ಭಾರತದಲ್ಲಿ ಕೊರೋನಾ ‘ಸ್ಫೋಟಗೊಂಡಿಲ್ಲ,’ಆದರೆ ಅಪಾಯ ತಪ್ಪಿಲ್ಲ
ವಿಶ್ವಸಂಸ್ಥೆ: ಭಾರತದಲ್ಲಿ ಕೊರೋನಾವೈರಸ್ ರೋಗ ’ಸ್ಫೋಟಗೊಂಡಿಲ್ಲ’, ಆದರೆ ಕೋವಿಡ್-೧೯ನ್ನು ತಡೆಯಲು ಮಾರ್ಚ್ ತಿಂಗಳಲ್ಲಿ ಜಾರಿಗೊಳಿಸಲಾಗಿದ್ದ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ತೆರವುಗೊಳಿಸುವತ್ತ (ಅನ್ ಲಾಕ್) ದೇಶ ಸಾಗುತ್ತಿರುವುದರಿಂ ಕೊರೋನಾ ಸ್ಫೋಟದ ಅಪಾಯ ಈಗಲೂ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್ ಒ) ಉನ್ನತ ತಜ್ಞರೊಬ್ಬರು ಹೇಳಿದರು.
ಪ್ರಸ್ತುತ ಹಂತದಲ್ಲಿ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ಮೂರುವಾರಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮ ಆಡಳಿತ ನಿರ್ದೇಶಕ ಮೈಕೆಲ್ ರಾನ್ 2020 ಜೂನ್ 05ರ ಶುಕ್ರವಾರ ಹೇಳಿದರು.
"ಆದ್ದರಿಂದ ಸಾಂಕ್ರಾಮಿಕ ರೋಗದ ಪ್ರಯಾಣದ ದಿಕ್ಕು ಘಾತಕರವಾದುದಲ್ಲ, ಆದರೆ ಅದು ಇನ್ನೂ ಬೆಳೆಯುತ್ತಿದೆ" ಎಂದು ಅವರು ಹೇಳಿದರು, ಸಾಂಕ್ರಾಮಿಕದ ಪರಿಣಾಮವು ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿದೆ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಬದಲಾಗುತ್ತವೆ’ ಎಂದು ಅವರು ನುಡಿದರು.
‘ದಕ್ಷಿಣ ಏಷ್ಯಾದಲ್ಲಿ, ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶದಲಿ, ಪಾಕಿಸ್ತಾದಲ್ಲಿ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿ ದಟ್ಟವಾದ ಜನಸಂಖ್ಯೆ ಇದೆ, ಈ ರೋಗವು ಸ್ಫೋಟಗೊಂಡಿಲ್ಲ. ಆದರೆ ಅದು ಸಂಭವಿಸುವ ಅಪಾಯ ಯಾವಾಗಲೂ ಇರುತದೆ’ ಎಂದು ರಿಯಾನ್ ಜಿನೀವಾದಲ್ಲಿ ಹೇಳಿದರು.
ರೋಗವು ಸಮುದಾಯಗಳಲ್ಲಿ ಹುಟ್ಟುತ್ತದೆ ಮತ್ತು ನೆಲೆಯೂರುತ್ತಾ ಹೋಗುತ್ತದೆ. ಅದು ಯಾವುದೇ ಸಮಯದಲ್ಲಿ ತ್ವರಿತಗೊಳ್ಳಬಹುದು ಮತ್ತು ಹಲವು ಸ್ವರೂಪಗಳಲ್ಲಿ ಕಾಣಿಸಬಹುದು ಎಂದು ಅವರು ನುಡಿದರು.
ಭಾರತದಲ್ಲಿ ಕೈಗೊಳ್ಳಲಾದ ರಾಷ್ಟ್ರವ್ಯಾಪಿ ದಿಗ್ಬಂಧನದಂತಹ ಕ್ರಮಗಳು ಪರಿಣಾಮ ಬೀರಿದ್ದು, ರೋಗ ಪ್ರಸರಣವನ್ನು ನಿಧಾನಗೊಳಿಸಿವೆ, ಆದರೆ ರಾಷ್ಟ್ರವು ಇದೀಗ ತೆರೆದುಕೊಳ್ಳುತ್ತಿರುವುದರಿಂದ ಪ್ರಕರಣಗಳು ಹೆಚ್ಚುವ ಅಪಾಯ ಇದ್ದೇ ಇದೆ ಎಂದು ಅವರು ಹೇಳಿದರು.
’ಭಾರತದಲ್ಲಿ ಕೈಗೊಂಡ ಕ್ರಮಗಳು ಖಂಡಿತವಾಗಿ ರೋಗ ರೋಗ ಪ್ರಸರಣ ತಡೆಯುವಲ್ಲಿ ಪರಿಣಾಮಕಾರಿಯಾಗಿವೆ. ಇತರ ದೊಡ್ಡ ರಾಷ್ಟ್ರಗಳಂತೆ ಭಾರತ ಕೂಡಾ ಈಗ ದಿಗ್ಬಂಧನದಿಂದ ಹೊರಬರುತ್ತಿವೆ ಮತ್ತು ಜನರು ತಿರುಗಾಡಲು ಆರಂಭಿಸುತ್ತಿದ್ದಾರೆ, ಆದ್ದರಿಂದ ರೋಗವು ಮತ್ತೆ ವ್ಯಾಪಕಗೊಳ್ಳುವ ಅಪಾಯ ಯಾವತ್ತಿಗೂ ಇದೆ’ ಎಂದು ರ್ಯಾನ್ ಹೇಳಿದರು.
ಭಾರತದಲ್ಲಿ ದೊಡ್ಡ ಮಟ್ಟದ ವಲಸೆ, ನಗರ ಪರಿಸರದಲ್ಲಿ ಜನದಟ್ಟಣೆಯಂತಹ ನಿರ್ದಿಷ್ಟ ವಿಷಯಗಳಿವೆ, ವಾಸ್ತವವಾಗಿ ಹಲವಾರು ಕಾರ್ಮಿಕರು ಪ್ರತಿದಿನ ಕೆಲಸಕ್ಕೆ ಹೋಗದ ವಿನಃ ಬೇರೆ ದಾರಿಯೇ ಇಲ್ಲ ಎಂದು ಅವರು ನುಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ೧.೩ ಬಿಲಿಯನ್ (೧೩೦ ಕೋಟಿ) ಜನರಿರುವ ದೇಶವಾದ ಭಾರತದಲ್ಲಿ ಪ್ರಸ್ತುತ ೨,೦೦,೦೦೦ ಕ್ಕೂ ಹೆಚ್ಚು ಸೋಂಕು ಪ್ರಕರಣಗಳು "ದೊಡ್ಡದಾಗಿ ಕಾಣುತ್ತವೆ ಆದರೆ ಈ ಗಾತ್ರದ ದೇಶಕ್ಕೆ ಇದು ಇನ್ನೂ ಸಾಧಾರಣವಾಗಿದೆ" ಎಂದು ಹೇಳಿದರು.
ಭಾರತವು ಸೋಂಕು ಬೆಳವಣಿಗೆಯ ಪ್ರಮಾಣ, ವೈರಸ್ ದ್ವಿಗುಣಗೊಳ್ಳುವ ಸಮಯದ ಬಗ್ಗೆ ನಿಗಾ ಇಡುವುದು ಮತ್ತು ಆ ಸಂಖ್ಯೆ ಅತಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು.
