ಭಾರತ: ಕೊರೋನಾ ಚೇತರಿಕೆ ಶೇ.೬೨.೭೨, ಸಾವು ೨೨,೧೨೩
ನವದೆಹಲಿ: ಭಾರತದಲ್ಲಿ ಒಂದೇ ದಿನ ೨೭,೧೧೪ ಹೊಸ ಪ್ರಕರಣಗಳೊಂದಿಗೆ ಕೋವಿಡ್ -೧೯ ಸೋಂಕು ಪ್ರಕರಣಗಳ ಸಂಖ್ಯೆ 2020 ಜುಲೈ 11ರ ಶನಿವಾರ ೮.೨ ಲಕ್ಷವನ್ನು ತಲುಪಿತು. ಸಾವಿನ ಸಂಖ್ಯೆ ೨೨,೧೨೩ ಕ್ಕೆ ಏರಿತು.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸೋಂಕು ಪ್ರಕರಣಗಳ
ಸಂಖ್ಯೆ ಏಳು ಲಕ್ಷವನ್ನು ತಲುಪಿದ ಬಳಿಕ ಕೇವಲ ೪ ದಿನಗಳಲ್ಲಿ ಶನಿವಾರ ೮ ಲಕ್ಷದ ಗಡಿ ದಾಟಿದೆ.
ದೇಶದಲ್ಲಿ ಸತತ ಎಂಟನೇ ದಿನವೂ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೨೨,೦೦೦ಕ್ಕಿಂತ ಹೆಚ್ಚಾಗಿವೆ.
ಶನಿವಾರ ಬೆಳಿಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, ೨೪ ಗಂಟೆಗಳಲ್ಲಿ
೫೧೯ ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ ೨೨,೧೨೩ ಕ್ಕೆ ಏರಿತು.
ಒಟ್ಟು ಕೊರೋನವೈರಸ್ ಸೋಂಕಿನ ಸಂಖ್ಯೆ ಶನಿವಾರ ೮,೨೦,೯೧೬ಕ್ಕೆ ಏರಿದರೂ ಆಶಾದಾಯಕ ಬೆಳವಣಿಗೆಯಲ್ಲಿ ಚೇತರಿಕೆಯ ಪ್ರಮಾಣ ಕೂಡಾ ಗಣನೀಯವಾಗಿ ಹೆಚ್ಚಿದೆ. ಒಟ್ಟು ಸೋಂಕು
ಪ್ರಕರಣಗಳಲ್ಲಿ ೫,೧೫,೩೮೫ ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಸಕ್ರಿಯ
ಪ್ರಕರಣಗಳ ಸಂಖ್ಯೆ ಕೇವಲ ೨,೮೩,೪೦೭ ಆಗಿದೆ ಎಂದು ಅಂಕಿಸಂಖ್ಯೆಗಳು ತಿಳಿಸಿವೆ.
"ದೇಶದಲ್ಲಿ
ಇದುವರೆಗೆ ಸುಮಾರು ಶೇಕಡಾ ೬೨.೭೮ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವರದಿಯಾದ ೫೧೯ ಹೊಸ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೨೬, ತಮಿಳುನಾಡಿನಿಂದ
೬೪ ತಮಿಳುನಾಡು, ಕರ್ನಾಟಕದಿಂದ ೫೭,
ದೆಹಲಿಯಿಂದ ೪೨, ಉತ್ತರಪ್ರದೇಶದಿಂದ
೨೭, ಪಶ್ಚಿಮ ಬಂಗಾಳದಿಂದ
೨೬, ಆಂಧ್ರ ಪ್ರದೇಶದಿಂದ
೧೫, ಗುಜರಾತಿನಿಂದ ೧೪,
ತೆಲಂಗಾಣದಿಂದ ೮, ಮತ್ತು ರಾಜಸ್ಥಾದಿಂದ ೬ ಪ್ರಕರಣಗಳು ವರದಿಯಾಗಿವೆ.
ಅಸ್ಸಾಂ, ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ೫ ಸಾವುಗಳು ಸಂಭವಿಸಿವೆ. ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ಪಂಜಾಬಿನಲ್ಲಿ ತಲಾ ೪ ಸಾವುಗಳು ಸಂಭವಿಸಿವೆ, ಹರಿಯಾಣ ಮತ್ತು ಪುದುಚೇರಿಯಿಂದ ತಲಾ ೩ ಸಾವುಗಳು ವರದಿಯಾಗಿದ್ದರೆ, ಇಬ್ಬರು ವ್ಯಕ್ತಿಗಳು ಛತ್ತೀಸ್ಗಢದದಲ್ಲಿ ವೈರಲ್ ಸೋಂಕಿಗೆ ಬಲಿಯಾಗಿದ್ದಾರೆ.
No comments:
Post a Comment