Friday, June 12, 2020

ಕೊರೋನಾ: ಎರಡನೇ ದಿನವೂ ಚೇತರಿಕೆ ಅಧಿಕ

ಕೊರೋನಾ: ಎರಡನೇ ದಿನವೂ ಚೇತರಿಕೆ ಅಧಿಕ

ನವದೆಹಲಿ: ವಿಶೇಷವಾಗಿ ಮುಂಬೈ ಮತ್ತು ದೆಹಲಿಯಲ್ಲಿ ಪ್ರಕರಣಗಳ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿ ಕೊರೋನವೈರಸ್ ಸೋಂಕು ಸಾಮುದಾಯಿಕ ಪ್ರಸರಣ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ 2020 ಜೂನ್ 11ರ ಗುರುವಾರ ಸ್ಪಷ್ಟ ಪಡಿಸಿತು.

ಮಧ್ಯೆ ಎರಡನೇ ದಿನವೂ ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಗುಣಮುಖರಾಗಿ ಚೇತರಿಸಿಕೊಂಡವರ ಸಂಖ್ಯೆ ಹಿಂದಕ್ಕೆ ಹಾಕಿತು. .೩೭ ಲಕ್ಷ ಸಕ್ರಿಯ ಪ್ರಕರಣಗಳಿಗೆ ಬದಲಾಗಿ .೪೧ ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

"ಭಾರತವು ದೊಡ್ಡ ದೇಶ, ಅದಕ್ಕೆ ಹೋಲಿಸಿದರೆ ಹರಡುವಿಕೆ ಪ್ರಮಾಣ ತುಂಬಾ ಕಡಿಮೆ. ಭಾರತದಲ್ಲಿ  ಸಮುದಾಯ ಪ್ರಸರಣ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದರು.

ರೋಗದ ತ್ವರಿತ ಹರಡುವಿಕೆಯನ್ನು ತಡೆಗಟ್ಟುವಲ್ಲಿ ದಿಗ್ಬಂಧನ (ಲಾಕ್ಡೌನ್) ಕ್ರಮಗಳುಯಶಸ್ವಿಯಾಗಿದೆ ಎಂದು ಉನ್ನತ ವೈದ್ಯಕೀಯ ಸಂಸ್ಥೆಯ ಅಧಿಕಾರಿ ಒತ್ತಿಹೇಳಿದರು.

" ೧೫ ಜಿಲ್ಲೆಗಳ ಜನಸಂಖ್ಯೆಯ ಶೇಕಡಾ .೭೩% ಮಂದಿಯಲ್ಲಿ ರೋಗ ಹರಡದೇ ಇರುವುದನ್ನು ನಾವು ಕಂಡುಕೊಂಡಿದ್ದೇವೆ. ದಿಗ್ಬಂಧನ ಕ್ರಮಗಳು ರೋಗದ ಹರಡುವಿಕೆಯನ್ನು ಕಡಿಮೆ ಇರಿಸಲು ಮತ್ತು ವೇಗವಾಗಿ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದು ಇದರ ಅರ್ಥ ಎಂದು ಭಾರ್ಗವ ಹೇಳಿದರು.

ಸಮುದಾಯ ಪ್ರಸರಣ ಎಂದರೆ ರೋಗವು ಅದರ ಮೂರನೇ ಹಂತದಲ್ಲಿದೆ ಮತ್ತು ಅದರ ಮೂಲದ ಮೂಲ ಗೊತ್ತಾಗುವುದಿಲ್ಲ ಎಂದರ್ಥ. ಸಮುದಾಯ ಪ್ರಸರಣದಲ್ಲಿ ಸೋಂಕಿತ ಜನರು, ಪ್ರದೇಶಗಳಿಗೆ ಪ್ರಯಾಣ ಅಥವಾ ಸಂಪರ್ಕದಂತಹ ಯಾವುದೇ ಇತಿಹಾಸವಿಲ್ಲದ ಜನರಿಗೆ ಸೋಂಕು ತಗುಲಬಹುದು ಎಂದು ಅವರು ವಿವರಿಸಿದರು.

ಮೊದಲ ಹಂತದಲ್ಲಿ, ರೋಗವು ಸಾಂಕ್ರಾಮಿಕ ರೂಪವನ್ನು ಪಡೆಯುತ್ತದೆ. ವೈರಸ್ ಸ್ಥಳೀಯವಾಗಿ ಹರಡಲು ಪ್ರಾರಂಭಿಸಿದಾಗ ಎರಡನೇ ಹಂತ. ಮೂರನೇ ಹಂತವು ಸಮುದಾಯ ಪ್ರಸರಣವಾಗಿದೆ.

