೧೯೯೩ರ
ಮುಂಬೈ ಸ್ಫೋಟ ಅಪರಾಧಿ ಯೂಸುಫ್ ಮೆಮನ್ ಸಾವು
ಮುಂಬೈ: ೧೯೯೩ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮತ್ತು ತಲೆಮರೆಸಿಕೊಂಡ ಆರೋಪಿ ಟೈಗರ್ ಮೆಮನ್ ಸಹೋದರ ಯೂಸುಫ್ ಮೆಮನ್ 2020 ಜೂನ್ 26ರ ಶುಕ್ರವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಾಸಿಕ್ ರಸ್ತೆ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾನೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದರು.
ಸಾವಿಗೆ
ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಮತ್ತು ಶವವನ್ನು ಶವಪರೀಕ್ಷೆಗಾಗಿ ಧುಲೆಗೆ ಕಳುಹಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ನಾಸಿಕ್
ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ-ಪಾಟೀಲ್ ಅವರು ಮೆಮನ್ ಸಾವನ್ನು ದೃಢ ಪಡಿಸಿದರು.
ದೇಶಭ್ರಷ್ಟ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಟೈಗರ್ ಮೆಮನ್ ೧೯೯೩ರ ಮುಂಬೈ ಸರಣಿ ಸ್ಫೋಟದ ಪಿತೂರಿಯ ಸೂತ್ರಧಾರಿಯಾಗಿದ್ದರೆ, ಯೂಸುಫ್ ಮುಂಬೈನ ಅಲ್ ಹುಸೇನಿ ಕಟ್ಟಡದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ತನ್ನ ಫ್ಲಾಟ್ ಮತ್ತು ಗ್ಯಾರೇಜ್ನ್ನು ಒದಗಿಸಿದ್ದ ಎಂದು ಆಪಾದಿಸಲಾಗಿತ್ತು. .
ವಿಶೇಷ
ಟಾಡಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ
ಪ್ರಕರಣದಲ್ಲಿ ಬಂಧಿತನಾಗಿದ್ದ ಮತ್ತೊಬ್ಬ ಮೆಮನ್ ಸಹೋದರ ಯಾಕೂಬ್ ಮೆಮನ್ನನ್ನು ೨೦೧೫ ರಲ್ಲಿ ಗಲ್ಲಿಗೇರಿಸಲಾಗಿತ್ತು.
೧೯೯೩ರ ಮಾರ್ಚ್ ೧೨ರಂದು ಮುಂಬೈ ನಗರದಲ್ಲಿ ಸಂಭವಿಸಿದ ೧೨ ಸ್ಫೋಟಗಳಲ್ಲಿ ಕನಿಷ್ಠ ೨೫೦ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು.
No comments:
Post a Comment