Tuesday, June 23, 2020

ದೆಹಲಿಯಲ್ಲಿ ಚೀನಾ ಕೋವಿಡ್ ಕೇಂದ್ರವನ್ನು ಮೀರಿಸುವ ಕೇಂದ್ರ

ದೆಹಲಿಯಲ್ಲಿ ಚೀನಾ ಕೋವಿಡ್ ಕೇಂದ್ರವನ್ನು ಮೀರಿಸುವ ಕೇಂದ್ರ

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಕೋವಿಡ್ ರೋಗಿಗಳಿಗಾಗಿ ಸ್ಥಾಪಿಸಲಾಗುತ್ತಿರುವ ಭಾರತದ ಅತಿದೊಡ್ಡ ಚಿಕಿತ್ಸಾ ಸೌಲಭ್ಯವನ್ನು ನಡೆಸಲು ಗೃಹ ಸಚಿವ ಅಮಿತ್ ಶಾ ಅವರು ಭಾರತ ಟಿಬೆಟ್ ಗಡಿ ಪೊಲೀಸ್ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್-ಐಟಿಬಿಪಿ) ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾರೆ.

ಚಟ್ಟರ್‌ಪುರದ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಸಂಕೀರ್ಣದಲ್ಲಿ ಸ್ಥಾಪಿಸಲಾಗಿರುವ ಸೌಲಭ್ಯವು ೧೦,೨೦೦ ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸಾ ಅವಕಾಶ ಕಲ್ಪಿಸುತ್ತದೆ.

೧೫ ಫುಟ್‌ಬಾಲ್ ಮೈದಾನಗಳ ಗಾತ್ರದಷ್ಟು ದೊಡ್ಡದಾದ ಚಟ್ಟರ್‌ಪುರ ಸೌಲಭ್ಯವನ್ನು ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆ ಎಂಬುದಾಗಿ ಹೆಸರಿಸಲಾಗಿದೆ.

"ಇದು ೧೦೦೦ ಕೋವಿಡ್ ರೋಗಿಗಳಿಗಾಗಿ ಚೀನಾದ ಲೀಶೆನ್ಶಾನ್‌ನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ಸೌಲಭ್ಯಕ್ಕಿಂತ ೧೦ ಪಟ್ಟು ದೊಡ್ಡದಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಫೆಬ್ರವರಿಯಲ್ಲಿ, ಚೀನಾದ ರಾಜತಾಂತ್ರಿಕರು ಆಸ್ಪತ್ರೆಯ ನಿರ್ಮಾಣದ ವೀಡಿಯೊವನ್ನು ಹೊರಹಾಕಿದರು, ಆಗ ಅದನ್ನು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿತ್ತು.

ಕೋವಿಡ್ -೧೯ ರೋಗಿಗಳಿಗೆ ಸ್ಥಳಾವಕಾಶ ಮತ್ತು ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ತ್ವರಿತವಾಗಿ ವಿಸ್ತರಿಸಲು ದೆಹಲಿ ಸರ್ಕಾgಕ್ಕೆ ಸಹಾಯ ಮಾಡುವ ಸಲುವಾಗಿ ಸ್ವಯಂಸೇವಾ ವಲಯವನ್ನು ಸಂಪರ್ಕಿಸುವಂತೆ ಗೃಹ ಸಚಿವ ಅಮಿತ್ ಶಾ, ತಿಂಗಳ ಆರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಸೂಚಿಸಿದ್ದರು.

ಹಿಂದೆ ದೇಶದ ಇತರ ಭಾಗಗಳಲ್ಲಿನ ಕೆಲವು ಸೌಲಭ್ಯಗಳಲ್ಲಿ ವಲಸಿಗರಿಗಾಗಿ ಶಿಬಿರಗಳನ್ನು ನಡೆಸುತ್ತಿದ್ದ ಆಧ್ಯಾತ್ಮಿಕ ಸಂಸ್ಥೆ ಸತ್ಸಂಗ್, ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ಮನವಿಗೆ ಮೊತ್ತ ಮೊದಲನೆಯದಾಗಿ ಸ್ಪಂದಿಸಿತು.

ರೋಗಿಗಳಿಗೆ ಊಟವನ್ನು ತಾನು ಒದಗಿಸುವುದಾಗಿ ಎಂದು ಸಂಸ್ಥೆ ಸರ್ಕಾರಕ್ಕೆ ತಿಳಿಸಿದೆ.

ವಾರದ ಕೊನೆಯಲ್ಲಿ ಬಹುತೇಕ ಗುರುವಾರ ಶಾ ಅವರು ಸೌಲಭ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ, ಅಷ್ಟರ ಒಳಗೆ ಮೊದಲ ,೦೦೦ ಹಾಸಿಗೆಗಳನ್ನು ಸಿದ್ಧ ಪಡಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಉಳಿದ ಹಾಸಿಗೆಗಳನ್ನು ಜುಲೈ ರೊಳಗೆ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸೋಂಕಿನ ಸವಾಲನ್ನು ಎದುರಿಸಲು ನಗರದ ಮೂಲಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಕೇಂದ್ರ ಗೃಹ ಸಚಿವರು ವಹಿಸುತ್ತಿರುವ ಪಾತ್ರವನ್ನು ಇದು ಸಂಕೇತಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ದೆಹಲಿ ಸರ್ಕಾರವು ತಿಂಗಳ ಅಂತ್ಯದ ವೇಳೆಗೆ ನಗರದ ಕೋವಿಡ್ ಎಣಿಕೆ ಲಕ್ಷ ಪ್ರಕರಣಗಳಿಗೆ ಏರಿಕೆಯಾಗಲಿದೆ ಎಂದು ಊಹಿಸಿತ್ತು, ಅಗ ಸುಮಾರು ೧೫,೦೦೦ ಹಾಸಿಗೆಗಳು ಬೇಕಾಗುತ್ತದೆ ಎಂದು ಅದು ಹೇಳಿತ್ತು.

ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ನಂತರ ಮಾದರಿಯು ಹರಡುವಿಕೆಯ ವ್ಯಾಪ್ತಿಯನ್ನು ಅತಿಯಾಗಿ ಅಂದಾಜು ಮಾಡಿರಬಹುದು ಅಥವಾ ಅತ್ಯಂತ ನಿಕೃಷ್ಟ ಸನ್ನಿವೇಶಕ್ಕೆ ಪೂರ್ವಸಿದ್ಧತೆಗಾಗಿ ಇಂತಹ ಸೂಚನೆ ನೀಡಿರಬಹುದು.

ಕೋವಿಡ್ ಕೇಂದ್ರದ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಐಟಿಬಿಪಿಯನ್ನು ಶಾ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೧೦,೨೦೦ ಹಾಸಿಗೆಗಳು ಸಿದ್ಧವಾದ ನಂತರ, ಸುಮಾರು ,೪೦೦ ದಾದಿಯರನ್ನು ಹೊರತುಪಡಿಸಿ ೮೦೦ ಸಾಮಾನ್ಯ ವೈದ್ಯರು ಮತ್ತು ೭೦ ತಜ್ಞ ವೈದ್ಯರ ಅವಶ್ಯಕತೆ  ಕೇಂದ್ರಕ್ಕೆ ಇದೆ.

No comments:

Advertisement