ಮಧ್ಯೆ, ತಮಿಳುನಾಡಿನಲ್ಲಿ, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಕೋವಿಡ್ -೧೯ ಸಾವುಗಳನ್ನು ವರದಿ ಮಾಡುವಲ್ಲಿ ತಮ್ಮ ಸರ್ಕಾರ ಪಾರದರ್ಶಕವಾಗಿದೆ ಮತ್ತು ಯಾರೊಬ್ಬರೂ ಮಾಹಿತಿಯನ್ನು ಮರೆಮಾಚಲು ಸಾಧ್ಯವಿಲ್ಲ, ರಾಜ್ಯದಲ್ಲಿ ಕೊರೋನವೈರಸ್ಸಿನ ಸಮುದಾಯ ಹರಡುವಿಕೆ ಇಲ್ಲ ಎಂದು ಪ್ರತಿಪಾದಿಸಿದರು.

ಸಾವಿನ ಬಗ್ಗೆ ಸುಳ್ಳು ವರದಿಗಳನ್ನು ನೀಡಲಾಗುತ್ತಿದೆ ಎಂಬುದನ್ನು ಅವರು ನಿರಾಕರಿಸಿದರು.

ತಮಿಳುನಾಡಿನಲ್ಲಿ ಬುಧವಾರದವರೆಗೆ ಸತತ ನಾಲ್ಕು ದಿನಗಳಿಂದ ಪ್ರತಿದಿನ ,೫೦೦ ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ ೩೬,೦೦೦ದ ಗಡಿ ದಾಟಿದೆ.

ದೆಹಲಿಯಲ್ಲಿ ಸಮುದಾಯದಲ್ಲಿ ಪ್ರಸರಣವಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬುಧವಾರ ಪುನರುಚ್ಚರಿಸಿದ್ದರು.

ಆದರೆ "ಸಮುದಾಯ ಪ್ರಸರಣ" ಎಂದು ಘೋಷಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ದೆಹಲಿ ಸಚಿವರು, ಒಂದು ದಿನದ ಹಿಂದೆ ದೆಹಲಿ ವಿಪತ್ತು ಪ್ರಾಧಿಕಾರದ ಸಭೆಯ ನಂತg ಹೇಳಿದ್ದರು. ನಗರದಲ್ಲಿ ಶೇಕಡಾ ೫೦ರಷ್ಟು ಕೊರೊನಾವೈರಸ್ ಪ್ರಕರಣಗಳಲ್ಲಿ ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ತಮ್ಮ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.

ದೆಹಲಿ ಸರ್ಕಾರವು ನಗರದ ವಿಮಾನ ನಿಲ್ದಾಣಗಳಿಗೆ ಇತರ ದೇಶಗಳ ಜನರನ್ನು ಕರೆತಂದದ್ದಕ್ಕಾಗಿ ಕೇಂದ್ರವನ್ನು ದೂಷಿಸಿದೆ. "ದೆಹಲಿ ಮತ್ತು ಮುಂಬೈ ಎರಡು ನಗರUಳಿಗೆ ಇತರ ರಾಷ್ಟ್ರಗಳಿಂದ ವಿಮಾನಗಳ ಮೂಲಕ ಜನರನ್ನು ಕರೆತರಲಾಯಿತು, ಮತ್ತು ನಾವು ಅದರ ವಿರುದ್ಧ ಕೇಂದ್ರವನ್ನು ಎಚ್ಚರಿಸಿದ್ದೆವು. ಆದರೆ ದೆಹಲಿಯಲ್ಲಿ ವಿಮಾನಗಳು ಇಳಿಯುವುದನ್ನು ತಪ್ಪಿಸಲು ಅವರು ಏನೂ ಮಾಡಲಿಲ್ಲ" ಎಂದು ಜೈನ್ ಹೇಳಿದ್ದರು.

ದೆಹಲಿ ಮತ್ತು ಮುಂಬೈಯಂತಹ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಸಮುದಾಯ ಪ್ರಸರಣವನ್ನು ಸೂಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಕೆಲವು ವ್ಯಾಖ್ಯಾನಕಾರರು ಭಾರತವು ಬಹುಬೇಗನೇ ದಿಗ್ಬಂಧನಕ್ಕೆ (ಲಾಕ್ಡೌನ್) ಹೋಯಿತು ಎಂದು ಹೇಳುತ್ತಾರೆ. ಇತರ ದೇಶಗಳು, ತಮ್ಮ ರೋಗದ ಪ್ರಮಾಣ ಕಡಿಮೆಯಾದಾಗ ತಮ್ಮ ಲಾಕ್ಡೌನ್ ಅನ್ನು ತೆಗೆದುಹಾಕಿದವು. ಆದರೆ, ಇಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವಾಗ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಇಂಗ್ಲೆಂಡನ್ನು ಹಿಂದಿಕ್ಕಲಿದೆಯೇ?

ದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸುಮಾರು ೧೦,೦೦೦ದ ಸಮೀಪಕ್ಕೆ ಬರುತ್ತಿದ್ದು, ಇದರಿಂದಾಗಿ ಅತಿಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಇಂಗ್ಲೆಂಡನ್ನು ಹಿಂದಕ್ಕೆ ಹಾಕುವ ಲಕ್ಷಣಗಳು ಗೋಚರಿಸುತ್ತಿವೆ.

ಅತಿಬಾಧಿತ ರಾಷ್ಟ್ರಗಳ ಸಾಲಿನಲ್ಲಿ ೫ನೇ ಸ್ಥಾನಕ್ಕೆ ಏರಿದ ಬಳಿಕ ಕಳೆದ ದಿನಗಳಿಂದ ಪ್ರತಿದಿನ ೯೦೦೦ ಪ್ರಕರಣಗಳನ್ನು ಭಾರತ ದಾಖಲಿಸಿದ್ದು ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ .೭೮ ಲಕ್ಷ ದಾಟಿದೆ. ದೇಶದಲ್ಲಿ ಸಾವಿನ ಸಂಖ್ಯೆ ,೧೦೨ ಕ್ಕೆ ಏರಿದೆ. ನಾಲ್ಕನೇ ಅತಿ ಬಾಧಿತ ರಾಷ್ಟ್ರವಾದ ಇಂಗ್ಲೆಂಡಿನಲ್ಲಿ .೯೧ ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ ಗುರುವಾರ ಎರಡನೇ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿತು. ಒಟ್ಟು ಪ್ರಕರಣಗಳಲ್ಲಿ .೩೭ ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾದ .೪೧ ಲಕ್ಷಕ್ಕೂ ಹೆಚ್ಚು ಜರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ಆದಾಗ್ಯೂ, ಇದು ಸಾಂಕ್ರಾಮಿಕ ರೋಗದ ಅಂತ್ಯದ ಆರಂಭವಾಗಲೀ ಅಥವಾಶಿಖರದ ಆಗಮನವಾಗಲೀ ಅಲ್ಲ. ಈದಿನದಿಂದ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತ್ತದೆ ಎಂಬುದೂ ಇದರ ಅರ್ಥವಲ್ಲ ಎಂದು ತಜ್ಞರು ಹೇಳಿದ್ದಾರೆ.

ಏತನ್ಮಧ್ಯೆ, ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಭಾರತವು ಕೋವಿಡ್-೧೯ ಪತ್ತೆಗಾಗಿ ೫೦ ಲಕ್ಷಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ಮಾಡಿದೆ. ಪ್ರತಿದಿನ ಸುಮಾರು . ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೭೪,೯೯,೫೦೯, ಸಾವು ,೧೯,೯೫೦ ಚೇತರಿಸಿಕೊಂಡವರು- ೩೮,೦೬,೨೧೪

ಅಮೆರಿಕ ಸೋಂಕಿತರು ೨೦,೬೯,೯೭೩, ಸಾವು ,೧೫,೨೪೨

ಸ್ಪೇನ್ ಸೋಂಕಿತರು ,೮೯,೩೬೦, ಸಾವು ೨೭,೧೩೬

ಇಟಲಿ ಸೋಂಕಿತರು ,೩೫,೭೬೩, ಸಾವು ೩೪,೧೧೪

ಜರ್ಮನಿ ಸೋಂಕಿತರು ,೮೬,೫೫೭, ಸಾವು ,೮೪೫

ಚೀನಾ ಸೋಂಕಿತರು ೮೩,೦೫೭, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೯೧,೪೦೯, ಸಾವು ೪೧,೨೭೯

ಭಾರತ ಸೋಂಕಿತರು ,೯೦,೪೮೧, ಸಾವು ,೨೦೬

ಅಮೆರಿಕದಲ್ಲಿ ೧೧೨, ಇರಾನಿನಲ್ಲಿ ೭೮, ಬೆಲ್ಜಿಯಂನಲ್ಲಿ , ಇಂಡೋನೇಷ್ಯ ೪೧, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೭೪, ಪಾಕಿಸ್ತಾನದಲ್ಲಿ ೧೦೧, ಮೆಕ್ಸಿಕೋದಲ್ಲಿ ೭೦೮, ಒಟ್ಟಾರೆ ವಿಶ್ವಾದ್ಯಂತ ,೮೧೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೪೩,೪೨೪ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement