆಗಳ ಹೊಸ ರಚನೆಯನ್ನು ಭಾರತೀಯ ಸೇನೆಯು ಗಮನಿಸಿದೆ ಎಂದು ಅಧಿಕಾರಿ ನುಡಿದರು.

ಎರಡೂ ಬೆಳವಣಿಗೆಗಳ ಬಗ್ಗೆ ಸೇನೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಭಾರತ ಮತ್ತು ಚೀನಾ ಘರ್ಷಣೆ ಪ್ರದೇಶಗಳಿಂದ ಹಿಂದೆ ಸರಿಯಲು ಸೋಮವಾರ ಒಪ್ಪಿಕೊಂಡಿವೆ.

ಅಮೆರಿಕದ  ಮ್ಯಾಕ್ಸಾರ್ ಟೆಕ್ನಾಲಜೀಸ್ ಸಂಸ್ಥೆ ಬಿಡುಗಡೆ ಮಾಡಿದ ಹೊಸ ಉಪಗ್ರಹ ಚಿತ್ರವು ಗಲ್ವಾನ್ ಕಣಿವೆಯಲ್ಲಿ ಪಿಎಲ್ ಶಿಬಿರಗಳನ್ನು ಸ್ಥಾಪಿಸಿದ್ದಲ್ಲದೆ ತನ್ನ ಸೇನಾ ಸ್ಥಾನಗಳನ್ನು ಹೆಚ್ಚಿಸಿದೆ ಎಂಬ ಹೇಳಿಕೆಯನ್ನು ಬೆಂಬಲಿಸುತ್ತದೆ. ಮ್ಯಾಕ್ಸಾರ್ ಚಿತ್ರಗಳಲ್ಲಿ ಒಂದು ಪಿಪಿ -೧೪ ಬಳಿ ಹೊಸ ಮತ್ತು ದೊಡ್ಡ ವೀಕ್ಷಣಾ ಠಾಣೆಯನ್ನು ಸೂಚಿಸುತ್ತದೆ. ೧೬ ಬಿಹಾರ ರೆಜಿಮೆಂಟ್ ಹತ್ಯೆಗೀಡಾದ ಕರ್ನಲ್ ಸಂತೋಷ್ ಬಾಬು ನೇತೃತ್ವದ ಭಾರತೀಯ ತಂಡವು ಜೂನ್ ೧೫ ರಂದು ಪ್ರದೇಶದಲ್ಲಿ ವೀಕ್ಷಣಾ ಪೋಸ್ಟ್ ಸೇರಿದಂತೆ ಕೆಲವು ರಚನೆಗಳನ್ನು ಕೆಡವಿಹಾಕಿತ್ತು.

ಹಿರಿಯ ಭಾರತೀಯ ಮತ್ತು ಚೀನಾದ ಮಿಲಿಟರಿ ಕಮಾಂಡರ್ಗಳು ಎಲ್ಎಸಿಯ ಚೀನಾದ ಬದಿಯಲ್ಲಿರುವ ಮೊಲ್ಡೊದಲ್ಲಿ ೧೧ ಗಂಟೆಗಳ ಸಭೆಯಲ್ಲಿ ಎಲ್ಲಾ ಘರ್ಷಣೆ ಪ್ರದೇಶಗಳಿಂದ "ಪರಸ್ಪರ ಒಮ್ಮತವನ್ನು" ತಲುಪಿದ ದಿನವಾದ ಜೂನ್ ೨೨ ರಂದೇ ಉಪಗ್ರಹ ಚಿತ್ರಗಳನ್ನು ತೆಗೆಯಲಾಗಿದೆ.

ಉಪಗ್ರಹ ಚಿತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಮತ್ತು ಚೀನಾ ವೀಕ್ಷಕರು, ದೃಶ್ಯಗಳು ಚೀನಾದ ನಿರ್ಮಾಣವನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಮತ್ತು ಭಾರತೀಯ ಪ್ರದೇಶಗಳ ಮೇಲೆ ಕಣ್ಗಾವಲು ನಡೆಸಲು ರಚಿಸಲಾದ ಹೊಸ ವೀಕ್ಷಣಾ ಠಾಣೆಯನ್ನು  ಸಹ ಸೂಚಿಸಿವೆ ಎಂದು ಹೇಳಿದರು.

’‘ನದಿ ತೀರದಲ್ಲಿ ಹೆಚ್ಚಿನ ಸಂಖ್ಯೆಯ ಟೆಂಟ್ ಶಿಬಿರಗಳು, ಮಿಲಿಟರಿ ವಾಹನಗಳು, ಹೆವಿ ಟ್ರಕ್ಕುಗಳೂ ಮತ್ತು ಬುಲ್ಡೋಜರ್ಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ರಸ್ತೆ ನಿರ್ಮಾಣವೂ ನಡೆಯುತ್ತಿದೆ. ಚೀನಾದ ಸ್ಥಾನಗಳು ಎಲ್ಎಸಿಯಲ್ಲಿ ಅಬ್ಬರಿಸುತ್ತಿವೆಎಂದು ಉಪಗ್ರಹ ಚಿತ್ರವನ್ನು ಪರಿಶೀಲಿಸಿದವರಲ್ಲಿ ಒಬ್ಬರಾದ ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ (ನಿವೃತ್ತ) ಹೇಳಿದರು. ಪಿಪಿ -೧೪ ಬಳಿ ವೀಕ್ಷಣಾ ಠಾಣೆ ಮತ್ತೆ ಬಂದಿರುವುದು ಕಂಡುಬಂದಿದೆ ಎಂದು ಅವರು ನುಡಿದರು.

ಡೆಪ್ಸಾಂಗ್, ಗೊಗ್ರಾ ಪೋಸ್ಟ್-ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗೊಂಗ್ ತ್ಸೊ ಸೇರಿದಂತೆ ಎಲ್ಎಸಿಯ ಇತರ ಪ್ರದೇಶಗಳಲ್ಲಿ ಚೀನೀ ನಿರ್ಮಾಣವು ಕಡಿಮೆಯಾಗಿಲ್ಲ, ಪಿಎಲ್ಎಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿ ಘಟಕಗಳು ಚೀನಾದ ಪ್ರದೇಶಗಳಲ್ಲಿ ಡೆಪ್ಸಾಂಗ್ ಮತ್ತು ಗೋಗ್ರಾ ಪೋಸ್ಟ್-ಹಾಟ್ ಸ್ಪ್ರಿಂಗ್ಸ್ ಕ್ಷೇತ್ರಗಳಲ್ಲಿ ಕಾಣಿಸುತ್ತಿವೆ ಎಂದು ಅವರು ಹೇಳಿದರು.

ಆದಾಗ್ಯೂ ಭಾರತೀಯ ಸೇನೆಯು ಎಲ್ಎಸಿಯ ಉದ್ದಕ್ಕೂ ಕಟ್ಟುನಿಟ್ಟಿನ ಜಾಗರೂಕತೆ ವಹಿಸಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ಯಾವುದೇ ಪ್ರಚೋದನೆ ಅಥವಾ ಸಾಹಸಕ್ಕೆ ಉತ್ತರ ನೀಡಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮೇಲೆ ಉಲ್ಲೇಖಿಸಿದ ಎರಡನೇ ಅಧಿಕಾರಿ ಹೇಳಿದರು.

ನಿರ್ಮಾಣವನ್ನು ಗಮನಿಸಿದರೆ, ಪರಿಶೀಲಿಸಬಹುದಾದ ಆಧಾರದ ಮೇಲೆ ನೆಲದ ಮೇಲೆ ಸೇನೆ ವಾಪಸಾತಿ ನಡೆಯುವವರೆಗೆ ಸೇನೆಯು ತನ್ನ ಕಾವಲುಗಾರರನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಏನಿದ್ದರೂ ಜಾಗರೂಕರಾಗಿರುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.

ಸೇನೆ ತೆರವು ಪ್ರಕ್ರಿಯೆಯು ಪ್ರಯಾಸಕರ ಮತ್ತು ಸವಾಲಿನದ್ದಾಗಿರಬಹುದು ಮತ್ತು ಹಂತಗಳಲ್ಲಿ ಎಚ್ಚರಿಕೆಯಿಂದ ಮುಂದುವರೆಯುವ ಅಗತ್ಯವಿರುತ್ತದೆ ಎಂದು ಮೂಲಗಳು ಹೇಳಿವೆ.

ಸೇನಾ ವಾಪಸಾತಿ ರಾತ್ರೋರಾತ್ರಿ ಆಗುವುದಿಲ್ಲ. ಉಪಗ್ರಹ ಚಿತ್ರಗಳು ಕಳವಳಕ್ಕೆ ಕಾರಣವಾಗಿರುವುದರ ಜೊತೆಗೆ  ಗಲ್ವಾನ್ ಕಣಿವೆಯ ಎಲ್ಎಸಿ ಬಳಿ ನೆಲವನ್ನು ಹಿಡಿದಿಡುವ ಚೀನಾದ ಉದ್ದೇಶಗಳನ್ನು ಸ್ವಲ್ಪಮಟ್ಟಿಗೆ ಬಹಿರಂಗಪಡಿಸಿದೆ. ಆದರೆ, ಹಿರಿಯ ಕಮಾಂಡರ್ಗಳ ನಡುವಿನ ಮಾತುಕತೆಯ ಫಲಿತಾಂಶವು ಕೇವಲ ಎರಡು ದಿನಗಳಲ್ಲಿ ನೆಲದ ಮೇಲೆ ಪ್ರತಿಫಲಿಸುವುದಿಲ್ಲಎಂದು ಹೂಡಾ ಹೇಳಿದರು.

ಪೂರ್ವ ಲಡಾಖ್ ಎಲ್ಎಸಿಗೆ ಅಡ್ಡಲಾಗಿ ಚೀನಾ ತನ್ನಆಳ ಪ್ರದೇಶಗಳಲ್ಲಿ೧೦,೦೦೦ ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ ಮತ್ತು ಮಿಲಿಟರಿ ನಿರ್ಮಾಣವು ಫೈಟರ್ ಜೆಟ್ಗಳು, ಹೆಲಿಕಾಪ್ಟರ್ಗಳು, ಟ್ಯಾಂಕ್ಗಳು, ಫಿರಂಗಿ ಬಂದೂಕುಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ವಾಯು ರಕ್ಷಣಾ ರಾಡಾರ್ಗಳನ್ನು ಇವು ಒಳಗೊಂಡಿದೆ.

ಜನರಲ್ ನರವಾಣೆ ವರದಿ

ಲಡಾಖ್ ಪ್ರದೇಶಕ್ಕೆ ಎರಡು ದಿನಗಳ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿರುವ ಭೂ ಸೇನಾ ದಂಡನಾಯಕ ಜನರಲ್ ಮನೋಜ್ ಮುಕುಂದ ನರವಾಣೆ ಅವರು ಉನ್ನತ ಮಟ್ಟದ ಸಭೆಯಲ್ಲಿ ಚೀನಾ ಚಟುವಟಿಕೆಗಳ ಬಗ್ಗೆ ವಿವರ ನೀಡಲಿದ್ದಾರೆ.

ಕಳೆದ ಎರಡು ದಿನಗಳಲ್ಲಿ, ನರವಾಣೆ ಅವರು ಪೂರ್ವ ಲಡಾಕ್ ಪಿಎಲ್ ಜೊತೆಗಿನ ನಾಲ್ಕು ಸ್ಟ್ಯಾಂಡ್-ಆಫ್ ಪಾಯಿಂಟ್ಗಳು ಮತ್ತು ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಬಗ್ಗೆ ಸ್ಥಳದಲ್ಲೇ ಮೌಲ್ಯಮಾಪನ ಮಾಡಿದ್ದರು.

ಕಳೆದ ಒಂದು ವಾರದಲ್ಲಿ, ಟಿಬೆಟ್ ಪ್ರದೇಶಕ್ಕೆ ತರಬೇತಿ ಪಡೆದ ಐಟಿಬಿಪಿ ಬೆಟಾಲಿಯನ್ಗಳೊಂದಿಗೆ ಹೆಚ್ಚಿನ ಬೆಟಾಲಿಯನ್ಗಳನ್ನು ಸೇರ್ಪಡೆಗೊಳಿಸಲಾಗಿದೆ. 

No comments:

Advertisement