ರಾಜತಾಂತ್ರಿಕ
ಸಂಪರ್ಕ, ಗಡಿ ಉದ್ವಿಗ್ನತೆ ಶಮನ: ಧನಾತ್ಮಕ ಚರ್ಚೆ
ನವದೆಹಲಿ: ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಜೂನ್ ೧೫ ರ ಘರ್ಷಣೆಯ ನಂತರದ ಮೊದಲ ಔಪಚಾರಿಕ ರಾಜತಾಂತ್ರಿಕ ಸಭೆಯಲ್ಲಿ ಗಡಿ ಉದ್ವಿಗ್ನತೆ ಮತ್ತು ಭವಿಷ್ಯದ ರಾಜತಾಂತ್ರಿಕ ಸಂಪರ್ಕಗಳನ್ನು ಸರಾಗಗೊಳಿಸುವ ಮಾರ್ಗಗಳನ್ನು ಭಾರತ ಮತ್ತು ಚೀನಾ 2020 ಜೂನ್ 24ರ ಬುಧವಾರ ಚರ್ಚಿಸಿದವು.
ಜೂನ್
೧೫ರ ಘರ್ಷಣೆಯಲ್ಲಿ ಭಾರತದ ೨೦ ಸೈನಿಕರು ಹುತಾತ್ಮರಾಗಿದ್ದರು.
ಗಡಿ
ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯತಂತ್ರ (ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಷನ್ ಅಂಡ್ ಅಂಡ್ ಕೋ ಆರ್ಡಿನೇಷನ್ ಆನ್
ಬಾರ್ಡರ್ ಅಫೇರ್ಸ್ (ಡಬ್ಲ್ಯೂ ಎಂಸಿಸಿ) ಅಡಯಲ್ಲಿ ಜೂನ್ ೫ ರಿಂದ ಇದು
ಎರಡನೆಯ ಸಭೆಯಾಗಿದೆ.
ವಿಡಿಯೋ
ಕಾನ್ಫರೆನ್ಸ್ ಮೂಲಕ ಸಭೆ ನಡೆಯಿತು.
೨೦೧೨
ರಲ್ಲಿ ಸ್ಥಾಪನೆಯಾದ ಡಬ್ಲ್ಯುಎಂಸಿಸಿ, ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕ ವೂ ಜಿಯಾಂಗ್ಹಾವೊ
ನೇತೃತ್ವ ವಹಿಸಿದ್ದಾರೆ.
ಡಬ್ಲ್ಯುಎಂಸಿಸಿಯ
ನಂತರದ ಮುಂದಿನ ಹಂತವು ವಿಶೇಷ ಪ್ರತಿನಿಧಿಗಳ ಕಾರ್ಯವಿಧಾನವಾಗಿದೆ. ಆದರೆ ಶೀಘ್ರದಲ್ಲೇ ಯಾವುದಾದರೂ ಸಮಯದಲ್ಲಿ ಎರಡೂ ಸಭೆಗಳನ್ನು ಡೆಸಲು ಉದ್ದೇಶಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಸೂಚನೆ ಲಭಿಸಿಲ್ಲ.
ಬುಧವಾರದ
ಸಭೆಯು ಭಾರತೀಯ ಮತ್ತು ಚೀನೀ ಸೇನೆಯ ಕೋರ್ ಕಮಾಂಡರ್ಗಳಲ್ಲಿ ಒಬ್ಬರು ಪಾಲ್ಗೊಂಡಿದ್ದ ವಿವಾದಾತ್ಮಕ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಬದಿಯಲ್ಲಿರುವ ಮೊಲ್ಡೊದಲ್ಲಿ ಸೋಮವಾರ ನಡೆದ ಸಭೆಯ ಮುಂದಿನ ಭಾಗವಾಗಿದೆ. ಈ ಸಂದರ್ಭದಲ್ಲಿ ಉದ್ವಿಗ್ನತೆ
ತಗ್ಗಿಸುವ ಕ್ರಮಗಳಿಗೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.
ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯವಿಧಾನದ (ಡಬ್ಲ್ಯುಎಂಸಿಸಿ) ನಿರ್ಣಾಯಕ ಸಭೆಯಲ್ಲಿ, ನಾಲ್ಕು ಹಂತಗಳಲ್ಲಿ ಪೂರ್ವ ಲಡಾಕ್ ಬಿಕ್ಕಟ್ಟು ಇತ್ಯರ್ಥ ಸಾಧ್ಯತೆ ಬಗ್ಗೆ ಚರ್ಚೆ ನಡೆಯಲಿದೆ ಎಂದ ಮೂಲಗಳು
ಇದಕ್ಕೆ ಮುನ್ನ ಹೇಳಿದ್ದವು.
ಜೂನ್
೨೨ ರಂದು ನಡೆದ ಮಿಲಿಟರಿ ಕಮಾಂಡರ್ಗಳ ಸುದೀರ್ಘ ಸಭೆಯ
ನಂತರ ಭಾರತೀಯ ಸೇನೆಯು ಅನೌಪಚಾರಿಕವಾಗಿ "ಪರಸ್ಪರ ಒಮ್ಮತ"ದ ಸಭೆ ಎಂದು
ವ್ಯಾಖ್ಯಾನಿಸಿತ್ತು.
ಚೀನಾದ ವಕ್ತಾರರು ತಮ್ಮ ಕಠಿಣ ಶೈಲಿಯಲ್ಲಿ, ಎರಡೂ ಸೇನೆಗಳು ಪರಸ್ಪರ ಮುಗಿಬಿದ್ದ ಹೊತ್ತಿನ ’ತಂಪಾದ’ ಪರಿಸ್ಥಿತಿ ಎಂದು ಹೇಳಿದ್ದರು.
No comments:
Post a Comment