ಭಾರತವು ಹೆಚ್ಚು ಜನನಿಬಿಡ ನಗರಗಳನ್ನು ಹೊಂದಿರುವ "ವೈವಿಧ್ಯಮಯವಾದ ಬೃಹತ್ ದೇಶ" ಮತ್ತು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಸಾಂದ್ರತೆ ಮತ್ತು ವಿವಿಧ ರಾಜ್ಯಗಳಲ್ಲಿ ವಿವಿಧ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿದೆ ಮತ್ತು ಇದು ಕೋವಿಡ್-೧೯ ನಿಯಂತ್ರಣಕ್ಕೆ ಸವಾಲುಗಳನ್ನು ಒಡ್ಡುತ್ತದೆ ಎಂದು ಅವರು ಹೇಳಿದರು.
ಲಾಕ್ಡೌನ್ ಮತ್ತು ನಿರ್ಬಂಧಗಳನ್ನು ತೆಗೆದುಹಾಕುತ್ತಿದ್ದಂತೆಯೇ, ಎಲ್ಲಾ ಮುನ್ನೆಚ್ಚರಿಕೆಗಳನ್ನು ಜನರು ತೆಗೆದುಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸ್ವಾಮಿನಾಥನ್ ಹೇಳಿದರು.
"ನಾವು ಈ ವಿಷಯವನ್ನು ಪದೇ ಪದೇ ಹೇಳುತ್ತಿದ್ದೇವೆ, ನಿಜವಾಗಿಯೂ ನೀವು ದೊಡ್ಡ ಮಟ್ಟದಲ್ಲಿ ನಡವಳಿಕೆಯ ಬದಲಾವಣೆಯನ್ನು ಬಯಸಿದರೆ, ಜನರು ಮುಖಗವಸುಗಳನ್ನು ಧರಿಸಿ ಕೆಲವು ಕೆಲಸಗಳನ್ನು ಮಾಡಲು ಕೇಳುವ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.
ಭಾರತದ ಅನೇಕ ನಗರ ಪ್ರದೇಶಗಳಲ್ಲಿ, ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಅಸಾಧ್ಯ, ಜನರು ಹೊರಗಿರುವಾಗ, ಕಚೇರಿ ವ್ಯವಸ್ಥೆಗಳಲ್ಲಿ, ಸಾರ್ವಜನಿಕ ಸಾರಿಗೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತವಾದ ಮುಖಗವಸುಗಳನ್ನು ಧರಿಸುವುದು ಬಹಳ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.
"ಕೆಲವು ರಾಜ್ಯಗಳು ತೆರೆಯುವ ಬಗ್ಗೆ ಯೋಚಿಸುತ್ತಿರುವುದರಿಂದ, ಪ್ರತಿ ಸಂಸ್ಥೆ, ಸಂಘಟನೆ, ಕೈಗಾರಿಕೆ ಮತ್ತು ವಲಯವು ಕಾರ್ಯನಿರ್ವಹಣೆಗೆ ಅನುಮತಿ ಪಡೆಯುವ ಮೊದಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಯೋಚಿಸಬೇಕಾಗಿದೆ ಮತ್ತು ಅದು ಎಂದಿಗೂ ಸಾಮಾನ್ಯ ಸ್ಥಿತಿಗೆ ಬರುವುದಿಲ್ಲ’ ಎಂದು ಅವರು ನುಡಿದರು.
ಮನೆಯಿಂದ ಕೆಲಸ ಮಾಡುವುದನ್ನು ಅನೇಕ ವೃತ್ತಿಗಳಲ್ಲಿ ಪ್ರೋತ್ಸಾಹಿಸಬಹುದು ಆದರೆ ಹಲವಾರು ಉದ್ಯೋಗಗಳಲ್ಲಿ ಜನರು ಕೆಲಸಕ್ಕೆ ಹೋಗಬೇಕಾಗುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಜನರು ತಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುವ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು. "ಸಂವಹನ ಮತ್ತು ನಡವಳಿಕೆಯ ಬದಲಾವಣೆಯು ಈ ಇಡೀ ಕಸರತ್ತಿನ ಬಹುದೊಡ್ಡ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.
No comments:
Post a Comment